ನಿತ್ಯ 3 ಲಕ್ಷ ಜನರ ತಾಳಿಕೊಳ್ಳುವಂತೆ ಅಯೋಧ್ಯೆ ಪುನರಾಭಿವೃದ್ಧಿ: ಕುಕ್ರೇಜಾ

Published : Jan 10, 2024, 08:00 AM IST
ನಿತ್ಯ 3 ಲಕ್ಷ ಜನರ ತಾಳಿಕೊಳ್ಳುವಂತೆ ಅಯೋಧ್ಯೆ ಪುನರಾಭಿವೃದ್ಧಿ: ಕುಕ್ರೇಜಾ

ಸಾರಾಂಶ

ಪವಿತ್ರ ರಾಮಮಂದಿರ ಉದ್ಘಾಟನೆಯ ಬಳಿಕ ಅಯೋಧ್ಯೆಗೆ ಪ್ರತಿನಿತ್ಯ ಸುಮಾರು 3 ಲಕ್ಷ ಜನ ಭೇಟಿ ನೀಡಬಹುದು. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆ ನಗರವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ ಎಂದು ಈ ಜವಾಬ್ದಾರಿ ಹೊತ್ತಿರುವ ದೀಕ್ಷು ಕುಕ್ರೇಜಾ ಹೇಳಿದ್ದಾರೆ.

ಅಯೋಧ್ಯೆ: ಪವಿತ್ರ ರಾಮಮಂದಿರ ಉದ್ಘಾಟನೆಯ ಬಳಿಕ ಅಯೋಧ್ಯೆಗೆ ಪ್ರತಿನಿತ್ಯ ಸುಮಾರು 3 ಲಕ್ಷ ಜನ ಭೇಟಿ ನೀಡಬಹುದು. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆ ನಗರವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ ಎಂದು ಈ ಜವಾಬ್ದಾರಿ ಹೊತ್ತಿರುವ ದೀಕ್ಷು ಕುಕ್ರೇಜಾ ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿನ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ದಟ್ಟಣೆಯನ್ನು ನಿವಾರಿಸಲು ಸಕಲ ಕ್ರಮ ಕೈಗೊಳ್ಳಲಾಗಿದೆ. ಧರ್ಮಶಾಲೆಗಳು (ವಿಶ್ರಾಂತಿ ಕೊಠಡಿ) ಮತ್ತು ಹೋಂಸ್ಟೇಗಳ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಅಯೋಧ್ಯೆಯ ಮೊದಲ ಹಂತದ ಅಭಿವೃದ್ಧಿಯಲ್ಲಿ ಸಂಪರ್ಕ ಜಾಲದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

AYODHYA TRIP: ರಾಮಮಂದಿರ ಉದ್ಘಾಟನೆ ಸಂಭ್ರಮಿಸಲು ಕಮಲ ಪ್ಲಾನ್: ಅಯೋಧ್ಯಾ ಪ್ರವಾಸ ಬಿಜೆಪಿಯಿಂದಲೇ ಆಯೋಜನೆ!

ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಯೋಧ್ಯೆ ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಬಹುದು. ಹೀಗಾಗಿ ಪ್ರವಾಸಿಗಳ ಸಂಖ್ಯೆಯು ಹೆಚ್ಚಬಹುದು. ಆದ್ದರಿಂದ ನಾವು ವಿಶಾಲವಾದ ರಸ್ತೆಗಳು, ಅಗತ್ಯ ಸೇತುವೆಗಳು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ಮಾಣ ಮಾಡಿದ್ದೇವೆ. ಇದಕ್ಕಾಗಿ ವಿದೇಶಗಳಲ್ಲಿರುವ ವ್ಯಾಟಿಕನ್‌ ಸಿಟಿ, ಜೆರುಸಲೇಂ ಮತ್ತು ಕಾಂಬೋಡಿಯಾ ಹಾಗೂ ಭಾರತದ್ದೇ ಸ್ಥಳಗಳಾದ ತಿರುಪತಿ ಮತ್ತು ಅಮೃತಸರಗಳನ್ನು ಅಧ್ಯಯನ ನಡೆಸಿದ್ದೇವೆ. ಬಳಿಕ ಅಯೋಧ್ಯೆ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ 85 ಸಾವಿರ ಕೋಟಿ ರು. ವೆಚ್ಚದಲ್ಲಿ ಅಯೋಧ್ಯೆ ಹೊಸ ರೂಪ ಪಡೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳ ಜೊತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದ ಅಭಿವೃದ್ಧಿ ನಮ್ಮ ಗುರಿಯಾಗಿತ್ತು. ಈಗಾಗಲೇ ಇವುಗಳ ಉದ್ಘಾಟನೆಯಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ನಾವು ಪರಿಸರದ ಉಳಿಸಿಕೊಳ್ಳುವ ನಿಟ್ಟಿನಲ್ಲೂ ಈ ಯೋಜನೆಯನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು. ಸಿ.ಪಿ.ಕುಕ್ರೇಜಾ ಆರ್ಕಿಟೆಕ್ಟ್‌ ಕಂಪನಿ ಅಯೋಧ್ಯೆ ಮರುನಿರ್ಮಾಣದ ಯೋಜನೆ ರೂಪಿಸಿದ್ದು, ಈ ಕಂಪನಿ ಈ ಮೊದಲು ದೆಹಲಿಯ ಏರೋಸಿಟಿ ಮತ್ತು ದ್ವಾರಕದ ಯಶೋಭೂಮಿಯನ್ನು ನಿರ್ಮಾಣ ಮಾಡಿತ್ತು.

ರಾಮಮಂದಿರ ಪ್ರಾಣಪ್ರತಿಷ್ಠೆಗೆ ಶಾಲಾ ಕಾಲೇಜಿಗೆ ರಜೆ, ಮದ್ಯ ಮಾರಾಟ ನಿಷೇಧ; ಸಿಎಂ ಯೋಗಿ ಘೋಷಣೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!