ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿ ಶನಿವಾರ ತೀರ್ಪು!

By Kannadaprabha News  |  First Published Nov 10, 2019, 8:43 AM IST

ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಮತ್ತು ರಜಾ ದಿನಗಳಂದು ಕೋರ್ಟ್ ಯಾವುದೇ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುವುದಿಲ್ಲ. ಅಯೋಧ್ಯಾ ವಿಚಾರಣೆಯನ್ನು ಶನಿವಾರ ನಡೆಸಿದ್ದು ವಿಶೇಷ. ಇದು 69  ವರ್ಷಗಳ
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲ ತೀರ್ಪಾಗಿದೆ. 


ನವದೆಹಲಿ (ನ. 10): ಕೋರ್ಟ್ ಕಲಾಪಗಳು ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದವರೆಗೆ ನಡೆಯುತ್ತವೆ. ಶನಿವಾರ ಮತ್ತು ಭಾನುವಾರ ಮತ್ತು ರಜಾ ದಿನಗಳಂದು ಯಾವುದೇ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುವುದಿಲ್ಲ. ವಿಶೇಷ ಪ್ರಕರಣಗಳ ಕುರಿತು ವಾರಾಂತ್ಯ, ರಜೆ ವೇಳೆಯೂ ವಿಚಾರಣೆ ನಡೆದಿದ್ದಿದೆ. ಆದರೆ, ರಾಮಜನ್ಮಭೂಮಿ ಭೂ ವಿವಾದ ಕುರಿತು ಶನಿವಾರದಂದೇ ಕೋರ್ಟ್ ತೀರ್ಪು ಹೊರಡಿಸಿದೆ. ಇದು 69 ವರ್ಷಗಳ ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲ ತೀರ್ಪಾಗಿದೆ.

ಸುದೀರ್ಘ ವಿಚಾರಣೆ: ಇತಿಹಾಸದಲ್ಲೇ 2 ನೇ ಪ್ರಕರಣ

Tap to resize

Latest Videos

undefined

ಅಸಾಧಾರಣ ಪ್ರಕರಣಗಳ ಕುರಿತು ಕೋರ್ಟ್ ರಜೆ ದಿನಗಳಲ್ಲಿ ವಿಚಾರಣೆ ನಡೆಸಿದೆ. ಆದರೆ, ನನಗೆ ತಿಳಿದ ಮಟ್ಟಿಗೆ ಶನಿವಾರದಂದು ತೀರ್ಪು ನೀಡಿದ ಬಗ್ಗೆ ಯಾವುದೇ ಉದಾಹರಣೆಗಳು ಇಲ್ಲ. ಅಯೋಧ್ಯೆ ರಾಮಜನ್ಮಭೂಮಿ ಕುರಿತು ಶನಿವಾರ ನೀಡಿದ ತೀರ್ಪೇ ಮೊದಲು ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಆಪ್ತ ಕಾರ್ಯದರ್ಶಿ ಎಚ್.ಕೆ.ಜುನೇಜಾ ತಿಳಿಸಿದ್ದಾರೆ.

ಅಲ್ಲದೇ, 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ವೇಳೆ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಂ.ಎನ್. ವೆಂಕಟಾಚಲಯ್ಯ ಅವರು ತಮ್ಮ ನಿವಾಸದಲ್ಲಿ ಸಂಜೆ ವೇಳೆ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿದ್ದರು ಎಂದು ಇದೇ ವೇಳೆ ಹೇಳಿದ್ದಾರೆ.

ಅಯೋಧ್ಯೆ ತೀರ್ಪಿಗೆ ಎಎಸ್‌ಐ ಉತ್ಖನನವೇ ಪ್ರಮುಖ ಆಧಾರ

ಅಯೋಧ್ಯೆ ತೀರ್ಪು ಬಂತು ಮುಂದೇನು?

1.  ಅಯೋಧ್ಯೆಯ ವಿವಾದಿತ ಜಾಗದ ಹಕ್ಕು ರಾಮಲಲ್ಲಾ ಪಾಲಾಗುತ್ತದೆ. ಆದರೆ ಭೂಮಿಯ ಸ್ವಾಧೀನ ಕೇಂದ್ರ ಸರ್ಕಾರದ ಬಳಿ ಇರುತ್ತದೆ

2.  ರಾಮಮಂದಿರ ನಿರ್ಮಾಣಕ್ಕೆ 3 ತಿಂಗಳಲ್ಲಿ ಕೇಂದ್ರ ಸರ್ಕಾರ ಟ್ರಸ್ಟ್‌ವೊಂದನ್ನು ಸ್ಥಾಪಿಸಬೇಕು. ಅದಕ್ಕೆ ಈ ಭೂಮಿಯನ್ನು ವರ್ಗಾಯಿಸಬೇಕು

3.  ವಿವಾದಿತ ಸ್ಥಳದ ಸುತ್ತಲಿನ ೬೭ ಎಕರೆ ಜಾಗವೂ ಸರ್ಕಾರದ ವಶದಲ್ಲಿದೆ. ಅದನ್ನು ಬೇಕಾದರೂ ಸರ್ಕಾರ ಉದ್ದೇಶಿತ ಟ್ರಸ್ಟ್‌ಗೆ ಕೊಡಬಹುದು

4. ಟ್ರಸ್ಟ್‌ನ ಕಾರ್ಯನಿರ್ವಹಣೆ, ಟ್ರಸ್ಟಿಗಳ ಅಧಿಕಾರ, ದೇಗುಲ ನಿರ್ಮಾಣ ಕುರಿತು ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಬೇಕು

5. ಸುನ್ನಿ ವಕ್ಫ್ ಮಂಡಳಿ ಹೊಸ ಮಸೀದಿ ನಿರ್ಮಾಣ ಮಾಡಲು ಸರ್ಕಾರ 5 ಎಕರೆ ಜಾಗವನ್ನು ಸೂಕ್ತ ಜಾಗದಲ್ಲಿ ಮಂಜೂರು ಮಾಡಬೇಕು

6. ಅಯೋಧ್ಯೆಯ ಪ್ರಮುಖ ಸ್ಥಳ ಅಥವಾ ವಿವಾದಿತ ಜಾಗದ ಸುತ್ತಲಿನ ೬೭ ಎಕರೆಯಲ್ಲಿ ಬೇಕಾದರೂ ಜಾಗ ಕೊಡಬಹುದು.

7. ದೇಗುಲ ನಿರ್ಮಾಣಕ್ಕೆ ಟ್ರಸ್ಟ್ ಹಾಗೂ ಮಸೀದಿ ನಿರ್ಮಾಣಕ್ಕೆ ಜಾಗ ಮಂಜೂರು ಎರಡೂ ಒಂದೇ ಅವಧಿಯಲ್ಲಿ ಆಗಬೇಕು.

click me!