
ಪುಣೆ(ಡಿ.08): ಜೈಲು ಕೈದಿಗಳ ಅಪರಾಧಿ ಮನೋಭಾವ ಬದಲಿಸಲು ಅವರಿಗೆ ಹಸುಗಳನ್ನು ಆರೈಕೆ ಮಾಡುವ ಜವಾಬ್ದಾರಿ ನೀಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ.
ಗೋಮಾತೆಯ ಅಹಿಂಸಾ ಮನೋಭಾವ ಕೈದಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಭಾರತದ ಆರ್ಥಿಕತೆ ಹೇಗಿರಬೇಕು?: ಭಾಗವತ್ ಮಾತು ಮಾತ್ರ ಕೇಳಬೇಕು!
ಗೋವು ವಿಜ್ಞಾನ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಗೋವು ಮಾನವ ಹೃದಯವನ್ನು ಹೂವಿನಂತೆ ಕೋಮಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಜೈಲುಗಳಲ್ಲಿ ಹಸುಗಳ ಕೊಟ್ಟಿಗೆಯನ್ನು ಸ್ಥಾಪಿಸಿ ಅವುಗಳ ಆರೈಕೆಯ ಜವಾಬ್ದಾರಿಯನ್ನು ಕೈದಿಗಳಿಗೆ ವಹಿಸಬೇಕು ಎಂದು ಭಾಗವತ್ ಹೇಳಿದ್ದಾರೆ. ಇದರಿಂದ ಕೈದಿಗಳ ಅಪರಾಧ ಮನೋಸ್ಥಿತಿ ಕ್ಷೀಣಿಸಲು ಸಹಾಯವಾಗುತ್ತದೆ ಎಂಬುದು ಭಾಗವತ್ ಅಭಿಪ್ರಾಯವಾಗಿದೆ.
ಗೋಹತ್ಯೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿ ಹಾನಿಗೆ ಸಂಚು: ಭಾಗವತ್ ಕಿಡಿ
ಹಸುವಿನ ಗುಣಗಳನ್ನು ಜಗತ್ತಿಗೆ ಸಾಬೀತುಪಡಿಸಲು ಅದನ್ನು ದಾಖಲೆಗಳಲ್ಲಿ ಬರೆದಿಡಲು ಪ್ರಾರಂಭಿಸಬೇಕು. ಕೈದಿಗಳ ಮೇಲೆ ಮಾನಸಿಕ ಪ್ರಯೋಗಗಳನ್ನು ನಡೆಸುವುದು ಅವಶ್ಯ ಎಂದು ಭಾಗವತ್ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ