ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ವಿರುದ್ದ ಬಿಜೆಪಿ ಮುಗಿ ಬಿದ್ದಿದೆ. ಕಾಂಗ್ರೆಸ್ ಉತ್ತಮ ಕೆಲಸಕ್ಕೆ ಯಾವತ್ತೂ ಕೈಜೋಡಿಸಲ್ಲ ಎಂದು ಬಿಜೆಜಿ ಅಂಕಿ ಅಂಶವನ್ನೇ ತೆರೆದಿಟ್ಟಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಬಣ್ ಮುಖರ್ಜಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನವನ್ನೂ ಕಾಂಗ್ರೆಸ್ ಬಹಿಷ್ಕರಿಸಿತ್ತು ಎಂದು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ವಿವರಿಸಿದ್ದಾರೆ.
ನವದೆಹಲಿ(ಜ.11) ರಾಮ ಮಂದಿರ ಪ್ರಾಣಪ್ರತಿಷ್ಟೆ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ನಡೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕರು ಹೈಕಮಾಂಡ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದೆ.ಕಾಂಗ್ರೆಸ್ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸಿರುವುದು ಅಚ್ಚರಿಯಲ್ಲ. ಎಲ್ಲಾ ಉತ್ತಮ ಕೆಲಸಗಳನ್ನು ಕಾಂಗ್ರೆಸ್ ಬಹಿಷ್ಕರಿಸುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ದೊಡ್ಡ ಲಿಸ್ಟ್ ನೀಡಿದ್ದಾರೆ. ಪೋಖ್ರಾನ್ ನ್ಯೂಕ್ಲಿಯರ್ ಪರೀಕ್ಷೆ ಕುರಿತು ಕಾಂಗ್ರೆಸ್ 10 ದಿನ ಮೌನವಹಿಸಿತ್ತು ಎಂದು ತ್ರಿವೇದಿ ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ಬಹಿಷ್ಕರಿಸುವ ಮೂಲಕ ತನ್ನ ಬಾಯ್ಕಾಟ್ ಚಾಳಿ ಮುಂದುವರಿಸಿದೆ ಎಂದು ತ್ರಿವೇದಿ ಹೇಳಿದ್ದಾರೆ. ಕಾಂಗ್ರೆಸ್ ನೂತನ ಸಂಸತ್ ಭವನ ಉದ್ಘಾಟನೆಯನ್ನೂ ಬಹಿಷ್ಕರಿಸಿತ್ತು. ಭಾರತ ಅಧ್ಯಕ್ಷತೆ ವಹಿಸಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಟಿ20 ಶೃಂಗಸಭೆಯನ್ನೂ ಕಾಂಗ್ರೆಸ್ ಬಹಿಷ್ಕರಿಸಿತ್ತು. 2004ರಿಂದ 2009ರ ವರೆಗೆ ಕಾಂಗ್ರೆಸ್ ಭಾರತದ ದಿಗ್ವಿಯ, ಶೌರ್ಯ, ತ್ಯಾಗ ಬಲಿದಾನದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನೂ ಬಹಿಷ್ಕರಿಸಿತ್ತು ಎಂದು ತ್ರಿವೇದಿ ಹೇಳಿದ್ದಾರೆ.
ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!
ಕಾಂಗ್ರೆಸ್ ಬಾಯ್ಕಾಟ್ ಲಿಸ್ಟ್ ಇಷ್ಟಕ್ಕೆ ಮುಗಿದಿಲ್ಲ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಪೋಖ್ರಾನ್ ನ್ಯೂಕ್ಲಿಯರ್ ಟೆಸ್ಟ್ ನಡೆಸಿತ್ತು. ಆದರೆ ವಿದೇಶಗಳಗಿ ಬೆದರಿದ ಕಾಂಗ್ರೆಸ್ 10 ದಿನ ಶಹಬ್ಬಾಷ್ ದೂರದ ಮಾತು ಕನಿಷ್ಠ ಪ್ರತಿಕ್ರಿಯೆ ನೀಡಲು ನಿರಾಕರಿಸಿತ್ತು. ಭಾರತದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‌ನ ನಿಷ್ಠಾವಂತ ಹಾಗೂ ಹಿರಿಯ ನಾಯಕ ದಿ.ಪ್ರಣಬ್ ಮುಖರ್ಜಿಗೆ ಬಿಜೆಪಿ ಸರ್ಕಾರ ಭಾರತ ರತ್ನ ನೀಡಿತ್ತು. ಆದರೆ ಪ್ರಣಬ್ ಮುಖರ್ಜಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನೂ ಕಾಂಗ್ರೆಸ್ ಬಹಿಷ್ಕರಿಸಿತ್ತು ಎಂದು ತ್ರಿವೇದಿ ಹೇಳಿದ್ದಾರೆ.
| On Congress declining the invitation to attend 'pran pratishtha' ceremony of Ram Temple in Ayodhya, BJP MP Sudhanshu Trivedi says, "Congress boycotted the inauguration ceremony of the new Parliament building. Congress boycotted G20 Summit...After 2004 till 2009, Congress… pic.twitter.com/fhYpRaIXsI
— ANI (@ANI)
ಕಾಂಗ್ರೆಸ್ ಪ್ರತಿಯೊಂದನ್ನು ಬಿಷ್ಕರಿಸುತ್ತಲೇ ಬಂದಿದೆ. ಇದೇ ಕಾರಣದಿಂದ ದೇಶದ ಜನತೆ ಕಾಂಗ್ರೆಸ್‌ನ್ನು ಬಹಿಷ್ಕರಿಸಿದೆ ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ. ರಾಮ ಮಂದಿರ ಆಹ್ವಾನ ತಿರಸ್ಕರಿಸಿರುವ ಕಾಂಗ್ರೆಸ್, ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕ್ರಮ ಎಂದಿದೆ. ರಾಮನನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಬಹಿಷ್ಕರಿಸಿದೆ ಎಂದು ಕಾರಣ ನೀಡಿದೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಮಗೆ ನೀಡಲಾಗಿದ್ದ ಆಹ್ವಾನವನ್ನು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾರೆಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ರಾಮ ಮಂದಿರ ಮಂತ್ರಾಕ್ಷತೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಭಕ್ತರಿಗೆ ಗಾಯ!