
ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಲ್ಲಿ ಕುಶಲಕರ್ಮಿಗಳ ತಂಡವೊಂದು ಅಯೋಧ್ಯೆಯ ನೂತನ ರಾಮ ಮಂದಿರಕ್ಕಾಗಿ 2,100 ಕೆಜಿ ತೂಕದ ಗಂಟೆಯನ್ನು ಮಾಡಿದ್ದಾರೆ . 50 ವರ್ಷದ ದೌ ದಯಾಳ್ ಅವರು 'ಅಷ್ಟಧಾತು' ಗಂಟೆಯನ್ನು ತಯಾರಿಸುವ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದರು, ಇಕ್ಬಾಲ್ ಮಿಸ್ತ್ರಿ, 56, ವಿನ್ಯಾಸ, ಗ್ರೈಂಡಿಂಗ್ ಮತ್ತು ಪಾಲಿಶ್ ಮಾಡುವ ಕೆಲಸದ ಉಸ್ತುವಾರಿ ವಹಿಸಿದ್ದರು. ಇಬ್ಬರೂ ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ಗಾತ್ರದ ಗಂಟೆಯ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂದಿಸಿದಂತೆ ಈ ಗಾತ್ರದ ಗಂಟೆಯ ಕೆಲಸ ಮಾಡುವಾಗ, ಸವಾಲುಗಳು ಹೆಚ್ಚು. ಈ ಪ್ರಕ್ರಿಯೆಯಲ್ಲಿ ಒಂದೇ ಒಂದು ತಪ್ಪನ್ನು ಮಾಡದಂತೆ ಖಚಿತಪಡಿಸಿಕೊಳ್ಳುವುದು ನಿಜವಾಗಿಯೂ ಕಷ್ಟ ಎಂದು ದೌ ದಯಾಲ್ ತಿಳಿಸಿದ್ದಾರೆ.
ಮೇ 2024 ರವರೆಗೆ 'ಈ' 3 ರಾಶಿಗೆ ಗುರುವಿನಿಂದ ಅದೃಷ್ಟ , ಹಣದ ಹರಿವು
ಅಷ್ಟಧಾತು' ಗಂಟೆಯು ಎಂಟು ಲೋಹಗಳ ಸಂಯೋಜನೆಯಾಗಿದೆ - ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಒಳಗೊಂಡಿದೆ. ಹಿಂದೂಗಳು ಮತ್ತು ಮುಸ್ಲಿಮರು ಸೇರಿದಂತೆ ಸುಮಾರು 25 ಕಾರ್ಮಿಕರ ತಂಡವು ದಿನಕ್ಕೆ ಎಂಟು ಗಂಟೆಗಳ ಕಾಲ ಒಂದು ತಿಂಗಳ ಕಾಲ ಕೆಲಸ ಮಾಡಿದ್ದಾರೆ ಈ ಅತಿದೊಡ್ಡ ಗಂಟೆಗಾಗಿ. ಭಾರತದ ಅತಿದೊಡ್ಡ ಗಂಟೆಗಳಲ್ಲಿ ಒಂದಾದ ಈ ಗಂಟೆ ರಾಮ ಮಂದಿರಕ್ಕೆ ದಾನ ಮಾಡಲಾಗುವುದು.
ಇದಕ್ಕೂ ಮುನ್ನ ಉತ್ತರಾಖಂಡದ ಕೇದಾರನಾಥ ದೇವಸ್ಥಾನದಲ್ಲಿ 101 ಕೆಜಿ ತೂಕದ ಗಂಟೆಯನ್ನು ದಯಾಳ್ ಮಾಡಿಕೊಟ್ಟಿದ್ದರು. ಇದು ಇಲ್ಲಿಯವರೆಗೆ ಕೆಲಸ ಮಾಡಿದ ಅತಿದೊಡ್ಡ ಮತ್ತು ಭಾರವಾದ ಗಂಟೆಯಾಗಿದೆ. ಇನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ 1,000 ಕೆಜಿ ತೂಕದ ಗಂಟೆಯನ್ನೂ ನೀಡಿದ್ದಾರೆ. ನಾಲ್ಕನೇ ತಲೆಮಾರಿನ ಗಂಟೆ ತಯಾರಕರಾದ ದಯಾಳ್ ಅವರು ಶಾಲೆಗಳಿಗೆ ಗಂಟೆಗಳನ್ನು ತಯಾರಿಸುವುದು ವರಿಗೆ ವ್ಯವಹಾರದ ಒಂದು ಭಾಗವಾಗಿತ್ತು. ಇನ್ನು ಈ ಗಂಟೆಗಳನ್ನು ಜಲೇಸರ ಮಣ್ಣಿನಲ್ಲಿ ಎರಕ ಹೊಯ್ದ ಉತ್ತಮವಾಗಿ ತಯಾರಿಸಲಾಗುತ್ತಿದೆ. ಇನ್ನು ರಾಮ ಮಂದಿರಕ್ಕಾಗಿ ಸಿದ್ಧಪಡಿಸಲಾದ ಗಂಟೆಯ ಸದ್ದು 15 ಕಿ.ಮೀ ವರೆಗೆ ಕೇಳಿಸುತ್ತದೆ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ