ರಕ್ಷಾ ಬಂಧನ ಹಬ್ಬಕ್ಕೆ ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನಿ ಸಹೋದರಿ, ಜೊತೆಗೊಂದು ಪತ್ರ!

By Suvarna NewsFirst Published Aug 7, 2022, 6:20 PM IST
Highlights

ರಕ್ಷಾ ಬಂಧನ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ರಾಖಿ ಖರೀದಿಯೂ ಜೋರಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಕ್ ರಾಖಿ ಕಳುಹಿಸಿದ್ದಾರೆ. ಇದರ ಜೊತೆಗೆ ಪತ್ರವೊಂದನ್ನು ಬರೆದಿದ್ದಾರೆ.

ನವದೆಹಲಿ(ಆ.07):  ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳಿಸುವ, ಪ್ರೀತಿ, ವಿಶ್ವಾಸ ಹೆಚ್ಚಿಸುವ ರಕ್ಷಾ ಬಂಧನ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಆಗಸ್ಟ್ 11 ರಂದು ಭಾರತ ರಾಖಿ ಹಬ್ಬ ಆಚರಿಸಲಿದೆ. ರಾಖಿ ಹಬ್ಬಕ್ಕೆ ಕೆಲದಿನಗಳಿರುವಾಗಲೇ ಪ್ರಧಾನಿ ನರೇಂದ್ರ ಮೋದಿಗೆ, ಪಾಕಿಸ್ತಾನ ಮೂಲದ ಸಹೋದರಿ ಖಮರ್ ಮೊಹ್ಸಿನ್ ಶೇಕ್ ರಾಖಿ ಕಳುಹಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮೊಹ್ಸಿನ್ ಶೇಕ್ ಈ ಬಾರಿಯೂ ಮೋದಿಗೆ ರಾಖಿ, ಗ್ರೀಟಿಂಗ್ ಕಾರ್ಡ್ ಜೊತೆಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಪ್ರಧಾನಿ ಮೋದಿಗೆ ದೀರ್ಘಾಯುಷ್ಯ, ಆರೋಗ್ಯ ಭಗವಂತ ಕರುಣಿಸಲಿ. ಇಷ್ಟೇ ಅಲ್ಲ 2024ರ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಶೇಕ್ ಶುಭಹಾರೈಸಿದ್ದಾರೆ. ಈ ಬಾರಿ ಮತ್ತೊಂದು ವಿಶ್ವಾಸವನ್ನು ಮೊಹ್ಸಿನ್ ಶೇಖ್ ವ್ಯಕ್ತಪಡಿಸಿದ್ದರೆ. ಮೊಹ್ಸಿನ್ ತಮ್ಮ ಕೈಯಾರೇ ರಾಖಿ ತಯಾರಿಸಿ ಪ್ರೀತಿಯಿಂದ ಮೋದಿಗೆ ಕಳುಹಿಸಿದ್ದಾರೆ. ಈ ಬಾರಿ ಮೋದಿಯನ್ನು ಭೇಟಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಪ್ರಧಾನಿ ಮೋದಿಗೆ ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಕ್ ರಾಖಿ ಕಳುಹಿಸುತ್ತಾರೆ. ಈ ಬಾರಿ ಮೊಹ್ಸಿನ್ ಶೇಕ್ ರೇಷ್ಮೆ ರಿಬ್ಬನ್, ಎಂಬ್ರಾಯಿಡರಿ ಡಿಸೈನ್ ಮೂಲಕ ರಾಖಿ ತಯಾರಿಸಿದ್ದಾರೆ. ಈ ರಾಖಿ ಅತ್ಯಂತ ಸೂಕ್ಷ್ಮ ಡಿಸೈನ್ ಹೊಂದಿದೆ. ಈ ಬಾರಿ ಮೋದಿ ತನ್ನನ್ನು ದೆಹಲಿಗೆ ಕರೆಯಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ನಾನು ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಎಂದು ಮೊಹ್ಸಿನ್ ಶೇಕ್ ಹೇಳಿದ್ದಾರೆ.

ರಕ್ಷಾ ಬಂಧನ ಆಚರಣೆಗೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್!

ಈ ವರ್ಷದ ರಾಖಿ ಹಬ್ಬ ಪ್ರಧಾನಿ ಮೋದಿಗೆ ದೀರ್ಘ ಆಯುಷ್ಯ, ಆರೋಗ್ಯ ಕರುಣಿಸಲಿ. ಇದರ ಜೊತೆಗೆ 2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೆ ಭಾರತದ ಪ್ರಧಾನಿಯಾಗಬೇಕು. ವಿಶ್ವದ ನಾಯಕರ ಪೈಕಿ ಮೋದಿ ಅತ್ಯಂತ ಸಮರ್ಥ ನಾಯಕ. ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಮೋದಿಗಿದೆ. ನನ್ನ ಪ್ರಕಾರ ಮೋದಿ ಪ್ರತಿ ಚುನಾವಣೆಯಲ್ಲಿ ಗೆದ್ದು ಭಾರತದ ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ. 

ಮೊಹ್ಸಿನ್ ಶೇಕ್ ನರೇಂದ್ರ ಮೋದಿಗೆ ರಾಖಿ ಕಳುಹಿಸುತ್ತಿರುವುದು ಪ್ರಧಾನಿಯಾದ ಬಳಿಕವಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ, ಅದಕ್ಕೂ ಮೊದಲು ಅಂದರೆ ಸರಿಸುಮಾರು 24 ರಿಂದ 25 ವರ್ಷಗಳಿಂದ ಮೋದಿಗೆ ರಾಖಿ ಕಳುಹಿಸಿತ್ತಿದ್ದಾರೆ. 

ರಕ್ಷಾ ಬಂಧನ: ಸಹೋದರಿಗೆ ಗಿಫ್ಟ್ ನೀಡೋ ಬಗ್ಗೆ ಯೋಚ್ನೆ ಬಿಡಿ… ಇಲ್ ನೋಡಿ

ರಕ್ಷಾ ಬಂಧನಕ್ಕಾಗಿ ಚಿನ್ನದ ಮಿಠಾಯಿ, ಕೇಜಿಗೆ 25000 ರು.!
ಹಬ್ಬಕ್ಕೆ ಚಿನ್ನದ ಆಭರಣಗಳನ್ನು ಖರೀದಿ ಮಾಡುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಆಗ್ರಾನಲ್ಲಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ವಿಶೇಷವಾಗಿ ಚಿನ್ನದ ಮಿಠಾಯಿಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಜಸ್ಥಾನಿ ಖಾದ್ಯ ಘೇವರ್‌ ಮೇಲೆ ಚಿನ್ನದ 24 ಕ್ಯಾರೆಟ್‌ ಚಿನ್ನದ ಪದರವನ್ನು ಹಚ್ಚಿ ಮಾರಾಟ ಮಾಡಲಾಗುತ್ತಿದ್ದು, ಇದರ ಬೆಲೆ ಪ್ರತಿ ಕೇಜಿಗೆ 25,000 ರು. ಆಗಿದೆ. ಭಾರೀ ಬೆಲೆಯ ಹೊರತಾಗಿಯೂ ಈ ಮಿಠಾಯಿಯನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ ಎನ್ನಲಾಗಿದೆ.

click me!