ಕೇವಲ ಒಂದು ದಿನದ ಖಡ್ಗಮೃಗ ಮರಿಯ ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ

Published : Apr 16, 2026, 05:18 PM IST
One Day Old Rhino Baby

ಸಾರಾಂಶ

ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು ಹಂಚಿಕೊಂಡ, ಜನಿಸಿ ಕೇವಲ ಒಂದು ದಿನವಾದ ಖಡ್ಗಮೃಗದ ಮರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಪರೂಪದ ಚಿತ್ರವನ್ನು ತರಬೇತಿ ಪಡೆದ ಆನೆಯ ಮೇಲೆ ಕುಳಿತು ಸುರಕ್ಷಿತವಾಗಿ ತೆಗೆಯಲಾಗಿದೆ.

ವನ್ಯಲೋಕದ ಅದ್ಭುತ: ತಾಯಿ ಖಡ್ಗಮೃಗದ ಜೊತೆ ಪುಟಾಣಿ ಮರಿಯ ಮೊದಲ ಹೆಜ್ಜೆ

ಪ್ರಕೃತಿ ಹಾಗೂ ವನ್ಯಜೀವಿಗಳ ಲೋಕವೇ ಒಂದು ಅದ್ಭುತ ಪ್ರಪಂಚ. ಸಾಮಾನ್ಯರಿಗೆ ನೋಡುವುದಕ್ಕೆ ಅಪರೂಪವೆನಿಸುವ ವನ್ಯಲೋಕದ ಕೆಲ ಅಪರೂಪದ ಅದ್ಭುತಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿರ್ತವೆ. ವನ್ಯಜೀವಿ ಛಾಯಾಚಿತ್ರ ಗ್ರಾಹಕರು ಹಾಗೂ ಕೆಲವು ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳು ಈ ವೀಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾದ ಪರ್ವಿನ್ ಕಸ್ವಾನ್ ಅವರು ಜನಿಸಿ ಕೇವಲ ಒಂದು ದಿನವಷ್ಟೇ ಆದ ಖಡ್ಗಮೃಗದ ಮರಿಯೊಂದರ ಫೋಟೋವನ್ನು ಹಂಚಿಕೊಂಡಿದ್ದು, ಜನ ಸಾಮಾನ್ಯರಿಗೆ ಅತೀ ಅಪರೂಪವೆನಿಸುವ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಪರೂಪದ ಫೋಟೋ

ಸಣ್ಣ ಮರಿ ಜೊತೆಗಿರುವ ಸಮಯದಲ್ಲಿ ತಾಯಿ ಖಡ್ಗಮೃಗಗಳು ಬಹಳಷ್ಟು ಜಾಗೃತವಾಗಿರುತ್ತವೆ. ಮರಿಯ ಸಮೀಪ ಬಂದಂರಂತು ಅವುಗಳು ಅಪಾಯಕಾರಿಯಾಗಿ ಆಕ್ರಮಣ ಮಾಡುವುದಕ್ಕೆ ಸಿದ್ಧವಾಗಿರುತ್ತವೆ. ಹೀಗಾಗಿ ಒಂದು ದಿನವಷ್ಟೇ ಆಗಿರುವ ಈ ಮರಿಯ ಫೋಟೋವನ್ನು ಬಹಳ ಜಾಗರೂಕತೆಯಿಂದ ತರಬೇತಿ ಪಡದ ಆನೆ ಮೇಲೆ ಕುಳಿತು ತೆಗೆಯಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿ ಪರ್ವಿನ್ ಕಸ್ವಾನ್ ಅವರು ನೀಡಿದ್ದಾರೆ.

ಒಂದು ದಿನದ ಖಡ್ಗಮೃಗದ ಮರಿ ಹೇಗೆ ಕಾಣುತ್ತದೆ ಎಂಬುದನ್ನು ನೀವು ಎಂದಿಗೂ ನೋಡಿಲ್ಲದಿದ್ದರೆ... ನಮ್ಮ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರತಿಯೊಂದು ಖಡ್ಗಮೃಗವನ್ನು ರೆಕಾರ್ಡ್ ಹಾಗೂ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು 7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಆಗಷ್ಟೇ ಜನಿಸಿದ ಖಡ್ಗಮೃಗದ ಮರಿ ತನ್ನ ಮೊದಲ ಹೆಜ್ಜೆಗಳನ್ನು ಇಡುವುದನ್ನು ನೋಡಬಹುದಾಗಿದೆ. ಅರಣ್ಯ ಇಲಾಖೆಯ ದಿನ ನಿತ್ಯದ ಗಸ್ತು ಸಮಯದಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.ಈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಪ್ರತಿಯೊಂದು ಖಡ್ಗಮೃಗವನ್ನು ಬಹಳ ಕಾಳಜಿಯಿಂದ ರೆಕಾರ್ಡ್ ಮಾಡಿ ಮಾನಿಟರಿಂಗ್ ಮಾಡಲಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಖಡ್ಗಮೃಗದ ಮರಿ ಸಮೀಪ ಹೋಗುವುದು ಅಷ್ಟು ಸುಲಭವಲ್ಲ

ಆನೆಯ ಮೇಲೆ ಕುಳಿತು ಬಹಳ ಸುರಕ್ಷಿತವಾದ ಅಂತರದಿಂದ ಈ ಈ ಖಡ್ಗಮೃಗದ ವೀಡಿಯೋವನ್ನು ಚಿತ್ರೀಕರಿಸಲಾಗಿದೆ. ಇವುಗಳ ಜನಸಂಖ್ಯೆಯ ದಾಖಲೆಗಾಗಿ ಇಲ್ಲಿ ಪ್ರತಿಯೊಂದು ಹೊಸಮರಿಯನ್ನು ಬಹಳ ಕಾಳಜಿಯಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ದಾಖಲೀಕರಣವೂ ಅವುಗಳ ಸುದೀರ್ಘ ಕಾಲದ ಸಂರಕ್ಷಣಾ ಯೋಜನೆಗೆ ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕುತೂಹಲದಿಂದ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ತಾಯಿ ಖಡ್ಗಮೃಗದ ಸಮೀಪ ಬಹಳ ಜಾಗರೂಕವಾಗಿರಬೇಕು. ಅರಣ್ಯ ಅಧಿಕಾರಿಗಳು ಕೂಡ ಖಡ್ಗಮೃಗಗಳನ್ನು ದಾಖಲಿಸುವ ವೇಳೆ ಸುರಕ್ಷಿತವಾದ ಅಂತರದ ಜೊತೆಗೆ ಹಲವು ಪ್ರೋಟೋಕಾಲ್‌ಗಳನ್ನು ಕಡ್ಡಾಯವಾಗಿ ಫಾಲೋ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯನ್ನು ತಬ್ಬಿ ಹಠ ಹಿಡಿದ ಪುಟಾಣಿ ಸೊಸೆ; ಎಲ್ಲರ ಕಣ್ಣಾಲಿಗಳು ತೇವ!

ನೋಡುವುದಕ್ಕೆ ಅವುಗಳು ಬಹಳ ಶಾಂತವಾಗಿರುವಂತೆ ಕಂಡು ಬಂದರೂ ಸುರಕ್ಷತೆಯ ವಿಚಾರದಲ್ಲಿ ಬಹಳ ರಕ್ಷಣಾತ್ಮಕವಾಗಿರುವ ಅವರು ಮರಿಗಳಿರುವ ಸಮಯದಲ್ಲಿ ಇನ್ನಷ್ಟು ಜಾಗರೂಕರಾಗಿರುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ. ಖಡ್ಗಮೃಗವನ್ನು ವ್ಯಾಪಕವಾಗಿ ಬೇಟೆಯಾಡಿ ಮಯನ್ಮಾರ್ ಮೂಲಕ ಚೀನಾಕ್ಕೆ ಸ್ಮಗ್ಲಿಂಗ್ ಮಾಡುವುದರಿಂದ ಅವುಗಳು ಕೆಲವರ್ಷಗಳ ಹಿಂದೆ ಅಳಿವಿನಂಚಿಗೆ ತಲುಪಿದ್ದವು. ಆದರೆ ಅರಣ್ಯ ಇಲಾಖೆಯ ಬಹಳ ಜಾಗೃತ ಕಾರ್ಯಾಚರಣೆಯಿಂದಾಗಿ ಅವುಗಳ ಸಂಖ್ಯೆ ಈಗ ಹೆಚ್ಚಾಗಿದೆ.

ಇದನ್ನೂ ಓದಿ:  ಕಾಡು ಹಂದಿಗಳ ಬೆವರಿಳಿಸಿದ ಹ್ಯೂಮನಾಯ್ಡ್ ರೋಬೋಟ್: ಸಿನಿಮಾ ಶೈಲಿಯಲ್ಲಿ ಹಂದಿ ಬೇಟೆಯಾಡಿದ ಎಡ್ವರ್ಡ್ 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ
ಸೋಶಿಯಲ್ ಮೀಡಿಯಾ ಸ್ಟಾರ್ ಹೊಸ ಬಟ್ಟೆ ಆರ್ಡರ್; ರೀಲ್ಸ್ ಮಾಡಿದ ನಂತರ ಬಟ್ಟೆ ರಿಟರ್ನ್ ಮಾಡುವಾಗ ಸಿಕ್ಕಿಬಿದ್ದ ಕಿರಾತಕಿ!