ರಾಮ ಮಂದಿರ ದರ್ಶನಕ್ಕೆ ಆಯೋಧ್ಯೆಗೆ ಬಂದಿಳಿದ ರಾಮಾಯಣದ ಶ್ರೀರಾಮ, ಅದ್ಧೂರಿ ಸ್ವಾಗತ!

By Suvarna News  |  First Published Jan 14, 2024, 4:13 PM IST

ರಾಮ ಮಂದಿರ ದರ್ಶನಕ್ಕಾಗಿ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಮಾಯಣ ಧಾರವಾಹಿಯ ಶ್ರೀರಾಮನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಹಲವರು ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದರೆ, ಸೆಲ್ಫಿ ಪಡೆಯಲು ಜನರ ದಂಡೆ ಸಾಲು ನಿಂತಿತ್ತು. ಜೈ ಶ್ರೀರಾಮ ಘೋಷಣೆ ಮೂಲಕ ಅರುಣ್ ಗೋವಿಲ್‌ಗೆ ಅದ್ಧೂರಿ ಸ್ವಾಗತ ನೀಡಿರುವ ವಿಡಿಯೋ ವೈರಲ್ ಆಗಿದೆ.


ಆಯೋಧ್ಯೆ(ಜ.14) ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ದೇಶದೆಲ್ಲಡೆ ಜೈ ಶ್ರೀರಾಮ ಘೋಷಣೆ ಮೊಳಗುತ್ತಿದೆ. ಆಯೋಧ್ಯೆ ನಗರಿ ಕಂಗೊಳಿಸುತ್ತಿದೆ. ಇದೀಗ ಶ್ರೀರಾಮಾಯಣ ಧಾರವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್, ಆಯೋಧ್ಯೆಗೆ ಆಗಮಿಸಿದ್ದಾರೆ. ಶ್ರೀರಾಮ ಮಂದಿರ ದರ್ಶನ ಪಡೆಯಲು ಆಯೋಧ್ಯೆಗೆ ಆಗಮಿಸಿದ ರಾಮಾಯಣ ಧಾರವಾಹಿಯ ಶ್ರೀರಾಮನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಆಯೋಧ್ಯೆ ವಿಮಾನ ನಿಲ್ದಾಣದಲ್ಲಿ ಸಾಲು ಗಟ್ಟಿ ನಿಂತ ಜನ ಜೈಶ್ರೀರಾಮ ಘೋಷಣೆಯೊಂದಿಗೆ ಅರುಣ್ ಗೋವಿಲ್ ಸ್ವಾಗತ ಮಾಡಿದ್ದಾರೆ.

ಅರುಣ್ ಗೋವಿಲ್ ಸ್ವಾಗತ ಹಾಗೂ ಆಯೋಧ್ಯೆಯಲ್ಲಿನ ವಾತಾವರಣ ಕುರಿತು ವಿಡಿಯೋ ಭಾರಿ ವೈರಲ್ ಆಗಿದೆ. ಆಯೋಧ್ಯೆಯ  ವಾಲ್ಮೀಕಿ ಮಹರ್ಷಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದೆ. ಅರುಣ್ ಗೋವಿಲ್ ವಿಮಾನದೊಳಗೆ ಕುಳಿತಿರುವ ದೃಶ್ಯಗಳಲ್ಲೂ ಜೈಶ್ರೀರಾಮ್ ಘೋಷಣೆ ಕೇಳುತ್ತಿದೆ.

Tap to resize

Latest Videos

ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!

ಬಳಿಕ ವಿಮಾನದಿಂದ ಇಳಿದ ಅರುಣ್ ಗೋವಿಲ್‌ಗೆ ಜೈಶ್ರೀರಾಮ್ ಘೋಷಣೆ ಮೂಲಕವೇ ಜನ ಸ್ವಾಗತ ಕೋರಿದ್ದಾರೆ. ಹಲವರು ಅರುಣ್ ಗೋವಿಲ್ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಸೆಲ್ಫಿ ಪಡೆಯಲು ಜನರು ಮುಗಿ ಬಿದ್ದಿದ್ದಾರೆ. ಅರುಣ್ ಗೋವಿಲ್ ಶ್ರೀರಾಮ ಮಂದಿರಕ್ಕೆ ತೆರಳಿ ಆವರಣದಲ್ಲಿರುವ ರಾಮಲಲ್ಲಾ ದರ್ಶನ ಪಡೆಯಲಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Arun Govil (@siyaramkijai)

 

90ರ ದಶಕದಲ್ಲಿ ರಾಮಾಯಣ ಧಾರಾವಾಹಿಯ ಅತ್ಯಂತ ಜನಪ್ರಿಯ ಧಾರವಾಗಿಯಾಗಿದೆ. ಇಷ್ಟೇ ಅಲ್ಲ ಈ ಧಾರವಾಹಿಯ ಎಲ್ಲಾ ಪಾತ್ರಧಾರಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಾಕ್ಷಾತ್ ದೇವರ ರೀತಿಯಲ್ಲೇ ಜನರು ಸತ್ಕರಿಸಿದ್ದಾರೆ. 1990 ರ ಸಮಯದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯು ಬಹಳ ಜನಪ್ರಿಯವಾಗಿತ್ತು. ಧಾರಾವಾಹಿಯಲ್ಲಿ ನಟಿಸಿದ್ದ ರಾಮ,ಲಕ್ಷ್ಮಣ ಮತ್ತು ಸೀತೆಯ ಪಾತ್ರಧಾರಿಗಳನ್ನು ಹಲವಾರು ಜನರು ದೇವರಂತೆ ಪೂಜಿಸುತ್ತಿದ್ದರು ಹಲವು ಬಾರಿ ಅರುಣ್ ಗೋವಿಲ್ ವಿಮಾನ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ಪಾದ ಮುಟ್ಟಿ ನಮಸ್ಕರಿಸಿದ, ಸಾಷ್ಟಾಂಗ ನಮಸ್ಕಾರ ಮಾಡಿದ ಹಲವು ಘಟನೆಗಳು ನಡೆದಿದೆ.

ರಾಮಮಂದಿರ ಪ್ರಾಣಪ್ರತಿಷ್ಠೆಗೆ ಶಾಲಾ ಕಾಲೇಜಿಗೆ ರಜೆ, ಮದ್ಯ ಮಾರಾಟ ನಿಷೇಧ; ಸಿಎಂ ಯೋಗಿ ಘೋಷಣೆ!

ಇತ್ತೀಚ್ಚೆಗೆ ರಾಮ ಪಾತ್ರಧಾರಿ ಅರುಣ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಕಂಡ ಮಹಿಳೆಯೊಬ್ಬರು ಕಾಲಿಗೆ ಅಡ್ಡಬಿದ್ದು, ನಂತರ ಅವರ ಕೈಗಳನ್ನು ಹಿಡಿದುಕೊಂದು ಭಕ್ತಿಯಿಂದ ಮಾತಾನಾಡಿದರು. ಅರುಣ್‌ ಕೂಡಾ ಮಹಿಳೆಯೊಂದಿಗೆ ಉತ್ತಮವಾಗಿ ಸಂಭಾಷಣೆ ನಡೆಸಿ ನಮಸ್ಕರಿಸಿದರು. ಈ ವಿಡಿಯೋವನ್ನು ನೋಡಿ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!