ದೇಶದಲ್ಲಿ ಚೇತರಿಕೆ ಪ್ರಮಾಣ ಸಕ್ರಿಯ ಕೇಸಿಗಿಂತ 2 ಪಟ್ಟು ಹೆಚ್ಚು!

By Kannadaprabha News  |  First Published Aug 5, 2020, 8:42 AM IST

ಚೇತರಿಕೆ ಪ್ರಮಾಣ ಸಕ್ರಿಯ ಕೇಸಿಗಿಂತ 2 ಪಟ್ಟು ಹೆಚ್ಚು| 10 ರಾಜ್ಯಗಳಲ್ಲಿ ಶೇ.82ರಷ್ಟುಕೊರೋನಾ ಕೇಸ್‌: ಕೇಂದ್ರ


ನವದೆಹಲಿ(ಆ.05): ದೇಶದಲ್ಲಿ ದಾಖಲಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳ ಪೈಕಿ ಶೇ.82ರಷ್ಟುಪ್ರಕರಣಗಳು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿಹಿ ಸುದ್ದಿ: ರಾಜ್ಯದಲ್ಲಿ ಮತ್ತೆ ಪಾಸಿಟಿವ್‌ಗಿಂತ ಗುಣಮುಖ ಸಂಖ್ಯೆ ಹೆಚ್ಚಳ!

Latest Videos

undefined

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ಕೊರೋನಾ ವೈರಸ್‌ ಪ್ರಕರಣಗಳು ದೇಶದ ಬೇರೆ ಬೇರೆ ಪ್ರದೇಶಕ್ಕೆ ಹರಡುತ್ತಿವೆ. ಆದರೆ, ಶೇ.82ರಷ್ಟುಪ್ರಕರಣಗಳು 10 ರಾಜ್ಯಗಳಲ್ಲಿ ದಾಖಲಾಗಿವೆ. ಈ ರಾಜ್ಯಗಳ 50 ಜಿಲ್ಲೆಗಳಲ್ಲಿ ಶೇ.66ರಷ್ಟುಪ್ರಕರಣಗಳು ಕಂಡುಬಂದಿವೆ. ಕೊರೋನಾ ಸಾವಿನ ಪ್ರಮಾಣ ಶೇ.2.10ಕ್ಕೆ ಇಳಿಕೆ ಆಗಿದ್ದು, ಇದು ಮೊದಲ ಲಾಕ್‌ಡೌನ್‌ ಬಳಿಕ ದಾಖಲಾದ ಅತಿ ಕಡಿಮೆ ಪ್ರಮಾಣವಾಗಿದೆ. ಶೇ.37ರಷ್ಟುಸಾವು 45ರಿಂದ 60 ವರ್ಷದ ಒಳಗಿನವರಲ್ಲಿ ಸಂಭವಿಸಿದೆ.

ಇನ್ನು ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 12.30 ಲಕ್ಷಕ್ಕೆ ಏರಿಕೆ ಆಗಿದ್ದು, ಸಕ್ರಿಯ ಪ್ರಕರಣಗಳಿಗಿಂತ 2 ಪಟ್ಟು ಅಧಿಕವಾಗಿದೆ ಎಂದು ಹೇಳಿದ್ದಾರೆ.

click me!