ಚಲಾವಣೆಯಿಂದ ವಾಪಸ್ ಪಡೆಯಲಾಗಿರುವ 2000 ರು. ಮುಖಬೆಲೆಯ ನೋಟುಗಳನ್ನು ನಿಗದಿತ ಗಡುವಿನೊಳಗೆ ಮರಳಿಸಲು ವಿಫಲರಾಗಿರುವ ನಾಗರಿಕರಿಗೆ ಆ ನೋಟುಗಳನ್ನು ಹಿಂತಿರುಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಂದು ಅವಕಾಶ ನೀಡಿದೆ.
ನವದೆಹಲಿ: ಚಲಾವಣೆಯಿಂದ ವಾಪಸ್ ಪಡೆಯಲಾಗಿರುವ 2000 ರು. ಮುಖಬೆಲೆಯ ನೋಟುಗಳನ್ನು ನಿಗದಿತ ಗಡುವಿನೊಳಗೆ ಮರಳಿಸಲು ವಿಫಲರಾಗಿರುವ ನಾಗರಿಕರಿಗೆ ಆ ನೋಟುಗಳನ್ನು ಹಿಂತಿರುಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಂದು ಅವಕಾಶ ನೀಡಿದೆ. ಇಂತಹ ನೋಟುಗಳನ್ನು ಹೊಂದಿದವರು ವಿಮಾ ಸೌಲಭ್ಯ ಹೊಂದಿದ ಅಂಚೆ ಲಕೋಟೆಯ (ಇನ್ಶೂರ್ಡ್ ಪೋಸ್ಟ್) ಮೂಲಕ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಿದರೆ, ನೋಟುಗಳ ಮೊತ್ತವನ್ನು ಆಯಾ ಗ್ರಾಹಕರ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದೆ.
ನೋಟು ಬದಲಿಸಿಕೊಳ್ಳಲು ಪ್ರಾದೇಶಿಕ ಕಚೇರಿಗಳಲ್ಲಿ (RBI regional offices) ಮಾತ್ರವೇ ಹಾಲಿ ಅವಕಾಶವಿರುವುದರಿಂದ ಅಂತಹ ಕಚೇರಿಗಳಿಂದ ದೂರ ಇರುವವರು ಪರದಾಡುತ್ತಿದ್ದಾರೆ. ಅಲ್ಲದೆ ನಿರ್ದಿಷ್ಟ ಶಾಖೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಚೆ ಮೂಲಕ ನೋಟು ಬದಲಿಸುವ ಸೌಲಭ್ಯ ಅವರಿಗೆ ಅನುಕೂಲವಾಗಲಿದೆ ಎಂದು ಆರ್‌ಬಿಐ ಪ್ರಾದೇಶಿಕ ನಿರ್ದೇಶಕ (RBI Regional Director) ರೋಹಿತ್ ಪಿ. ದಾಸ್ (Rohit P Das)ಅವರು ತಿಳಿಸಿದ್ದಾರೆ.
ಟ್ರಾಫಿಕ್‌ನಲ್ಲಿ ಸಿಲುಕಿದವರಿಗೆ ಸಂಗೀತಾ ರಸದೌತಣ ನೀಡಿದ ಆಟೋ ಚಾಲಕ: ವೈರಲ್ ವೀಡಿಯೋ
ಇದಲ್ಲದೆ ಹರಿದ ಹಾಗೂ ಸವಕಲಾದ ನೋಟು ಬದಲಿಸಿಕೊಳ್ಳಲು ಆರ್‌ಬಿಐ ಒದಗಿಸಿರುವ TRL (ಟ್ರಿಪಲ್ ಲಾಕ್ ರಿಸೆಪ್ಟಕಲ್) ಮೂಲಕವೂ ನಾಗರಿಕರು ತಮ್ಮ ನೋಟುಗಳನ್ನು ಖಾತೆಗೆ ಜಮೆ ಮಾಡಿಕೊಳ್ಳಬಹುದಾಗಿದೆ.
2016ರಲ್ಲಿ ಅಪನಗದೀಕರಣದ (demonetisation) ಸಂದರ್ಭದಲ್ಲಿ ಹೊರತರಲಾದ 2000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಮೇ 19ರಂದು ಆರ್‌ಬಿಐ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ 2000 ರು. ಮುಖಬೆಲೆಯ ಶೇ.97ರಷ್ಟು ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದವು. ಬ್ಯಾಂಕ್ ಶಾಖೆಯ ಮೂಲಕ ಇಂತಹ ನೋಟು ಬದಲಾವಣೆ ಮಾಡಿಕೊಳ್ಳಲು ಅಥವಾ ಖಾತೆಗೆ ಜಮೆ ಮಾಡಿಕೊಳ್ಳಲು ಸೆ.30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಬಳಿಕ ಅದನ್ನು ಅ.7ರವರೆಗೆ ವಿಸ್ತರಿಸಲಾಗಿತ್ತು. ಅ.7ರ ನಂತರ ಬ್ಯಾಂಕುಗಳಲ್ಲಿ ನೋಟು ಬದಲಾವಣೆ ನಡೆಯುತ್ತಿಲ್ಲ. ಸದ್ಯ ಆರ್‌ಬಿಐನ 19 ಶಾಖೆಗಳಲ್ಲಿ ಮಾತ್ರ ನೋಟುಗಳನ್ನು ಖಾತೆಗೆ ಜಮೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
ನೀಲಿ ಕಣ್ಣು ತೆಳ್ಳಗೆ ಬೆಳ್ಳಗೆ... ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್ : ಕೇಸ್ ಜಡಿದ ಗಗನಸಖಿಯರು..!