
ನವದೆಹಲಿ(ಆ.05): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸದ ದಿನವು ಕೇವಲ ನನಗಷ್ಟೇ ಅಲ್ಲದೆ, ಇಡೀ ದೇಶಕ್ಕೆ ಭಾವನಾತ್ಮಕ ಹಾಗೂ ಐತಿಹಾಸಿಕ ದಿನವಾಗಿದೆ ಎಂದು ರಾಮಮಂದಿರ ಹೋರಾಟದ ಮುಂಚೂಣಿಯಲ್ಲಿದ್ದ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ಅವರು ಹೇಳಿದ್ದಾರೆ.
ಪಂಚ ಶತಮಾನದ ಶಂಕು:ರಂಗೇರಿದ ಅಯೋಧ್ಯೆ, ಬೆಳಗಲಿದೆ 1.5 ಲಕ್ಷ ದೀಪ!
ಅಲ್ಲದೆ, ಶ್ರೀ ರಾಮ ಜನ್ಮಭೂಮಿಯಲ್ಲಿ ವಿಜೃಂಭಣೆಯ ಮತ್ತು ವೈಭವೋತೇತ ದೇವಸ್ಥಾನ ನಿರ್ಮಾಣವಾಗಬೇಕು ಎಂಬುದು ಬಿಜೆಪಿಯ ಆಕಾಂಕ್ಷೆ ಮತ್ತು ಗುರಿಯಾಗಿತ್ತು. ಅಲ್ಲದೆ, ರಾಮ ಮಂದಿರವು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಬಲಿಷ್ಠ, ಸಮೃದ್ಧ ಹಾಗೂ ಸಾಮರಸ್ಯದ ಭಾರತವನ್ನು ಪ್ರತಿಬಿಂಬಿಸಲಿದೆ ಎಂದಿದ್ದಾರೆ.
ಕೆಲವು ಬಾರಿ ಮಹತ್ವದ ಕನಸುಗಳು ನನಸಾಗಲು ದೀರ್ಘಕಾಲವೇ ತೆಗೆದುಕೊಳ್ಳುತ್ತವೆ. ಆದರೆ, ಆ ಕನಸುಗಳು ನೆರವೇರಿದಾಗ ನಿಜಕ್ಕೂ ಜೀವನ ಸಾರ್ಥಕವಾಗುತ್ತದೆ. ನನ್ನ ಹೃದಯಕ್ಕೆ ತೀರಾ ಹತ್ತಿರವಾದ ಅಂಥ ಕನಸು ಈಗ ನೆರವೇರುತ್ತಿದೆ ಎಂದು ಅಡ್ವಾಣಿ ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ