ರಾಮ ಮಂದಿರ ಲೋಕಾರ್ಪಣೆ ದಿನ ಕಲಾರಾಮ್ ದೇಗುಲಕ್ಕೆ ಬನ್ನಿ: ರಾಷ್ಟ್ರಪತಿಗೆ ಉದ್ಧವ್‌ ಠಾಕ್ರೆ ಆಹ್ವಾನ

By BK AshwinFirst Published Jan 14, 2024, 1:25 PM IST
Highlights

ಜನವರಿ 22 ರಂದು ನಾಸಿಕ್‌ನ ಕಲಾರಾಮ್ ದೇವಸ್ಥಾನದಲ್ಲಿ ಉದ್ಧವ್‌ ಠಾಕ್ರೆ ಮಹಾ ಆರತಿ ಮಾಡಲಿದ್ದು, ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಆಹ್ವಾನ ನೀಡಲಾಗಿದೆ.

ಮುಂಬೈ (ಜನವರಿ 14, 2024): ಜನವರಿ 22 ರಂದು ನಾಸಿಕ್‌ನ ಕಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಉದ್ಧವ್‌ ಠಾಕ್ರೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡುವ ಪ್ರಯತ್ನದಲ್ಲಿ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಆಹ್ವಾನ ನೀಡಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಉದ್ಧವ್ ಠಾಕ್ರೆ ರನ್ನು ಆಹ್ವಾನಿಸಿಲ್ಲ. ಈ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್‌ನ ಕಲಾರಾಮ್ ದೇವಸ್ಥಾನದಲ್ಲಿ ಆರತಿ ಮಾಡಲಿದ್ದಾರೆ. ಮುರ್ಮು ಅವರನ್ನು ಜನಸಂದಣಿಯಲ್ಲಿ ಒಬ್ಬರಂತೆ ಪರಿಗಣಿಸಲಾಗುವುದಿಲ್ಲ. ಈ ಹಿನ್ನೆಲೆ ಕಲಾರಾಮ್‌ ದೇವಸ್ಥಾನಕ್ಕೆ ಬರುವಂತೆ ಆಹ್ವಾನ ನೀಡಿ ಉದ್ಧವ್ ಹಿಂದಿಯಲ್ಲಿ ಪತ್ರ ಬರೆದಿದ್ದಾರೆ.

ಇದನ್ನು ಓದಿ: ಹುಸಿ ಜಾತ್ಯತೀತತೆಯ ಬಣ್ಣ ಬಯಲು ಮಾಡಿದ ಅಯೋಧ್ಯೆ ರಾಮಮಂದಿರ ಹೋರಾಟ: ಅಡ್ವಾಣಿ

ಬಾಂದ್ರಾ ನಿವಾಸವಾದ ಮಾತೋಶ್ರೀಯಲ್ಲಿ ಮಾತನಾಡಿದ ಉದ್ಧವ್, ವಂಶಾಡಳಿತ ರಾಜಕಾರಣದಿಂದ ದೇಶವು ಸಂಕಷ್ಟಕ್ಕೆ ಸಿಲುಕಿದೆ ಎಂಬ ಹೇಳಿಕೆಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ, ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಹಾಗೂ ಪುತ್ರ ಶ್ರೀಕಾಂತ್ ಶಿಂಧೆ ರನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ.

ಉದ್ಧವ್‌ ಠಾಕ್ರೆ ಬಣದಿಂದ ಏಕನಾಥ್‌ ಶಿಂಧೆ ನಿರ್ಗಮಿಸಿದ ನಂತರ ಶನಿವಾರ ಉದ್ಧವ್‌ ಠಾಕ್ರೆ ಮೊದಲ ಬಾರಿಗೆ ಕಲ್ಯಾಣ್ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದರು. ಶ್ರೀಕಾಂತ್ ಶಿಂಧೆ ಕಲ್ಯಾಣ್ ಸಂಸದರಾಗಿದ್ದಾರೆ. ಈ ಭೇಟಿಯ ವೇಳೆ ಮಾತನಾಡಿದ ಉದ್ಧವ್, ಪ್ರಧಾನಿ ಮೋದಿ ವಂಶ ರಾಜಕಾರಣ ವಿರುದ್ಧ ಇದ್ದರೆ, ಅವರು ದೇಶದ್ರೋಹಿ ತಂದೆ ಮತ್ತು ಮಗನ ಟಿಕೆಟ್ ಕಡಿತಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಹಾಗೂ, ಇದು ದೇಶದ್ರೋಹಿಗಳ ಕೊನೆಯ ದಿನವಾಗಿದ್ದು, ನಾಗರಿಕರ ಸಹಕಾರದೊಂದಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇನೆ ಎಂದರು.

ಗೋಹತ್ಯೆ, ಲವ್‌ಜಿಹಾದ್ ತಡೆದರೆ ಬೋಗಸ್ ಕೇಸ್ ಹಾಕ್ತಾರೆ ವಿನಃ ಗಲ್ಲಿಗೇರಿಸೊಲ್ಲ: ಪ್ರಮೋದ್ ಮುತಾಲಿಕ್

ಉದ್ಧವ್‌ ಠಾಕ್ರೆ ನಾಸಿಕ್‌ನ ಗೋದಾವರಿ ದಡದಲ್ಲಿ 'ಮಹಾ ಆರತಿ' ಮಾಡುವುದಾಗಿ ಘೋಷಿಸಿದ್ದಾರೆ ಮತ್ತು ಭಗವಾನ್ ರಾಮನು ತನ್ನ ವನವಾಸದ ಸಮಯದಲ್ಲಿ ವಾಸಿಸುತ್ತಿದ್ದನೆಂದು ಹೇಳಲಾದ ಪಂಚವಟಿಯಲ್ಲಿರುವ ಕಲಾರಾಮ್ ದೇವಾಲಯಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ.

ರಾಮ ಮಂದಿರಕ್ಕಾಗಿ ನಡೆದ ಸುದೀರ್ಘ ಹೋರಾಟಕ್ಕೆ ಸುಪ್ರೀಂಕೋರ್ಟ್‌ ಅಂತಿಮವಾಗಿ ನ್ಯಾಯ ನೀಡುವುದರೊಂದಿಗೆ ಕೊನೆಗೊಂಡಿತು. ಪ್ರಾಣ ಪ್ರತಿಷ್ಠಾಪನೆಯು ದೇಶದ ಅಸ್ಮಿತೆಯ ಪ್ರಶ್ನೆಯಾಗಿದೆ. ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಮತ್ತು ಅವರೇ ಲೋಕಾರ್ಪಣೆ ಮಾಡಬೇಕು.

ಆದರೆ ಕೇಂದ್ರ ಸರ್ಕಾರ ಅವರಿಗೆ ಆಹ್ವಾನ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುತ್ತಿದ್ದೇವೆ. ನಾನು ಕಟ್ಟಾ ಹಿಂದೂ. ಲಕ್ಷಾಂತರ ಭಕ್ತರೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಹೋಗಲು ಬಯಸುತ್ತೇನೆ. ರಾಮ ಮಂದಿರ ವಿಚಾರದಲ್ಲಿ ಶಿವಸೇನೆಯ ಪಾತ್ರ ಮತ್ತು ಬಾಳಾಸಾಹೇಬ್ ಠಾಕ್ರೆ ತೆಗೆದುಕೊಂಡ ನಿಲುವು ಜನರಿಗೆ ತಿಳಿದಿದೆ ಎಂದೂ ಉದ್ಧವ್‌ ಠಾಕ್ರೆ ಹೇಳಿಕೊಂಡರು.

click me!