ನವದೆಹಲಿ(ಮೇ.12): ಭಾರತದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್, ಕರ್ಫ್ಯೂ ಸೇರಿದಂತೆ ಕಠಿಣ ನಿರ್ಬಂಧ ಹೇರಲಾಗಿದೆ. ಆದರೂ ಕೊರೋನಾ ಪ್ರಕರಣ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿಲ್ಲ. ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಲಾಕ್‌ಡೌನ್ ಅನಿವಾರ್ಯ ಎಂದಿದೆ.
ಕರ್ನಾಟಕದಲ್ಲಿ ಲಸಿಕೆಗೆ ಹಾಹಾಕಾರ: 18-44 ವರ್ಷದವರಿಗಿಲ್ಲ ವ್ಯಾಕ್ಸಿನ್!.
ಶೇಕಡಾ 10ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿರುವ ಜಿಲ್ಲೆಗಳನ್ನು ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಮಾಡುವ ಅಗತ್ಯವಿದೆ. ಹೀಗಾದಲ್ಲಿ ಮಾತ್ರ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಬಾರ್ಗವ್ ಹೇಳಿದ್ದಾರೆ.
ಐಸಿಎಂಆರ್ ಹೇಳುವ ಪ್ರಕಾರ ಶೇಕಡಾ 10ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳಿರುವ ಜಿಲ್ಲೆಗಳನ್ನು ಲಾಕ್‌ಡೌನ್‌ಗೆ ಪರಿಗಣಿಸಿದರೆ 718 ಜಿಲ್ಲೆಗಳು ಲಾಕ್ ಆಗಲಿದೆ. ಅಂದರೆ ಬಹುತೇಕ ಭಾರತ ಲಾಕ್ ಆಗಲಿದೆ. ಕೊರೋನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಅಗತ್ಯ ಎಂದು ಐಸಿಎಂಆರ್ ಒತ್ತಿ ಹೇಳಿದೆ.
ಕೊರೋನಾ 2ನೇ ಅಲೆ ಭೀಕರವಾಗಿದ್ದರೂ, ಕೇಂದ್ರ ಸರ್ಕಾರ ಲಾಕ್‌ಡೌನ್ ನಿರ್ಧಾರದತ್ತ ಮನಸ್ಸು ಮಾಡಿಲ್ಲ. ಕಳೆದ ವರ್ಷ ಲಾಕ್‌ಡೌನ್ ಪರಿಣಾಮ ಇನ್ನೂ ಗೋಚರಿಸುತ್ತಿದೆ. ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದರ ನಡುವೆ ಮತ್ತೊಂದು ಲಾಕ್‌ಡೌನ್‌ಗೆ ಕೇಂದ್ರ ಮಸ್ಸು ಮಾಡುವ ಸಾಧ್ಯತೆ ಕಡಿಮೆ.
ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಸೇರಿದಂತೆ ಪ್ರಮುಖ ರಾಜ್ಯಗಳು ಲಾಕ್‌ಡೌನ್ ಹೇರಿದೆ. ಇನ್ನು ಹಲವು ರಾಜ್ಯಗಳು ಕೊರೋನಾ ಕರ್ಪ್ಯೂ ಸೇರಿದಂತೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.