ಮೇಡ್ ಇನ್ ಇಂಡಿಯಾ ರೋಬೋಟ್ ಅಭಿವೃದ್ಧಿಪಡಿಸಿದ ರಾಜೀವ್ ಕರ್ವಾಲ್ ಕೊರೋನಾಗೆ ಬಲಿ!

By Suvarna NewsFirst Published May 12, 2021, 9:29 PM IST
Highlights
  • ಕೊರೋನಾಗೆ ಬಲಿಯಾದ ಮಿಲಾಗ್ರೋ ರೋಬೋಟ್ ಕಂಪನಿ ಸಂಸ್ಥಾಪಕ
  • ಭಾರತದಲ್ಲಿ ಸ್ವದೇಶಿ ನಿರ್ಮಿತ ರೋಬೋಟ್ ಅಭಿವೃದ್ಧಿಪಡಿಸಿದ ರಾಜೀವ್
  • ಚಿಕಿತ್ಸೆ ಫಲಕಾರಿಯಾಗದೆ ರಾಜೀವ್ ಕರ್ವಾಲ್ ನಿಧನ

ನವದೆಹಲಿ(ಮೇ.12):  ವಿದೇಶಗಳಲ್ಲಿ ರೋಬೋಟ್ ಅನ್ನೋ ಪದಗಳು ಚಾಲ್ತಿಗೆ ಬರುವ ಹೊತ್ತಿಗೆ ಭಾರತದಲ್ಲಿ ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ರೋಬೋಟ್ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ರಾಜೀವ್ ಕರ್ವಾಲ್‌ಗೆ ಸಲ್ಲಲಿದೆ. ಮಿಲಾಗ್ರೋ ರೋಬೋಟ್ ಸಂಸ್ಥೆ ಹುಟ್ಟುಹಾಕಿದ ರಾಜೀವ್ ಕರ್ವಾಲ್ ಇದೀಗ ಕೊರೋನಾಗೆ ಬಲಿಯಾಗಿದ್ದಾರೆ. 

ಸಹೋದರನ ಆತ್ಮಹತ್ಯೆ ದುಃಖ ಮಾಸುವ ಮುನ್ನ ತಂದೆ ಕೊರೋನಾಗೆ ಬಲಿ; ಕಣ್ಣೀರಿಟ್ಟ ಚೇತನ್ ಸಕಾರಿಯಾ!

ಕೊರೋನಾ ವೈರಸ್ ಕಾರಣ ಕಳೆದೊಂದು ವಾರದಿಂದ ಆಸ್ಪತ್ರೆಗೆ  ದಾಖಲಾಗಿದ್ದ ರಾಜೀವ್ ಕರ್ವಾಲ್ ವೆಂಟಿಲೇಟರ್ ನೆರವು ಪಡೆದುಕೊಂಡಿದ್ದರು. ಆದರೆ ಆರೋಗ್ಯ ಕ್ಷೀಣಿಸಿತು. ಇಂದು(ಮೇ.12) ಬೆಳಗ್ಗೆ ರಾಜೀವ್ ಕರ್ವಾಲ್ ಕೊರೋನಾದಿಂದ ನಿಧನರಾಗಿದ್ದಾರೆ.

ಕೊರೋನಾ ವಕ್ಕರಿಸಿದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರೋಬೋಟ್ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ನೆರವು ನೀಡಿದ್ದರು ಕೋವಿಡ್ ಕಾಲದಲ್ಲಿ ಮಿಲಾಗ್ರೋ ಸಂಸ್ಥೆ ಅಭಿವೃದ್ಧಿಪಡಿಸಿದ ಹ್ಯುಮಾನಾಯ್ಡ್ ELF ರೋಬೋಟ್ ನಿಯೋಜಿಸಲಾಗಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಈ ರೋಬೋಟ್ ನಿಯೋಜಿಸಲಾಗಿತ್ತು. 

ಸುಶಾಂತ್ ಸಹನಟಿ ಅಭಿಲಾಷ ಕೊರೋನಾದಿಂದ ಸಾವು..!.

ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದ ರಾಜೀವ್ ಕರ್ವಾಲ್ ಇದೀಗ ಕೊರೋನಾಗೆ ಬಲಿಯಾಗಿರುವುದು ವಿಷಾದ.  ಭಾರತದಲ್ಲಿ LG, ಒನಿಡಾ, ಫಿಲಿಪ್ಸ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಬಿಲ್ಡಿಂಗ್‌ನಲ್ಲಿ ರಾಜೀವ್ ಕರ್ವಾಲ್ ಪಾತ್ರ ಪ್ರಮುಖವಾಗಿದೆ. ರಿಲಾಯನ್ಸ್ ಡಿಜಿಟಲ್ ಅಧ್ಯಕ್ಷ ಹಾಗೂ ಸಿಇಓ ಆಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ರಾಜೀವ್ ಕರ್ವಾಲ್ ಮಿಲಾಗ್ರೋ ರೋಬೋಟ್ ಸಂಸ್ಥೆ ಹುಟ್ಟುಹಾಕಿದರು. 2012 ರ ಹೊತ್ತಿಗೆ ಕಂಪನಿಯು ವಸತಿ ಮತ್ತು ಕೈಗಾರಿಕಾ ಬಳಕೆಗಾಗಿ ರೋಬೋಟ್‌ಗಳನ್ನು ತಯಾರಿಸಲು ಆರಂಭಿಸಿತು.

click me!