68 ದಿನಗಳು: ಕೇಶವಾನಂದ ಭಾರತಿ ಪ್ರಕರಣ ವಿಚಾರಣೆ | 40 ದಿನಗಳು: ಅಯೋಧ್ಯೆ ಭೂವಿವಾದ ಪ್ರಕರಣದ ವಿಚಾರಣೆ|ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಸುದೀರ್ಘವಾಗಿ ವಿಚಾರಣೆ ನಡೆದ ಎರಡನೇ ಮಹತ್ವದ ಪ್ರಕರಣ|
ನವದೆಹಲಿ[ನ.10]: ರಾಮಜನ್ಮಭೂಮಿ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ನಾನಾ ಕಾರಣಗಳಿಂದ ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಅಯೋಧ್ಯೆ ಭೂವಿವಾದ ಪ್ರಕರಣದ ಪಂಚ ಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಸುದೀರ್ಘವಾಗಿ ವಿಚಾರಣೆ ನಡೆದ ಎರಡನೇ ಮಹತ್ವದ ಪ್ರಕರಣವಾಗಿದೆ.
ಅಯೋಧ್ಯೆ ತೀರ್ಪಿಗೂ ಮುನ್ನ ಪುರಾತತ್ವ ಇಲಾಖೆ ಕಲೆ ಹಾಕಿದ್ದ ಈ 10 ಸಾಕ್ಷ್ಯಗಳು
undefined
40 ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ ಪಂಚಸದಸ್ಯ ಪೀಠ ಶನಿವಾರ ತೀರ್ಪು ನೀಡಿತು. ಆಗಸ್ಟ್ 6 ರಂದು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಆರಂಭಿಸಿ ಅಕ್ಟೋಬರ್ 16 ರಂದು ವಿಚಾರಣೆ ಅಂತ್ಯಗೊಳಿಸಿ, ತೀರ್ಪು ಕಾಯ್ದಿರಿಸಿತ್ತು.ಇತಿಹಾಸದ ಪುಟಗಳನ್ನು ಮೆಲುಕು ಹಾಕಿದರೆ ಈ ಹಿಂದೆ 1973 ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ನ್ಯಾಯಪೀಠ 68 ದಿನಗಳ ಕಾಲ ವಿಚಾರಣೆನಡೆಸಿ ಬಳಿಕ ತೀರ್ಪು ನೀಡಿತ್ತು. ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ 13 ನ್ಯಾಯಾಧೀಶರ ನ್ಯಾಯಪೀಠವನ್ನು ರಚನೆ ಮಾಡಿತ್ತು. ಇದು ಸುಪ್ರೀಂ ಇತಿಹಾಸದಲ್ಲಿ ಪ್ರಕರಣವೊಂದರ ಇತ್ಯರ್ಥಕ್ಕೆ ರಚಿಸಲಾದ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ನ್ಯಾಯಪೀಠವಾಗಿತ್ತು. ಇನ್ನು ಆಧಾರ್ ಯೋಜನೆಯ ಮಾನ್ಯತಾ ಅವಧಿಗೆ ಸಂಬಂಧಿಸಿದ ಪ್ರಕರಣ 38 ದಿನಗಳ ಕಾಲ ನಿರಂತರವಾಗಿ ನಡೆದಿತ್ತು.
5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!
ತೀರ್ಪಿನಲ್ಲಿ ಸುಪ್ರೀಂ ಉಲ್ಲೇಖಿಸಿದ 142ನೇ ವಿಧಿ ಏನು?
ಅಯೋಧ್ಯೆ ಪ್ರಕರಣದಲ್ಲಿ ನಿರ್ಮೋಹಿ ಅಖಾಡ ಹಕ್ಕುದಾರನಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್,ಇದೇ ವೇಳೆ ನೂತನ ಮಂದಿರ ನಿರ್ಮಾಣಕ್ಕಾಗಿ ರಚಿಸಲಿರುವ ಸಮಿತಿಯಲ್ಲಿ ನಿರ್ಮೋಹಿ ಅಖಾಡಕ್ಕೂ ಪ್ರಾತಿನಿಧ್ಯ ಕಲ್ಪಿಸುವಂತೆ ಸೂಚಿಸಿದೆ. ಹಕ್ಕುದಾರನಲ್ಲದ ಸಂಘಟನೆಯೊಂದಕ್ಕೆ ಹೀಗೆ ವಿಶೇಷ ಸ್ಥಾನ ಕಲ್ಪಿಸಲು, ಸುಪ್ರೀಂಕೋರ್ಟ್ ಸಂವಿಧಾನದ 142 ನೇ ವಿಧಿಯಡಿ ತನಗೆ ನೀಡಿರುವ ವಿಶೇಷ ಅಧಿಕಾರ ಬಳಸಿದೆ. ಸಂಸತ್ತು ರೂಪಿಸಿದ ಕಾನೂನಿನ ನಿಬಂಧನೆಗೆ ಒಳಪಟ್ಟು, ದೇಶಕ್ಕೆ ಸಂಬಂಧಿಸಿದಂತೆ, ಯಾವುದೇ ವ್ಯಕ್ತಿಯ ಹಾಜರಾತಿಯನ್ನು ಭದ್ರಪಡಿಸುವ ಉದ್ದೇಶದಿಂದ ಯಾವುದೇ ಆದೇಶವನ್ನು ಮಾಡುವ ಎಲ್ಲ ಅಧಿಕಾರವನ್ನು 142 ನೇ ವಿಧಿಯು ಸುಪ್ರೀಂಕೋರ್ಟ್‌ಗೆ ನೀಡಿದೆ.
ಅಯೋಧ್ಯೆ ತೀರ್ಪು: ಪಂಚ ನ್ಯಾಯಾಧೀಶರಲ್ಲಿ ಒಬ್ಬರು ನಮ್ಮ ಕನ್ನಡಿಗರು!