ಹೆಬ್ಬಾವಿನಿಂದ ಸಾಕುನಾಯಿ ರಕ್ಷಿಸಿದ ಬಾಲಕರು: ನೋಡಿ ಬಾಲಕರ ಶೌರ್ಯದ ವಿಡಿಯೋ

By Suvarna NewsFirst Published Aug 7, 2022, 4:43 PM IST
Highlights

ಮೂವರು ಪುಟ್ಟ ಬಾಲಕರು ತಮ್ಮ ಪ್ರೀತಿಯ ಸಾಕುನಾಯಿಯನ್ನು ದೈತ್ಯ ಹೆಬ್ಬಾವಿನ ಹಿಡಿತದಿಂದ ಬಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕರ ಶೌರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ. 

ಮೂವರು ಪುಟ್ಟ ಬಾಲಕರು ತಮ್ಮ ಪ್ರೀತಿಯ ಸಾಕುನಾಯಿಯನ್ನು ದೈತ್ಯ ಹೆಬ್ಬಾವಿನ ಹಿಡಿತದಿಂದ ಬಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕರ ಶೌರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ. ಹಾವುಗಳಲ್ಲಿ ಹೆಬ್ಬಾವುಗಳು ಅತ್ಯಂತ ಅಪಾಯಕಾರಿಗಳು. ಅವುಗಳು ಹಿಡಿತಕ್ಕೆ ಸಿಲುಕಿದರೆ ಬಿಡಿಸಿಕೊಳ್ಳುವುದು ಭಾರಿ ಕಷ್ಟದ ಕೆಲಸ. ಆದಾಗ್ಯೂ ಮೂವರು ಬಾಲಕರು ದೆತ್ಯ ಗಾತ್ರದ ಹೆಬ್ಬಾವಿನ ವಿರುದ್ಧ ಹೋರಾಡಿ ಜಯ ಸಾಧಿಸಿದ್ದಾರೆ. ಸಾಮಾನ್ಯವಾಗಿ ಹಾವು ಎಂದರೆ ಹೌಹಾರಿ ಎದ್ನೊ ಬಿದ್ನೋ ಅಂತ ಓಡುವವರೇ ಹೆಚ್ಚು ಆದರೆ ಇಲ್ಲಿ ಪುಟ್ಟ ಬಾಲಕರು ಹಾವಿನ ವಿರುದ್ಧ ತಮ್ಮೆಲ್ಲಾ ಸಾಹಸ ಪ್ರದರ್ಶಿಸಿದ ಗೆದ್ದು ಬಂದಿದ್ದಾರೆ. ಇವರ ಪ್ರೀತಿಯ ಶ್ವಾನವೊಂದನ್ನು ಹೆಬ್ಬಾವು ತನ್ನ ಬೇಟೆಯಾಗಿಸಿ ಬಿಗಿಯಾಗಿ ಹಿಡಿದುಕೊಂಡಿದೆ. ಆದರೆ ಪ್ರೀತಿಯ ಶ್ವಾನ ಕಣ್ಣೆದುರೇ ಸಾಯುವುದು ಯಾವುದೇ ಶ್ವಾನ ಪ್ರಿಯನೂ ಸಹಿಸಕೊಳ್ಳಲಾರ ಅರಗಿಸಿಕೊಳ್ಳಲಾರ.

ಅದೇ ರೀತಿ ಈ ಪುಟ್ಟ ಮಕ್ಕಳು ತಮ್ಮ ಕಣ್ಣೆದುರೇ ಹೆಬ್ಬಾವೊಂದು ತಮ್ಮ ಪ್ರೀತಿಯ ಶ್ವಾನವನ್ನು ಬಿಗಿಯಾಗಿ ಹಿಡಿದುಕೊಂಡು ತಿನ್ನಲು ಯತ್ನಿಸುತ್ತಿರುವುದನ್ನು ನೋಡಿದೆ ತಡ ತಮ್ಮೆಲ್ಲಾ ಶ್ರಮ ಹಾಕಿ ಶಕ್ತಿ ಮೀರಿ ತಮ್ಮ ಪ್ರೀತಿಯ ಶ್ವಾನದ ಉಳಿವಿಗೆ ಯತ್ನಿಸಿದ್ದು, ಅದರಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಬಾಲಕರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಬಾಲಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ನಿಜಕ್ಕೂ ಈ ಬಾಲಕರು ಸಾಹಸಿ ಕೆಲಸ ಮಾಡುತ್ತಿದ್ದಾರೆ ಎಂದು ನೋಡುಗರು ಬಾಲಕರ ಧೈರ್ಯವನ್ನು ಕೊಂಡಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by India Today (@indiatoday)

ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ 2 ವರ್ಷದ ಅಲೆಕ್ಸ್: ಸೇನಾ ಶ್ವಾನಕ್ಕೆ ಭಾವಪೂರ್ಣ ವಿದಾಯ

ವಿಡಿಯೋದಲ್ಲಿ ಕಾಣಿಸುವಂತೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ವರದಿ ಆಗಿಲ್ಲ. ಆದರೆ ಹಸಿರಿನಿಂದ ಕೂಡಿರುವ ಬಯಲಿನಂತ ಪ್ರದೇಶದಲ್ಲಿ ಹಾವೊಂದು ನಾಯಿಯನ್ನು ಸುರುಳಿ ಸುತ್ತಿದ್ದು, ನಾಯಿ ಸಾಯುವ ಸ್ಥಿತಿಯಲ್ಲಿದೆ. ಇದನ್ನು ನೋಡಿದ ಬಾಲಕರು ನಾಯಿಯನ್ನು ಹಾವಿನ ಹಿಡಿತದಿಂದ ಬಿಡಿಸಲು ಹಾವನ್ನು ಕೈಯಲ್ಲಿ ಹಿಡಿದು ಎಳೆದಾಡುತ್ತಾರೆ. ಮಕ್ಕಳು  ಹಾವನ್ನು ಬಿಡಿಸಲು ಯತ್ನಿಸಿದ್ದಷ್ಟು ಹಾವು ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ. ಮೊದಲಿಗೆ ದೂರದಿಂದಲೇ ಕಲ್ಲು ದೊಣ್ಣೆಗಳಲ್ಲಿ ನಾಯಿಯನ್ನು ಹಾವಿನ ಹಿಡಿತದಿಂದ ಬಿಡಿಸಲು  ಯತ್ನಿಸುವ ಬಾಲಕರು ನಂತರ ಸ್ವಲ್ಪ ಧೈರ್ಯ ಮಾಡಿ ಹಾವಿನ ಹತ್ತಿರ ಬಂದು ಕೈಗಳಿಂದ ಹಾವಿನ ಒಂದು ಭಾಗವನ್ನು ಬಾಳಕ ಎಳೆಯುತ್ತಾನೆ. ಈ ವೇಳೆ ಮತ್ತೊಬ್ಬ ಬಾಲಕ ಅಲ್ಲಿಗೆ ಬಂದು ಹಾವಿನ ಮತ್ತೊಂದು ತುದಿಯನ್ನು ಹಿಡಿದು ಎಳೆಯುತ್ತಾನೆ. ಈ ವೇಳೆ ಹಾವು ಮತ್ತಷ್ಟು ಹಿಡಿತ ಬಿಗಿಗೊಳಿಸುತ್ತಿದ್ದರೆ, ಶ್ವಾನ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡುತ್ತದೆ. ಅದಾಗ್ಯೂ ಧೃತಿಗೆಡದ ಬಾಲಕರು ಕಡೆಗೂ ತಮ್ಮ ಪ್ರೀತಿಯ ಶ್ವಾನವನ್ನು ಹಾವಿನ ಹಿಡಿತದಿಂದ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

ಬಾಲಕರ ಈ ಶೌರ್ಯದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲಕರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಪ್ರೀತಿಯ ಶ್ವಾನವನ್ನು ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದೊಂದು ನಿಷ್ಕಲ್ಮಶ ಪ್ರೀತಿ ಹಾಗೂ ಧೈರ್ಯದ ಸಂಕೇತ ಎಂದು ನೋಡುಗರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಈ ಬಾಲಕರ ಸಾಹಸಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

click me!