ವಿಶ್ವಕ್ಕೆ ಭಾರತ ಭರವಸೆಯ ಆಶಾಕಿರಣ: ಪ್ರಧಾನಿ ಮೋದಿ; ನಾನು ಹೆಮ್ಮೆಯ ಗುಜರಾತಿ ಎಂದ ಅಂಬಾನಿ

By Kannadaprabha News  |  First Published Jan 11, 2024, 12:18 PM IST

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವು ವಿಶ್ವಮಿತ್ರನಾಗಿ ಮುನ್ನಡೆಯುತ್ತಿದೆ. ನಾವು ಗುರಿಗಳನ್ನು ನಿರ್ಧರಿಸಬಹುದು ಮತ್ತು ಅವುಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನು ಭಾರತ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ. 


ನವದೆಹಲಿ (ಜನವರಿ 11, 2024): ಜಗತ್ತಿನ ಅನೇಕ ಅನಿಶ್ಚಿತ ಸಮಸ್ಯೆಗಳ ನಡುವೆ ಭಾರತವು ಜಾಗತಿಕವಾಗಿ ಹೊಸ ಭರವಸೆಯ ಆಶಾಕಿರಣವಾಗಿ ಮತ್ತು ವಿಶ್ವಮಿತ್ರನಾಗಿ ಹೊರಹೊಮ್ಮಿದೆ. ಅಲ್ಲದೇ ಜಗತ್ತು ಭಾರತವನ್ನು ತನ್ನ ವಿಶ್ವಾಸಾರ್ಹ ಸ್ನೇಹಿತ ಮತ್ತು ಅಭಿವೃದ್ಧಿಯ ಎಂಜಿನ್‌ ಆಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 10 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವು ವಿಶ್ವಮಿತ್ರನಾಗಿ ಮುನ್ನಡೆಯುತ್ತಿದೆ. ನಾವು ಗುರಿಗಳನ್ನು ನಿರ್ಧರಿಸಬಹುದು ಮತ್ತು ಅವುಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನು ಭಾರತ ಜಗತ್ತಿಗೆ ತೋರಿಸಿಕೊಟ್ಟಿದೆ. ವಿಶ್ವ ಕಲ್ಯಾಣಕ್ಕಾಗಿ ಭಾರತದ ಬದ್ಧತೆ, ಅದರ ಸಮರ್ಪಣೆ, ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವು ಪ್ರಪಂಚವನ್ನು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿಸಿದೆ’ ಎಂದಿದ್ದಾರೆ.

Tap to resize

Latest Videos

ಇದನ್ನು ಓದಿ: ಜನ ನಂಬಿರುವುದು ನರೇಂದ್ರ ಮೋದಿ ಗ್ಯಾರಂಟಿ: ಕೇಂದ್ರ ಸಚಿವ ಭಗವಂತ ಖೂಬಾ

ನಾನು ಹೆಮ್ಮೆಯ ಗುಜರಾತಿ: ಅಂಬಾನಿ
ಅಹಮದಾಬಾದ್‌: ಗುಜರಾತ್‌ ಹೂಡಿಕೆದಾರರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ, ಮೋದಿ ಭಾರತದ ಅತ್ಯಂತ ಯಶಸ್ವಿ ಪ್ರಧಾನಿ, ಅತ್ಯುನ್ನತ ಜಾಗತಿಕ ನಾಯಕ ಎಂದು ಬಣ್ಣಿಸಿದರು. ಜೊತೆಗೆ ತಮ್ಮ ಗುಜರಾತಿ ಮೂಲದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ ಮುಕೇಶ್‌, ನಾನೊಬ್ಬ ಹೆಮ್ಮೆಯ ಗುಜರಾತಿ. ರಿಲಯನ್ಸ್‌ ಅಂದು, ಹಿಂದು ಮತ್ತು ಎಂದೆಂದು ಕೂಡಾ ಗುಜರಾತಿ ಕಂಪನಿಯಾಗಿಯೇ ಇರಲಿದೆ ಎಂದು ಸಂತಸ ವ್ಯಕ್ತಪಡಿಸಿದರು..

ಇದನ್ನು ಓದಿ: ನರೇಂದ್ರ ಮೋದಿ, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಮಾತು ಆರಂಭಿಸಿದ ಮೊರಕ್ಕೊ ಸಚಿವ!

click me!