ರಾಮಮಂದಿರ 1000 ವರ್ಷ ಆದರೂ ಗಟ್ಟಿಯಾಗಿರುತ್ತೆ!

By Kannadaprabha News  |  First Published Aug 13, 2020, 7:35 AM IST

ರಾಮಮಂದಿರ 1000 ವರ್ಷ ಆದರೂ ಗಟ್ಟಿಯಾಗಿರುತ್ತೆ| ಭೂಕಂಪ ತಡೆದುಕೊಳ್ಳುವ ಶಕ್ತಿ: ಟ್ರಸ್ಟ್‌


ಅಯೋಧ್ಯೆ(ಆ.13): ‘ಅಯೋಧ್ಯೆ ರಾಮಮಂದಿರ ಎಷ್ಟುಬಲಯುತವಾಗಿ ಇರಲಿದೆ ಎಂದರೆ 1000 ವರ್ಷಗಳ ಕಾಲ ಬಾಳಿಕೆ ಬರಲಿದೆ ಹಾಗೂ ಎಂಥ ಶಕ್ತಿಶಾಲಿ ಭೂಕಂಪನವನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ’ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

ರಾಮಮಂದಿರಕ್ಕಾಗಿ ಹಿಂದು, ಮುಸ್ಲಿಮರಿಂದ 2100 ಕೆ.ಜಿ ತೂಕದ ಹಿತ್ತಾಳೆ ಗಂಟೆ!

Latest Videos

undefined

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇಗುಲದ ತಳಪಾಯ ಭದ್ರವಾಗಿರಲಿದೆ. ಹೀಗಾಗಿ ಕಟ್ಟಡ ಬಲಶಾಲಿಯಾಗಿರಲಿದ್ದು, ಭೂಕಂಪ ತಡೆದುಕೊಳ್ಳುವ ಶಕ್ತಿ ಹೊಂದಲಿದೆ. ಸಾವಿರ ವರ್ಷದ ಅವಧಿಯವರೆಗೆ ಎಂಥದ್ದೇ ಪ್ರಕೃತಿ ವಿಕೋಪ ತಡೆಯುವ ಶಕ್ತಿ ಅದಕ್ಕೆ ಇರಲಿದೆ. ದೇಗುಲದ ವಿನ್ಯಾಸ ಶೀಘ್ರ ಸಿದ್ಧವಾಗಲಿದೆ. ಅಲ್ಲದೆ, ನಕ್ಷೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಪಾಸು ಮಾಡಲಿದೆ’ ಎಂದರು.

‘ನಕ್ಷೆ ಅಂತಿಮಗೊಳ್ಳಲು ಶುಲ್ಕ ಕಟ್ಟಬೇಕಿದ್ದು, ಯಾವುದೇ ವಿನಾಯಿತಿ ಕೇಳುವುದಿಲ್ಲ. ಟ್ರಸ್ಟ್‌ನಲ್ಲಿ 42 ಕೋಟಿ ರು. ಠೇವಣಿ ಇದೆ. 1 ರು.ನಿಂದ 1 ಕೋಟಿ ರು.ವರೆಗೂ ದೇಣಿಗೆ ಹರಿದುಬಂದಿದೆ’ ಎಂದು ರಾಯ್‌ ಮಾಹಿತಿ ನೀಡಿದರು.

ನೇಪಾಳದಲ್ಲೂ ರಾಮಮಂದಿರ, ಶೀಘ್ರ ಭೂಮಿಪೂಜೆ!

ದೇಗುಲ ನಿರ್ಮಾಣಕ್ಕೆ ನೆಲ ಸಮತಟ್ಟು ಮಾಡುವ ವೇಳೆ ಅನೇಕ ಪ್ರಾಚೀನ ವಸ್ತುಗಳು ಸಿಕ್ಕಿದ್ದು, ಅವನ್ನು ಮಂದಿರದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದೂ ಅವರು ಹೇಳಿದರು.

click me!