ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಎಸ್‌ಐಟಿಯಿಂದ 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

By Anusha KbFirst Published Dec 18, 2022, 1:12 PM IST
Highlights

ಉತ್ತರಾಖಂಡ್‌ನಲ್ಲಿ ಬಿಜೆಪಿ ಮುಖಂಡನಿಗೆ ಸೇರಿದ ರೆಸಾರ್ಟ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಯುವತಿ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ 500 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದು, ನಾಳೆ ಕೊತದ್ವಾರದ ಕೋರ್ಟ್‌ ಈ ಚಾರ್ಜ್‌ಶೀಟ್‌ನ್ನು ಸಲ್ಲಿಸಲಿದೆ.

ಡೆಹ್ರಾಡೂನ್: ಉತ್ತರಾಖಂಡ್‌ನಲ್ಲಿ ಬಿಜೆಪಿ ಮುಖಂಡನಿಗೆ ಸೇರಿದ ರೆಸಾರ್ಟ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಯುವತಿ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ 500 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದು, ನಾಳೆ ಕೊತದ್ವಾರದ ಕೋರ್ಟ್‌ ಈ ಚಾರ್ಜ್‌ಶೀಟ್‌ನ್ನು ಸಲ್ಲಿಸಲಿದೆ. ಚಾರ್ಜ್‌ಶೀಟ್‌ನಲ್ಲಿರುವ ಕೆಲವು ಮಾಹಿತಿಗಳು ಆಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾಗೆ ಲಭ್ಯವಾಗಿದೆ. ಅದರ ಡಿಟೇಲ್ ಇಲ್ಲಿದೆ. 

ಅಂಕಿತಾ ಹತ್ಯೆ ಪ್ರಕರಣದ (Ankita's murder case) ತನಿಖೆಗಳಿದ ವಿಶೇಷ ತನಿಖಾ ತಂಡ (Special Investigation Team) ಅಂಕಿತಾಳ ಆತ್ಮೀಯ ಗೆಳೆಯ ಪುಷ್ಪಾ ದೀಪ್ (Pushpa Deep) ಹಾಗೂ ರೆಸಾರ್ಟ್‌ನ ಮಾಜಿ ಉದ್ಯೋಗಿಯೊಬ್ಬರ (former employee) ಬಳಿಯೂ ಮಾಹಿತಿ ಕಲೆ ಹಾಕಿದೆ. ಕೆಲವು ವಾರಗಳ ಕಾಲ ರೆಸಾರ್ಟ್‌ನಲ್ಲಿ ಕೆಲಸ ಮಾಡಿದ್ದ ಬಳಿಕ ಈ ಮಾಜಿ ಉದ್ಯೋಗಿ ರೆಸಾರ್ಟ್ ತೊರೆದಿದ್ದರು. ಅವರು ನೀಡಿದ ಮಾಹಿತಿಯನ್ನು ಕೂಡ ದಾಖಲೀಕರಿಸಿಕೊಳ್ಳಲಾಗಿದೆ. ಅಲ್ಲದೇ ಚಾರ್ಜ್‌ಶೀಟ್‌ನಲ್ಲಿ 100 ಸಾಕ್ಷಿಗಳ ಹೇಳಿಕೆಗಳು ಹಾಗೂ ಸಾಕ್ಷಿಗಳಿರುವ 30 ದಾಖಲೆಗಳನ್ನು ಹೊಂದಿವೆ.  ರೆಸಾರ್ಟ್‌ಗೆ ಬರುವ ಅತಿಥಿಗಳಿಗೆ ವಿಶೇಷ ಅತಿಥ್ಯ ನೀಡಬೇಕು ಎಂಬ ಒತ್ತಡವಿತ್ತು ಎಂಬ ಆರೋಪದ ಬಗ್ಗೆ ತನಿಖಾ ತಂಡ ಮಾಹಿತಿ ಕೆಲ ಹಾಕಿದೆ ಎಂದು ಎಡಿಜಿಪಿ (ಕಾನೂನು ಹಾಗೂ ಆದೇಶ) ವಿ ಮುರುಗನ್ (V Murugan) ಹೇಳಿದ್ದಾರೆ. ಅಂಕಿತಾ ತನ್ನ ಸಹೋದ್ಯೋಗಿಗಳ ಬಳಿ ರೆಸಾರ್ಟ್ ಒಂದು ಅಪಾಯಕಾರಿ ಗುಹೆಯಾಗಿದೆ. ಈ ಸ್ಥಳದಿಂದ ಆದಷ್ಟು ಬೇಗ ತಪ್ಪಿಸಿಕೊಳ್ಳಬೇಕು ಎಂದು ಹೇಳಿದ್ದಳು ಎಂಬುದು ಕೂಡ ಚಾರ್ಜ್‌ಶೀಟ್‌ನಲ್ಲಿ (charge sheet) ದಾಖಲಾಗಿದೆ ಎನ್ನಲಾಗುತ್ತಿದೆ. 

ಕೊನೆಯ ಸಲ ಮಗಳ ಮುಖ ನೋಡಲೂ ಬಿಡ್ಲಿಲ್ಲ: Ankita Bhandari ತಾಯಿ ಆಕ್ರೋಶ

ಅಂಕಿತಾ ಸಾವಿಗೂ ಮೊದಲು ತನ್ನ ಆತ್ಮೀಯ ಗೆಳೆಯರೊಬ್ಬರಲ್ಲಿ ಮಾತ್ರ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು ಎಂದು ನಂಬಲಾಗಿತ್ತು. ತನಿಖೆಯ (investigation) ವೇಳೆ ಅಂಕಿತಾ ಈ ರೆಸಾರ್ಟ್‌ ನ ಮಾಜಿ ಉದ್ಯೋಗಿಯವರ ಜೊತೆ ಸಂಪರ್ಕದಲ್ಲಿದ್ದರು ಎಂಬುದು ತಿಳಿದು ಬಂದಿದೆ. ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿದ ಬಳಿಕ ಅಂಕಿತಾಗೆ ಅಲ್ಲಿನ ಅಕ್ರಮಗಳ ಬಗ್ಗೆ ತಿಳಿದು ಬಂದಿತ್ತು. ಇದನ್ನು ಹಳೆಯ ಉದ್ಯೋಗಿ ಜೊತೆ ಆಕೆ ಹೇಳಿಕೊಂಡಿದ್ದಳು. ಇದು ಕೆಲಸ ಮಾಡಲು ಯೋಗ್ಯವಾದ ಸ್ಥಳವಲ್ಲ. ಆದಷ್ಟು ಬೇಗ ಇಲ್ಲಿ ಕೆಲಸ ಬಿಡಬೇಕು ಎಂದು ಹೇಳಿದ್ದಳು. ಅಲ್ಲದೇ ವಿಐಪಿಗಳಿಗೆ ವಿಶೇಷ ಅತಿಥ್ಯ ನೀಡುವಂತೆ ತನಗೆ ಒತ್ತಡ ಹೇರಲಾಗುತ್ತಿದೆ ಎಂದೂ ಕೂಡ ಆಕೆ ಹೇಳಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ಯುವತಿ ಗೆಳಯನಿಗೆ ಮಾತ್ರವಲ್ಲ. ಈ ರೆಸಾರ್ಟ್‌ನ ಹಳೆಯ ಉದ್ಯೋಗಿಗೂ ಈ ಅಂಕಿತಾ ಸ್ಥಿತಿ ಬಗ್ಗೆ ಅರಿವಿತ್ತು ಎಂದು ಅಧಿಕಾರಿ ಹೇಳಿದ್ದಾರೆ. ಸ್ವಲ್ಪ ಕಾಲ ಇಲ್ಲಿ ಕೆಲಸ ಮಾಡಿದ್ದ ಆ ಹಳೆ ಉದ್ಯೋಗಿ ನಂತರ ಕೆಲಸ ಬಿಟ್ಟಿದ್ದ. ಈತ ಹಾಗೂ ಅಂಕಿತಾ ಗೆಳೆಯ ಪುಷ್ಪ ದೀಪ್ ಈ ಇಬ್ಬರ ಹೇಳಿಕೆಗಳನ್ನು ಕೂಡ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಕೆಲವು ಪ್ರಮುಖ ಪ್ರಶ್ನೆಗಳು ನಿಗೂಢವಾಗಿಯೇ ಉಳಿದಿವೆ ಎಂಬುದು ತಿಳಿದು ಬಂದಿದೆ.

Uttarakhand Receptionist Murder: ನನ್ನ ಮಗ ತಪ್ಪು ಮಾಡಿಲ್ಲ, ಆತ ಸೀದಾ ಸಾದ ವ್ಯಕ್ತಿ ಎಂದ ಬಿಜೆಪಿ ಮುಖಂಡ

ಸೆಪ್ಟೆಂಬರ್ ತಿಂಗಳಲ್ಲಿ 19 ವರ್ಷದ ರಿಸೆಪ್ಷನಿಸ್ಟ್ (receptionist) ಅಂಕಿತಾ ನಿಗೂಢವಾಗಿ ಕಣ್ಮರೆಯಾಗಿದ್ದರು. ಬಳಿಕ ಅವರ ಶವ (dead body) ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣ ದೇಶ್ಯಾದ್ಯಂತ ಸದ್ದು ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ(Pulkit Arya)  ಸೇರಿದಂತೆ ಮತ್ತೆ ನಾಲ್ವರನ್ನು ಬಂಧಿಸಲಾಗಿತ್ತು. ಘಟನೆಯ ಬಳಿಕ ಜನ ಪುಲ್ಕಿತ್ ಆರ್ಯ ಒಡೆತನದಲ್ಲಿರುವ ಉತ್ತರಾಖಂಡದ ಋಷಿಕೇಶದಲ್ಲಿರುವ (Rishikesh) ವನತಾರಾ ರೆಸಾರ್ಟ್ (Resort) ಅನ್ನು ಧ್ವಂಸಗೊಳಿಸಿದ್ದರು. 

ಅಂಕಿತಾ ಭಂಡಾರಿ ಹತ್ಯೆ ಮರಣೋತ್ತರ ವರದಿ ಲಭ್ಯ, ಬಿಜೆಪಿ ನಾಯಕನಿಗೆ ಮತ್ತಷ್ಟು ಸಂಕಷ್ಟ

click me!