
ಸುಮಾರು 300 ವರ್ಷಗಳ ಹಿಂದೆ ಧ್ಯಾನ ನಿರತರಾಗಿದ್ದ ಯೋಗಿಯೊಬ್ಬರು ಇನ್ನೂ ಜೀವಂತವಾಗಿ ಪತ್ತೆಯಾಗಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ, ಮೈಮೇಲೆ ಮಣ್ಣು ಬಿದ್ದಂತೆ ಕಾಣುವ ವಯೋವೃದ್ಧರ ಗ್ರಾಫಿಕ್ ವಿಡಿಯೋವನ್ನು ಪೋಸ್ಟ್ ಮಾಡಿ, ‘ ತಮಿಳುನಾಡಿನ ವಲ್ಲಿಯಾಯ್‌ನಲ್ಲಿ ವಲ್ಲಿಯೂರ್ ದೇವಾಲಯ ಪುನರುಜ್ಜೀವನ ಉದ್ದೇಶದಿಂದ ಮಣ್ಣು ಅಗೆಯುವ ವೇಳೆ 300 ವರ್ಷದ ಹಿಂದೆ ಧ್ಯಾನಸ್ಥರಾಗಿದ್ದ ಯೋಗಿಯೊಬ್ಬರು ಧ್ಯಾನಸ್ಥ ಸ್ಥಿತಿಯಲ್ಲಿಯೇ ಜೀವಂತವಾಗಿ ಲಭ್ಯವಾಗಿದ್ದಾರೆ. ಓ ನಮಃ ಶಿವಾಯ ’ ಎಂದು ಒಕ್ಕಣೆ ಬರೆಯಲಾಗಿದೆ.
ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ 300 ವರ್ಷದ ಹಿಂದೆ ಧ್ಯಾನಸ್ಥರಾದ ಯೋಗಿ ಜೀವಂತವಾಗಿದ್ದಾರೆಯೇ ಎಂದು ಬೂಮ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ವಾಸ್ತವವಾಗಿ ಈ ವಿಡಿಯೋ 2019 ಜೂನ್‌ನದ್ದು. ಚರ್ಮರೋಗದಿಂದ ಬಳಲುತ್ತಿದ್ದ ಅಲೆಕ್ಸಾಂಡರ್ ಎಂಬ ವಯೋವೃದ್ಧರನ್ನು ಚಿಕಿತ್ಸೆಗಾಗಿ ಖಜಕಿಸ್ತಾನದ ಅಕ್ಟೋಬೆ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಅಲ್ಲಿನ ಸರ್ಜನ್‌ವೊಬ್ಬರು ಈ ವಿಡಿಯೋ ಮಾಡಿದ್ದರು ಎಂಬ ವಿಷಯ ತಿಳಿದಿದೆ. ಇದೇ ವಿಡಿಯೋ ಬಳಸಿ ರಷ್ಯಾದಲ್ಲೂ ಸುಳ್ಳುಸುದ್ದಿ ಹರಡಲಾಗಿತ್ತು. ಅಕ್ಟೋಬೆ ಮೆಡಿಕಲ್ ಸೆಂಟರ್ ಈ ಹಿಂದೆಯೇ ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿ, ವಿಡಿಯೋದಲ್ಲಿರುವ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ