ಆನೆ ವಾಹನವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರೂ, ಚಾಲಕ ಶಾಂತವಾಗಿ ಹಿಮ್ಮುಖವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೈರಲ್ ವಿಡಿಯೋವನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಚಾಲಕನನ್ನು ಮೆಚ್ಚಿಕೊಂಡಿದ್ದಾರೆ.
ಮಹೀಂದ್ರಾ ಬೊಲೆರೋ (Mahindra Bolero) ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ಕಾಡಿನ ಮಧ್ಯದಲ್ಲಿ ಅಟ್ಟಿಸಿಕೊಂಡು ಬಂದ ಆನೆಗೆ (Elephant) ಹೆದರದೆ ಸಮರ್ಥವಾಗಿ ಎದುರಿಸಿದ್ದು, ವಾಹನವನ್ನು ಹಿಮ್ಮುಖವಾಗಿ (Reverse) ಓಡಿಸಿಕೊಂಡು ಹೋಗಿದ್ದಾರೆ. ಈ ವೈರಲ್ ವಿಡಿಯೋವನ್ನು (Viral Video) ಹಂಚಿಕೊಂಡ ಆನಂದ್ ಮಹೀಂದ್ರಾ, ಚಾಲಕನನ್ನು ವಿಶ್ವದ 'ಅತ್ಯುತ್ತಮ' ಎಂದು ಶ್ಲಾಘಿಸಿದರು ಹಾಗೂ ಅವರನ್ನು 'ಕ್ಯಾಪ್ಟನ್ ಕೂಲ್' ಎಂದು ಕರೆದರು. ‘’ಇದು ಕಳೆದ ಗುರುವಾರ ಕಬಿನಿ ರಿಸರ್ವ್‌ನಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ. ನಾನು ಈ ಮೂಲಕ ಡ್ರೈವಿಂಗ್ ಮಾಡುತ್ತಿರುವ ವ್ಯಕ್ತಿಯನ್ನು ವಿಶ್ವದ ಅತ್ಯುತ್ತಮ ಬೊಲೆರೋ ಡ್ರೈವರ್ ಎಂದು ಹೇಳುತ್ತೇನೆ ಮತ್ತು ಅವರಿಗೆ ಕ್ಯಾಪ್ಟನ್ ಕೂಲ್ ಎಂದು ಅಡ್ಡ ಹೆಸರು ನೀಡುತ್ತೇನೆ" ಎಂದೂ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ದಟ್ಟ ಅರಣ್ಯದ (Forest) ಮೂಲಕ ಚಾಲಕ ವಾಹನ ಚಲಾಯಿಸುತ್ತಿರುವುದನ್ನು ಕಂಡುಬರುವ 36 ಸೆಕೆಂಡ್‌ಗಳ ವಿಡಿಯೋ ಹತ್ತಿರ ಹತ್ತಿರ 10 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ದೊಡ್ಡ ದಂತಗಳನ್ನು ಹೊಂದಿರುವ ಒಂಟಿ ಸಲಗ ಆತನ ಬಳಿ ಆಕ್ರಮಣಕಾರಿಯಾಗಿ ಸಮೀಪಿಸುತ್ತಿದ್ದರೂ, ಆ ವ್ಯಕ್ತಿ ಹಿಮ್ಮುಖವಾಗಿ ವಾಹನ ಓಡಿಸುತ್ತಿರುತ್ತಾನೆ ಎಂಬುದು ತಿಳಿದುಬಂದಿದೆ. ಇನ್ನು, ಈ ವಿಡಿಯೋದ ಕೊನೆಯಲ್ಲಿ ಆನೆ ಆ ವಾಹನದಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ, ಪ್ರಯಾಣಿಕ ಸೀಟಿನಲ್ಲಿರುವ (Passenger Seat) ವ್ಯಕ್ತಿಯು ಚಾಲಕನನ್ನು ನೋಡಿ ಆಘಾತ ವ್ಯಕ್ತಪಡಿಸುತ್ತಾರೆ ಅಥವಾ ನಿಟ್ಟುಸಿರು ಪಟ್ಟಿರಬಹುದು.
Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ
This was apparently at the Kabini Reserve last Thursday. I hereby anoint the man at the wheel as the best Bolero driver in the world & also nickname him Captain Cool. pic.twitter.com/WMb4PPvkFF
— anand mahindra (@anandmahindra)ಒಬ್ಬ ಬಳಕೆದಾರರು ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಚಾಲಕನ ಫೋಟೋವನ್ನು ಹಂಚಿಕೊಂಡರು ಮತ್ತು ಅವರನ್ನು ಪ್ರಕಾಶ್ ಎಂದು ಗುರುತಿಸಿದರು. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಸ್ನೇಹಿತರೊಬ್ಬರ ಮೂಲಕ ಸ್ವೀಕರಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಕರ್ನಾಟಕದ ಮೈಸೂರು ಸಮೀಪದ ಕಬಿನಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.
36 ಸೆಕೆಂಡ್‌ಗಳ ವೀಡಿಯೊದಲ್ಲಿ ಪ್ರಕಾಶ್ ಎಂದು ಗುರುತಿಸಲಾದ ಚಾಲಕ, ಕಾಡು ಆನೆಯು ಅಟ್ಟಿಸಿಕೊಂಡು ಹೋಗುತ್ತಿದ್ದರೂ, ಬೊಲೆರೋವನ್ನು ಒಂದೇ ಸ್ಪೀಡ್‌ನಲ್ಲಿ ಹಿಮ್ಮುಖವಾಗಿ ಓಡಿಸುವುದನ್ನು ತೋರಿಸುತ್ತದೆ. ಅಂತಿಮವಾಗಿ, ಈ ವಿಡಿಯೋದಲ್ಲಿ ಕಾಡು ಆನೆ ಬೊಲೆರೋವನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸುತ್ತದೆ. ಅವರ ಈ ಕಾರ್ಯವು ಆನಂದ್ ಮಹೀಂದ್ರಾರಿಂದ ಪ್ರಶಂಸೆ ಗಳಿಸಿದೆ. ಇವರು ತಮ್ಮ ಡ್ರೈವಿಂಗ್‌ಗೆ ಮಾತ್ರವಲ್ಲ, ಇವರ ಶಾಂತ ಸ್ವರೂಪಕ್ಕೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಿರಿಯ ದಂಪತಿಯ ಧ್ವಜಾರೋಹಣ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ: ಸಾಮಾಜಿಕ ಜಾಲತಾಣದಲ್ಲಿ ವೈರಲ್
ಎಸ್‌ಯುವಿ ವಾಹನವನ್ನು ಸಫಾರಿ ವಾಹನವನ್ನಾಗಿ ಇಲ್ಲಿ ಪರಿವರ್ತಿಸಲಾಗಿದೆ. ಇನ್ನು, ಈ ವಾಹನದಲ್ಲಿ ಆ ಚಾಲಕ ಮಾತ್ರವಲ್ಲದೆ ಇಬ್ಬರು ಪ್ರಯಾಣಿಕರು ಸಹ ಇದ್ದರು. ಈ ಪೈಕಿ ಹಿಂದೆ ಕೂತಿದ್ದ ಒಬ್ಬರು ಪ್ರಯಾಣಿಕರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ತೋರುತ್ತದೆ. ಇನ್ನು, ವಾಹನದಲ್ಲಿ ಬ್ಯಾಕ್ ಕ್ಯಾಮೆರಾ ಇರದಿದ್ದರೂ ಆರಾಮಾಗಿ ಒಂದೇ ಸ್ಪೀಡ್‌ನಲ್ಲಿ ಆನೆಯಿಂ ಸುರಕ್ಷಿತ ಅಂತರ ಕಾಯ್ದುಕೊಂಡು ರಿವರ್ಸ್ ಗೇರ್‌ನಲ್ಲಿ ವಾಹನ ಓಡಿಸಿರುವುದು ಸಹ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಾರೆ, ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿರುವ ಈ ವಿಡಿಯೋ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ತೀವ್ರ ಪ್ರಶಂಸೆಗೆ ಪಾತ್ರವಾಗಿದೆ.