ಇಸ್ಲಾಂ ಪ್ರಕಾರ ಹಿಂದು ವ್ಯಕ್ತಿ ಶವ ಸಮಾಧಿ; ಕುಟುಂಬದ ಮನವಿಗೆ ಸೌದಿಯಿಂದ ಭಾರತಕ್ಕೆ ಅವಶೇಷ!

By Suvarna NewsFirst Published May 12, 2021, 11:22 PM IST
Highlights
  • ಹಿಂದೂ ವ್ಯಕ್ತಿ ಶವವನ್ನು ಮುಸ್ಲಿಂ ಸಂಪ್ರದಾಯದಂತೆ ಸಮಾಧಿ
  • ಕುಟುಂಬದ ಮನವಿಗೆ ಸ್ಪಂದಿಸಿದ ಸೌದಿ ಅರೆಬಿಯಾ
  • ಅಂತಿಮ ವಿಧಿವಿಧಾನಕ್ಕೆ ಅವಶೇಷ ಹೊರತೆಗೆದು ಭಾರತಕ್ಕೆ ರವಾನೆ
     

ನವದೆಹಲಿ(ಮೇ.12): ಮುಸ್ಲಿಂ ವಿಧಿವಿಧಾನಗಳ ಪ್ರಕಾರ ಹಿಂದೂ ವ್ಯಕ್ತಿ ಶವವನ್ನು ಸೌದಿ ಅರೆಬಿಯಾದಲ್ಲಿ ಮಣ್ಣು ಮಾಡಲಾಗಿತ್ತು. ಆದರೆ ಭಾರತದಲ್ಲಿರುವ ಕುಟುಂಬದ ಮನವಿಗೆ ಸ್ಪಂದಿಸಿದ ಸೌದಿ ಅರೆಬಿಯಾ ಶವದ ಅವಶೇಷಗಳನ್ನು ತೆಗೆಸಿ ಭಾರತಕ್ಕೆ ಕಳುಹಿಸಿದೆ.  ಈ ಮೂಲಕ ಹಿಂದೂ ವಿಧಿವಿಧಾನಗಳ ಪ್ರಕಾರ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. 

ಹುಬ್ಬಳ್ಳಿ : ಆರ್‌ಎಸ್ಸೆಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ

ಉತ್ತರ ಪ್ರದೇಶದ ಸಜೀವ್ ಕುಮಾರ್(51) ಸೌದಿ ಅರೆಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೃದಾಯಾಘಾತದಿಂದ ಸಂಜೀವ್ ಕುಮಾರ್ ನಿಧನರಾಗಿದ್ದರು. ಸೌದಿ ಅರೆಬಿಯಾ ಹಿಂದೂ ವ್ಯಕ್ತಿ ಸಂಜೀವ್ ಕುಮಾರ್ ಶವವನ್ನು ಮುಸ್ಲಿಂ ಸಂಪ್ರದಾಯದಂತೆ ಮಣ್ಣು ಮಾಡಿತ್ತು. ಈ ವಿಚಾರ ತಿಳಿದ ಸಂಜೀವ್ ಕುಮಾರ್ ಪತ್ನಿ ಅಂಜು ಶರ್ಮಾ ಕೋರ್ಟ್ ಮೊರೆ ಹೋಗಿದ್ದಾರೆ.

ಹಿಂದೂ ಸಂಪ್ರದಾಯಂತೆ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು. ಈ ಕುರಿತು ಹೈ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇತ್ತ ಕೇಂದ್ರ ಸರ್ಕಾರ  ವಿದೇಶಾಂಗ ಸಚಿವಾಲಯದ ಕಾನ್ಸುಲರ್, ಪಾಸ್‌ಪೋರ್ಟ್ ಮತ್ತು ವೀಸಾ (ಸಿಪಿವಿ) ವಿಭಾಗದ ನಿರ್ದೇಶಕ ವಿಷ್ಣು ಕುಮಾರ್ ಶರ್ಮಾಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕುಮಾರ್, ಸೌದಿ ಅರೆಬಿಯಾ ಎಲ್ಲಾ ಸಿದ್ಧತೆ ಮಾಡಿದ್ದಾರೆ.

1100 ಮೃತದೇಹ ಅಂತ್ಯಸಂಸ್ಕಾರ: ಪ್ರೀತಿಯ ಮಗಳ ಮದ್ವೆಯನ್ನೇ ಮುಂದೂಡಿದ ತಂದೆ.

ಈ ವೇಳೆ ಭಾರತೀಯ ದೂತಾವಾಸದ ಅಧಿಕೃತ ಅನುವಾದಕ ಮಾಡಿದ ಸಣ್ಣ ಎಡವಟ್ಟಿನಿಂದ ಈ ರೀತಿ ಆಗಿದೆ ಅನ್ನೋದು ಬಯಲಾಗಿದೆ. ಅನುವಾದಕ ಸಂಜೀವ್ ಕುಮಾರ್ ಮುಸ್ಲಿಂ ಎಂದು ನಮೂದಿಸಿದ್ದರು. ಆಸ್ಪತ್ರೆಯಲ್ಲಿ ಈ ರೀತಿ ದಾಖಲಾದ ಕಾರಣ ಸೌದಿ ಅರೆಬಿಯಾ ಮುಸ್ಲಿಂ ಸಂಪ್ರದಾಯದಂತೆ ಮಣ್ಣು ಮಾಡಿತ್ತು. ಭಾರತದ ಮನವಿಗೆ ಸ್ಪಂದಿಸಿದ ಸೌದಿ ಅರೆಬಿಯಾ ಮಣ್ಣು ಮಾಡಿದ ಶವ ಹೊರತೆಗೆದು ಅವಶೇಷಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ.

ಈ ಕುರಿತು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಹಿಂದೂ ವ್ಯಕ್ತಿ ಶವವನ್ನು ಹಿಂದೂ ಸಂಪ್ರದಾಯದಂತೆ ಸಂಸ್ಕಾರ ಮಾಡುವುದು ಅವರ ಕುಟುಂಬದ ಹಕ್ಕು. ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಕುಟುಂಬಕ್ಕೆ ಅವಶೇಷ ಸಿಕ್ಕಿರುವುದು ಸಮಾಧಾನ ತಂದಿದೆ. ಇದಕ್ಕೆ ನೆರವಾದ ಸೌದಿ ಅರೆಬಿಯಾ ಹಾಗೂ ವಿದೇಶಾಂಗ ಸಚಿವಾಲಯದ ಕಾನ್ಸುಲರ್ ವಿಷ್ಣು ಕುಮಾರ್‌ಗೆ ಹೈಕೋರ್ಟ್ ಧನ್ಯವಾದ ಹೇಳಿದೆ.

click me!