ವಸಾಹತುಶಾಹಿ ಸಂಕೋಲೆ ಮುರಿದಿದ್ದೇವೆ, ಧಾರ್ಮಿಕ ಕ್ಷೇತ್ರಗಳು ಶರವೇಗದಲ್ಲಿ ಅಭಿವೃದ್ಧಿ ಆಗುತ್ತಿವೆ: Modi

By Kannadaprabha NewsFirst Published Oct 12, 2022, 10:15 AM IST
Highlights

ಗುಲಾಮಗಿರಿ ಯುಗದಲ್ಲಿ ದೇಶ ವೈಭವ ಕಳೆದುಕೊಂಡಿತ್ತು, ಆದರೆ ವಸಾಹತುಶಾಹಿ ಸಂಕೋಲೆ ಮುರಿದಿದ್ದೇವೆ, ವೈಭವ ಮರಳುತ್ತಿದೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. 

ಉಜ್ಜಯಿನಿ: ಗುಲಾಮಗಿರಿ ಯುಗದಲ್ಲಿ ಭಾರತ ಕಳೆದುಕೊಂಡ ವೈಭವವನ್ನು ಮರುಸ್ಥಾಪನೆ ಮಾಡುತ್ತಿದ್ದೇವೆ. ದೇಶದ ಧಾರ್ಮಿಕ ಕ್ಷೇತ್ರಗಳು ಶರವೇಗದ ಅಭಿವೃದ್ಧಿ ಕಾಣುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷಿಸಿದ್ದಾರೆ. 351 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಹಾಕಾಲೇಶ್ವರ ದೇಗುಲದ ಜೀರ್ಣೋದ್ಧಾರರ ಭಾಗವಾದ ‘ಮಹಾಕಾಲ ಲೋಕ ಕಾರಿಡಾರ್‌’ನ ಮೊದಲ ಹಂತ ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ಉಜ್ಜಯಿನಿ ಸಾವಿರಾರು ವರ್ಷಗಳಿಂದಲೂ ಭಾರತದ ಸಮೃದ್ಧಿ ಹಾಗೂ ಜ್ಞಾನವನ್ನು ಮುನ್ನಡೆಸುತ್ತಿದೆ. ಉಜ್ಜಯಿನಿಯ ಪ್ರತಿ ಕಣದಲ್ಲಿಯೂ ಆಧ್ಯಾತ್ಮಿಕತೆ ತುಂಬಿದ್ದು, ಇಲ್ಲಿನ ಮೂಲೆಮೂಲೆಯೂ ದೈವಿಕ ಶಕ್ತಿಯನ್ನು ಹೊರಸೂಸುತ್ತದೆ. ಉಜ್ಜಯಿನಿ ಸಾವಿರಾರು ವರ್ಷಗಳಿಂದ ಭಾರತದ ಸಮೃದ್ಧಿ, ಜ್ಞಾನ, ಘನತೆ ಹಾಗೂ ಸಾಹಿತ್ಯವನ್ನು ಮುನ್ನಡೆಸಿದೆ’ ಎಂದು ಬಣ್ಣಿಸಿದರು.

‘ನಾವೀನ್ಯತೆ ಹಾಗೂ ನವೀಕರಣ ಜೊತೆಯಲ್ಲಿಯೇ ಸಾಗಬೇಕು. ಹೀಗಾಗಿ ಗುಲಾಮಗಿರಿ ಯುಗದಲ್ಲಿ ಭಾರತ ಕಳೆದುಕೊಂಡ ವೈಭವವನ್ನು ಮರುಸ್ಥಾಪನೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಹಾಕಾಲ ಲೋಕ ಕಾರಿಡಾರ್‌ ಯೋಜನೆಯು ಉಜ್ಜಯಿನಿಗೆ ಇನ್ನಷ್ಟುಹುರುಪು ತುಂಬಲಿದೆ’ ಎಂದರು.

Latest Videos

ಇದನ್ನು ಓದಿ: ಅಕ್ಟೋಬರ್ 11 ರಂದು Ujjain ಮಹಾಕಾಲ ಲೋಕ ಉದ್ಘಾಟನೆ: ಪ್ರಧಾನಿ Modiಯಿಂದ ಲೋಕಾರ್ಪಣೆ

‘ಸ್ವಾತಂತ್ರ್ಯದ ಅಮೃತಕಾಲದಲ್ಲಿ ನಾವು ವಸಾಹತುಶಾಹಿಯ ಸಂಕೋಲೆಗಳನ್ನು ಮುರಿದಿದ್ದೇವೆ. ಭಾರತದುದ್ದಕ್ಕೂ ಇರುವ ಸಾಂಸ್ಕೃತಿಕ ತಾಣಗಳು ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ. ಮೊಟ್ಟಮೊದಲ ಬಾರಿ ಚಾರ್‌ಧಾಮ್‌ಗಳನ್ನು ಸರ್ವಋತು ರಸ್ತೆಗಳೊಂದಿಗೆ ಸಂಪರ್ಕಿಸಲಾಗಿದೆ. ಅಯೋಧ್ಯೆಯಲ್ಲಿ ಪೂರ್ಣ ವೇಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಸೋಮನಾಥ, ಕೇದಾರನಾಥ ಹಾಗೂ ಬದರಿನಾಥದಲ್ಲೂ ದಾಖಲೆಯ ಅಭಿವೃದ್ಧಿಯಾಗುತ್ತಿದೆ’ ಎಂದು ಹೇಳಿದರು.

ಉಜ್ಜಯಿನಿ ಮಹಾಕಾಲಗೆ ವೈಭವದ ಕಾರಿಡಾರ್‌

ಕಾಶಿ ವಿಶ್ವನಾಥ ಧಾಮ ಬಳಿಕ ದೇಶದ ಮತ್ತೊಂದು ಪ್ರಮುಖ ದೇವಾಲಯವು ಕಳೆಗಟ್ಟಿದ್ದು, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಲೇಶ್ವರ ದೇಗುಲಕ್ಕೆ ನವಸ್ಪರ್ಶ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ 900 ಮೀ. ಉದ್ದದ ಸುಸಜ್ಜಿತ ‘ಮಹಾಕಾಲ ಲೋಕ’ ಕಾರಿಡಾರ್‌ನ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಮಹಾಕಾಲ ಕಾರಿಡಾರ್ ಉದ್ಘಾಟನೆಯಲ್ಲೂ ವಿಶೇಷತೆ ಮೆರೆದ ಮೋದಿ

ವೇದ ಮಂತ್ರಗಳ ಪಠಣದ ನಡುವೆ ಪ್ರಧಾನಿ ಮೋದಿ ಅವರು ಕಾರಿಡಾರ್‌ನ ನಂದಿ ದ್ವಾರದಲ್ಲಿ ಪವಿತ್ರ ದಾರಗಳಿಂದ ಸುತ್ತಿ ಮುಚ್ಚಿಟ್ಟಿದ್ದ ಮಹಾಕಾಲ ಶಿವಲಿಂಗದ ಪ್ರತಿಕೃತಿಯನ್ನು ರಿಮೋಟ್‌ ಕಂಟ್ರೋಲ್‌ ಒತ್ತಿ ಅನಾವರಣಗೊಳಿಸಿದರು. ಈ ಮೂಲಕ ದೇಶದ ಅತಿದೊಡ್ಡ ದೇಗುಲ ಕಾರಿಡಾರ್‌ ಅನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. 856 ಕೋಟಿ ರೂ. ಮೊತ್ತದ ಯೋಜನೆಯ ಪೈಕಿ 351 ಕೋಟಿ ರೂ ವೆಚ್ಚದಲ್ಲಿ ಮೊದಲ ಹಂತದ ಯೋಜನೆ ಇದಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ 400 ಕಿ.ಮೀ. ಉದ್ದವಿದೆ.

ಈ ವೇಳೆ ಮಾತನಾಡಿದ ಅವರು, ‘ಉಜ್ಜಯಿನಿಯ ಕಣಕಣದಲ್ಲೂ ಆಧ್ಯಾತ್ಮಿಕತೆ ಇದೆ. ನಗರದ ಎಲ್ಲ ಕಡೆಯಿಂದ ಪವಿತ್ರ ಶಕ್ತಿ ಪಸರಿಸುತ್ತಿದೆ. ಉಜ್ಜಯಿನಿಯು ದೇಶದ ಗೌರವ, ಜ್ಞಾನ, ಸಮೃದ್ಧಿಗೆ ಸಾವಿರಾರು ವರ್ಷದಿಂದ ಸಾಕಷ್ಟುಕೊಡುಗೆ ನೀಡಿದೆ. ದೇಶಕ್ಕೆ ಈಗ ಗತವೈಭವ ಮರಳತೊಡಗಿದೆ. ಅಯೋಧ್ಯೆಯಲ್ಲಿ ಭಾರಿ ವೇಗದಿಂದ ರಾಮಮಂದಿರ ನಿರ್ಮಾಣ ಆಗುತ್ತಿದೆ. ಸೋಮನಾಥ, ಬದರಿನಾಥ ಹಾಗೂ ಕೇದಾರನಾಥದಲ್ಲಿ ದಾಖಲೆಯ ಅಭಿವೃದ್ಧಿ ಆಗುತ್ತಿದೆ. ಮೊದಲ ಬಾರಿ ಸರ್ವಋತುಗಳಲ್ಲಿ ಚಾರ್‌ಧಾಮ ಸಂಪರ್ಕಿಸುವ ರಸ್ತೆಗಳು ನಿರ್ಮಾಣ ಆಗುತ್ತಿವೆ’ ಎಂದು ಹರ್ಷಿಸಿದರು.

ಇದನ್ನೂ ಓದಿ: Ujjain mahakal corridor ವಿಶೇಷ ಪೂಜೆ ಸಲ್ಲಿಸಿ ನವೀಕೃತ ಉಜ್ಜಯಿನಿ ದೇಗುಲ ಕಾರಿಡಾರ್ ಉದ್ಘಾಸಿದ ಮೋದಿ!

ಮಹಾಕಾಲನಿಗೆ ಪೂಜೆ:

ಮಹಾಕಾಲ ಲೋಕ ಕಾರಿಡಾರ್‌ ಅನ್ನು ಉದ್ಘಾಟಿಸುವ ಮೊದಲು ಮೋದಿ ಸಾಯಂಕಾಲ 6 ಗಂಟೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿದರು. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮೋದಿ 10 ನಿಮಿಷಗಳ ಕಾಲ ಕೈಯಲ್ಲಿ ಬಿಲ್ವಪತ್ರೆ ಹಾಗೂ ರುದ್ರಾಕ್ಷಿ ಮಾಲೆ ಹಿಡಿದು ಧ್ಯಾನ ಮಾಡಿದರು. ನಂತರ ನಂದಿಯ ವಿಗ್ರಹದ ಬಳಿಯೂ ಪೂಜೆ ಸಲ್ಲಿಸಿ, ದಾನ ಪಾತ್ರೆಯಲ್ಲಿ ದಕ್ಷಿಣೆ ಹಾಕಿದರು.

ಈ ವೇಳೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹಾಗೂ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆಗಿದ್ದರು. ಬಳಿಕ ರಾಜ್ಯಪಾಲ ಮಂಗುಭಾಯಿ ಪಟೇಲ್‌ ಹಾಗೂ ಮುಖ್ಯಮಂತ್ರಿ ಚೌಹಾಣ್‌ ಅವರ ಜೊತೆಗೆ ದೇವಾಲಯದ ಆವರಣವನ್ನು ಸುತ್ತಾಡಿದರು.

ಇದನ್ನೂ ಓದಿ: ನವೀಕೃತ Ujjain ದೇಗುಲ ಇಂದು ಲೋಕಾರ್ಪಣೆ: ಪ್ರಧಾನಿ Modi ಉದ್ಘಾಟನೆ

ಉದ್ಘಾಟನೆ ಹಿನ್ನೆಲೆಯಲ್ಲಿ ಸಂಸ್ಕೃತ ಹಾಗೂ ಹಿಂದಿಯಲ್ಲಿ ಬರೆಯಲಾದ ದ್ವಿಭಾಷಾ ಶಾಸನವನ್ನೂ ಅನಾವರಣಗೊಳಿಸಿದರು. ಬಳಿಕ ಮಹಾಕಾಲ ಲೋಕದ ಅಲಂಕಾರಿಕ ಶಿಲ್ಪವನ್ನು ವೀಕ್ಷಿಸಿದರು. ಸ್ಥಳೀಯ ಕಲಾವಿದರ ಕಲೆಯ ಪ್ರದರ್ಶನವನ್ನು ವೀಕ್ಷಿಸಿದರು.

ಭವ್ಯ ಕಾರಿಡಾರ್‌

ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 856 ಕೋಟಿ ರೂ. ವೆಚ್ಚದ ಮಹಾಕಾಲೇಶ್ವರ ದೇವಾಲಯ ಕಾರಿಡಾರ್‌ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗಿದೆ. 351 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ಯೋಜನೆಯ ಮೊದಲ ಹಂತದಲ್ಲಿ, ಕಾರಿಡಾರ್‌ನಲ್ಲಿ 108 ಮರಳುಗಲ್ಲುಗಳ ಅಲಂಕೃತ ಸ್ತಂಭಗಳಿವೆ. ಇವು ಶಿವ ಆನಂದ ತಾಂಡವ ಸ್ವರೂಪ ಪ್ರದರ್ಶಿಸುತ್ತದೆ. ಕಾರಿಡಾರ್‌ ನಂದಿ ದ್ವಾರ ಹಾಗೂ ಪಿನಾಕಿ ದ್ವಾರ ಎಂಬ 2 ಮುಖ್ಯ ದ್ವಾರ ಹೊಂದಿದೆ. ಇದರೊಂದಿಗೆ ಶಿವ ಹಾಗೂ ಶಕ್ತಿ ದೇವತೆಯ 200ಕ್ಕೂ ಹೆಚ್ಚು ವಿಗ್ರಹ ಹಾಗೂ ಭಿತ್ತಿಚಿತ್ರಗಳು ಕಾರಿಡಾರ್‌ನಲ್ಲಿವೆ.

ಇದನ್ನೂ ಓದಿ: Mahakal Corridor ಮಹಾಕಾಲ ಕಾರಿಡಾರ್ ಉದ್ಘಾಟಿಸಿ ಬೇಲೂರಿನ ಚನ್ನಕೇಶವ ದೇಗುಲ ಉಲ್ಲೇಖಿಸಿದ ಮೋದಿ!

click me!