ಮೋದಿ ಮೇಲೆ ಮತ್ತೆ ವ್ಯಂಗ್ಯಭರಿತ ದಾಳಿ ಮಾಡಿದ ರಾಹುಲ್ ಗಾಂಧಿ/ ಬಿಜೆಪಿಯ ಸ್ಲೋಗನ್ ಇಟ್ಟುಕೊಂಡೆ ಟೀಕೆ/ 'ಮೋದಿ ಹೈ ತೋ ಮುಮ್ಕಿನ್ ಹೈ'/ ದೇಶದ ಜಿಡಿಪಿ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ನಾರಾಯಣಮೂರ್ತಿ
ನವದೆಹಲಿ(ಆ. 12) ಸ್ವಾತಂತ್ಯಾನಂತರ ಭಾರತದಲ್ಲಿ ಜಿಡಿಪಿ ಅತಿ ಕಡಿಮೆ ಪ್ರಮಾಣಕ್ಕೆ ತಲುಪುತ್ತಿದೆ ಎಂದು ಇನ್ಫೋಸಿಸ್ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.
2019 ರ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಸ್ಲೋಗನ್ ಒಂದನ್ನು ಬಳಸಿಕೊಂಡು ವ್ಯಂಗ್ಯವಾಡಿದ್ದಾರೆ. 'ಮೋದಿ ಹೈ ತೋ ಮುಮ್ಕಿನ್ ಹೈ' (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಮಾತನ್ನೇ ಇಟ್ಟುಕೊಂಡು ಚಾಟಿ ಬೀಸಿದ್ದಾರೆ.
ದುಡ್ಡು ಹಂಚುವುದು ಹೀಗೆ; ಭಾರತಕ್ಕೆ ಪಾಕ್ ಪಾಠ!
ಭಾರತದ ಜಿಡಿಪಿ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದ್ದು ಚೇತರಿಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾರಾಯಣಮೂರ್ತಿ ಹೇಳಿದ್ದರು. ಕೊರೋನಾ ವಿಚಾರದಲ್ಲಿಯೂ ಮೋದಿ ಸರ್ಕಾರವನ್ನು ನಿರಂತರವಾಗಿ ರಾಹುಲ್ ಟೀಕೆ ಮಾಡಿಕೊಂಡು ಬಂದಿದ್ದರು.
मोदी है तो मुमकिन है। pic.twitter.com/V1fS7nStIt
— Rahul Gandhi (@RahulGandhi)