ಅಂತ್ಯಸಂಸ್ಕಾರಕ್ಕೆ ಯೋಗಿ ಬರಲಿಲ್ಲ: ನ್ಯಾಯ ಸಿಗದೇ ಹೊರಟಳು ದೇಶದ ಮಗಳು!

By Suvarna NewsFirst Published Dec 8, 2019, 1:47 PM IST
Highlights

ನ್ಯಾಯ ಸಿಗದೇ ಹೊರಟಳಾ ದೇಶದ ಧೀರ ಮಗಳು? ಉನ್ನಾವ್ ಅತ್ಯಾಚಾರ ಸಂತಸ್ಥೆಯ ಅಂತ್ಯಸಂಸ್ಕಾರ| ಗ್ರಾಮದ ಹೊರವಲಯದಲ್ಲಿ ನೆಮ್ಮದಿಯ ಶಾಶ್ವತ ನಿದ್ರೆಗೆ ಜಾರಿದ ಸಂತ್ರಸ್ಥೆ| ಯೋಗಿ ಆದಿತ್ಯನಾಥ್ ಭೇಟಿಗೆ ಪಟ್ಟು ಹಿಡಿದಿದ್ದ ಕುಟುಂಬ ವರ್ಗ| ಪೊಲೀಸರ ಮನವೋಲಿಕೆ ಪ್ರಯತ್ನ ಯಶಸ್ವಿ| ಪೊಲೀಸ್ ಸರ್ಪಗಾವಲಿನಲ್ಲಿ ನೆರವೇರಿದ ಸಂತ್ರಸ್ಥೆಯ ಅಂತ್ಯಸಂಸ್ಕಾರ|

ಲಕ್ನೋ(ಡಿ.08): ಉನ್ನಾವ್ ಅತ್ಯಾಚಾರ ಸಂಸ್ಥೆಯ ಅಂತ್ಯಸಂಸ್ಕಾರ ನೆರವೇರಿದ್ದು, ಬದುಕಿದ್ದಾಗ ಶಾರೀರಿಕ ಹಾಗೂ ಮಾನಸಿಕ ಹಿಂಸೆಗೆ ಬಲಿಯಾಗಿದ್ದ ದೇಶದ ಮಗಳು ಗ್ರಾಮದ ಹೊರ ವಲಯದಲ್ಲಿ ಶಾಶ್ವತವಾಗಿ ನೆಮ್ಮದಿಯ ನಿದ್ರೆಗೆ ಜಾರಿದ್ದಾಳೆ.

ಮುಖ್ಯಮಂತ್ರಿ ಬರೋವರೆಗೂ ಅಂತ್ಯಸಂಸ್ಕಾರವಿಲ್ಲ; ಸಂತ್ರಸ್ಥೆ ಕುಟುಂಬದ ಹಠ!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುವವರೆಗೂ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಸಂತ್ರಸ್ಥೆಯ ಕುಟುಂಬ ವರ್ಗ ಈ ಮೊದಲು ಪಟ್ಟು ಹಿಡಿದಿತ್ತು. ಆದರೆ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರ ಮನವೋಲಿಕೆ ಪ್ರಯತ್ನ ಯಶಸ್ವಿಯಾಗಿದ್ದು, ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬದವರು ಒಪ್ಪಿಕೊಂಡರು.

Unnao: Mortal remains of Unnao rape victim being taken for last rites. She passed away during treatment at Delhi's Safdarjung Hospital on December 6 pic.twitter.com/i5WPLUZ0AB

— ANI UP (@ANINewsUP)

ಅದರಂತೆ ಪೊಲೀಸ್ ಸರ್ಪಗಾವಲಿನಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ಥೆಯ ಅಂತ್ಯಸಂಸ್ಕಾರ ನೆರವೇರಿದ್ದು, ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ್ದ ಸಂತ್ರಸ್ಥೆ ಇನ್ಮುಂದೆ ಕೇವಲ ನೆನಪು ಮಾತ್ರ.

ಉನ್ನಾವ್ ಸಂತ್ರಸ್ತೆ ಮನೆಗೆ ರಾಜಕೀಯ ನಾಯಕರ ದಂಡು!

ಈ ಮಧ್ಯೆ ಸಂತ್ರಸ್ಥೆಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿರುವ ಯೊಗಿ ಸರ್ಕಾರ, 25 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ ಮನೆ ಹಾಗೂ ನಿರಂತರ ಪೊಲೀಸ್ ಭದ್ರತೆ ನೀಡುವುದಾಗಿ ಘೋಷಿಸಿದೆ.

click me!