ಕಳವು ಆರೋಪ; ದಲಿತರಿಬ್ಬರ ಗುಪ್ತಾಂಗಕ್ಕೆ ಸ್ಕ್ರೂಡ್ರೈವರ್ ಚುಚ್ಚಿದ ದುರುಳರು

Kannadaprabha News   | Asianet News
Published : Feb 21, 2020, 10:21 AM IST
ಕಳವು ಆರೋಪ; ದಲಿತರಿಬ್ಬರ  ಗುಪ್ತಾಂಗಕ್ಕೆ ಸ್ಕ್ರೂಡ್ರೈವರ್ ಚುಚ್ಚಿದ ದುರುಳರು

ಸಾರಾಂಶ

ರಾಜಸ್ಥಾನದಲ್ಲಿ ದಲಿತರಿಬ್ಬರ ಮೇಲೆ ಆಘಾತಕಾರಿ ದೌರ್ಜನ್ಯ |  ಬೈಕ್‌ ಸವೀರ್‍ಸ್‌ ಸೆಂಟರ್‌ನಲ್ಲಿ 500 ರು. ಕದ್ದ ಆರೋಪ |  ಬಟ್ಟೆಬಿಚ್ಚಿಸಿ ಗುದದ್ವಾರದೊಳಗೆ ಸ್ಕೂ್ರಡ್ರೈವರ್‌ ಚುಚ್ಚಿ ಹಲ್ಲೆ |  7 ದುಷ್ಕರ್ಮಿಗಳ ಬಂಧನ, ಕ್ರಮಕ್ಕೆ ರಾಹುಲ್‌ ಸೂಚನೆ

ಜೈಪುರ (ಫೆ. 21): ಕಳವು ಮಾಡಿದ ಆರೋಪ ಹೊರಿಸಿ ದಲಿತ ಯುವಕರಿಬ್ಬರನ್ನು ಹಿಗ್ಗಾಮುಗ್ಗಾ ಹೊಡೆದು ಅಮಾನವೀಯ ದೌರ್ಜನ್ಯ ಎಸಗಿದ ಘಟನೆ ರಾಜಸ್ಥಾನದ ನಾಗೌರ್‌ನಲ್ಲಿ ನಡೆದಿದೆ. ಫೆಬ್ರವರಿ 16ರಂದೇ ಈ ಘಟನೆ ನಡೆದಿದ್ದು, ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಬಳಿಕ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ 7 ಮಂದಿಯನ್ನು ಬಂಧಿಸಿದ್ದಾರೆ.

ಆಗಿದ್ದೇನು?:

ದಲಿತ ಯುವಕರಿಬ್ಬರು ನಾಗೌರ್‌ ಸಮೀಪದ ಕರ್ನು ಎಂಬಲ್ಲಿ ತಮ್ಮ ದ್ವಿಚಕ್ರ ವಾಹನದ ಸವೀರ್‍ಸ್‌ಗೆ ಹೋಗಿದ್ದರು. ಆಗ ಸವೀರ್‍ಸ್‌ ಸೆಂಟರ್‌ನಲ್ಲಿ ಅವರು 500 ರು. ಹಣ ಕಳವು ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಯಿತು. ಕೂಡಲೇ ಗುಂಪೊಂದು ಅಲ್ಲಿಗೆ ಆಗಮಿಸಿ ಇಬ್ಬರನ್ನೂ ಹಿಗ್ಗಾಮುಗ್ಗಾ ಹೊಡೆಯಿತು.

‘100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು’

ಜೊತೆಗೆ ಒಬ್ಬನ ಬಟ್ಟೆಬಿಚ್ಚಿಸಿದ ಹಲ್ಲೆಕೋರರು, ಪೆಟ್ರೋಲ್‌ನಲ್ಲಿ ಸ್ಕೂ್ರಡ್ರೈವರ್‌ ಅದ್ದಿ, ಅದನ್ನು ಆತನ ಗುದದ್ವಾರಕ್ಕೆ ಚುಚ್ಚಿದರು. ಪೆಟ್ರೋಲನ್ನೂ ಗುದದ್ವಾರದಲ್ಲಿ ಸುರಿದರು. ‘ನಮ್ಮನ್ನು ಬಿಡಿ’ ಎಂದು ಯುವಕರು ಗೋಗರೆದರೂ ಉದ್ರಿಕ್ತರು ಅದನ್ನು ಕೇಳಲಿಲ್ಲ ಎಂದು ಆರೋಪಿಸಲಾಗಿದೆ.

ರಾಜಕೀಯ ಕೆಸರೆರಚಾಟ:

ಈ ಘಟನೆ ಈಗ ರಾಷ್ಟ್ರಮಟ್ಟದಲ್ಲೂ ಸುದ್ದಿ ಮಾಡಿದೆ. ‘ಇದು ಭಯಾನಕ ಘಟನೆ. ದಾಳಿಕೋರರ ಮೇಲೆ ಕ್ರಮ ಜರುಗಿಸಿ’ ಎಂದು ರಾಜಸ್ಥಾನ ಸರ್ಕಾರಕ್ಕೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ. ಆದರೆ, ‘ಕಾಂಗ್ರೆಸ್‌ ರಾಜಸ್ಥಾನದಲ್ಲಿ ಗೆದ್ದ ನಂತರ ದಲಿತ ದೌರ್ಜನ್ಯ ಹೆಚ್ಚುತ್ತಲೇ ಇದೆ. ರಾಜ್ಯದ ಮುಖ್ಯಮಂತ್ರಿಗಳೇ ಇಲ್ಲಿ ಗೃಹ ಮಂತ್ರಿ. ಅವರೇ ಘಟನೆಗೆ ಜವಾಬ್ದಾರ’ ಎಂದು ಬಿಜೆಪಿ ಮುಖಂಡ ಅಮಿತ್‌ ಮಾಳವೀಯ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌