ಕೋಲು ಕೊಟ್ಟು ಮತ್ತೆ ಹೊಡೆಸಿಕೊಂಡ ಪಾಕ್‌: ರಾಜನಾಥ್ ಸಿಂಗ್ ಸಿಂಗ್ ಹೇಳಿದ್ದೇನು?

Published : May 08, 2025, 06:12 PM IST
ಕೋಲು ಕೊಟ್ಟು ಮತ್ತೆ ಹೊಡೆಸಿಕೊಂಡ ಪಾಕ್‌: ರಾಜನಾಥ್ ಸಿಂಗ್ ಸಿಂಗ್ ಹೇಳಿದ್ದೇನು?

ಸಾರಾಂಶ

ಸರಿಯಾಗಿ ಹೊಡೆಸಿಕೊಂಡರು ತನ್ನ ಹುಟ್ಟುಗುಣ ಬಿಡದ ಪಾಕಿಸ್ತಾನದ ಉದ್ಧಟತನದ ವರ್ತನೆಗೆ ಭಾರತದ ರಕ್ಷಣಾ ರಾಜನಾಥ್ ಸಿಂಗ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ನಮ್ಮ ತಾಳ್ಮೆಯನ್ನು ಪರೀಕ್ಷಿಸಿ ನೋಡಿ ಹಾಗೂ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಪಡೆಯಲು ಸಿದ್ಧರಾಗಿ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಭಾರತ ನಿನ್ನೆ ಆಪರೇಷನ್ ಸಿಂಧೂರ್‌ ಕಾರ್ಯಾಚರಣೆ ನಡೆಸಿತ್ತು. ಕೇವಲ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದ್ದರೂ ಪಾಕಿಸ್ತಾನ ಮಾತ್ರ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಮತ್ತೆ ಎಲ್‌ಒಸಿಯಲ್ಲಿ ತನ್ನ ಬುದ್ಧಿ ತೋರಿಸಿ 15 ನಾಗರಿಕರನ್ನು ಬಲಿ ಪಡೆದಿದೆ. ಇದರ ಜೊತೆಗೆ ಭಾರತದ 15ಕ್ಕೂ ಹೆಚ್ಚು ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಮುಂದಾಗಿತ್ತು. ಪಾಕ್‌ನ ಈ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ಮಧ್ಯದಲ್ಲೇ ತಡೆದು ವಿಫಲಗೊಳಿಸಿವೆ. ಪರಿಸ್ಥಿತಿ ಹೀಗಿದ್ದರೂ ಪಾಕಿಸ್ತಾನ ತನ್ನ ಆಟ ನಿಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸಚಿವ ನಮ್ಮ ತಾಳ್ಮೆಯನ್ನು ಪರೀಕ್ಷಿಸಿದರೆ ತಕ್ಕ ಪ್ರತಿಫಲ ಪಡೆಯಬೇಕಾದಿತು ಎಂದು ಪಾಕ್‌ಗೆ ಖಡಕ್ ಉತ್ತರ ನೀಡಿದ್ದಾರೆ. 

ಭಾರತ ಯಾವಾಗಲೂ ಜವಾಬ್ದಾರಿಯುತ ರಾಷ್ಟ್ರದಂತೆ ಬಹಳ ಸಂಯಮದಿಂದ ವರ್ತಿಸಿದೆ.  ಆದರೆ ಭಾರತದ ಈ ಸಂಯಮದ ಗುಣವನ್ನು ನಮ್ಮ ತಾಳ್ಮೆಯನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ಇದರ ಅರ್ಥವಲ್ಲ ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ. ಭಾರತದ ಆಪರೇಷನ್ ಸಿಂದೂರ್‌ಗೆ ಪ್ರತಿಯಾಗಿ ಭಾರತದಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿಗೆ ಮುಂದಾದ ಹಿನ್ನೆಲೆ ರಾಜನಾಥ್ ಸಿಂಗ್ ಅವರು ಈ ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡಿದ್ದಾರೆ. ಪಾಕಿಸ್ತಾನದ ಈ ದಾಳಿ ಯತ್ನವನ್ನು ವಿಫಲ ಮಾಡುವ ಭಾಗವಾಗಿ ಭಾರತವು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ಆ ದೇಶದ ವಾಯು ರಕ್ಷಣಾ ರಾಡಾರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಸರ್ವನಾಶ ಮಾಡಿದೆ. 

ನಾವು ಯಾವಾಗಲೂ ಜವಾಬ್ದಾರಿಯುತ ರಾಷ್ಟ್ರದಂತೆ ಬಹಳ ಸಂಯಮದಿಂದ ವರ್ತಿಸಿದ್ದೇವೆ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ನಂಬಿಕೆ ಇಡುತ್ತೇವೆ. ಆದರೆ ಇದರರ್ಥ ಯಾರಾದರೂ ನಮ್ಮ ತಾಳ್ಮೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದಲ್ಲ ಯಾರಾದರೂ ನಮ್ಮ ತಾಳ್ಮೆಯ ಅನಗತ್ಯ ಲಾಭ ಪಡೆಯಲು ಪ್ರಯತ್ನಿಸಿದರೆ, ಅವರು ನಿನ್ನೆಯ (ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿ) ರೀತಿಯ ಗುಣಮಟ್ಟದ ಪ್ರತಿಕ್ರಿಯೆಯನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಅವರು ಭಾರತದ ರಕ್ಷಣಾ ಪಡೆಗಳ ಧೈರ್ಯವನ್ನು ಶ್ಲಾಘಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯ ಮತ್ತು ಧೈರ್ಯಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಅವರು ನಾಶಪಡಿಸಿದ ರೀತಿ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿ , ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರ ಉಸಿರು ನಿಲ್ಲಿಸಲಾಗಿದೆ. ನಾವು ಗುಣಮಟ್ಟದ ಕೆಲಸವನ್ನು ನೋಡಿದ್ದೇವೆ. ಕಾರ್ಯಾಚರಣೆಯನ್ನು ಊಹಿಸಲಾಗದ ನಿಖರತೆಯೊಂದಿಗೆ ಕಾರ್ಯಗತಗೊಳಿಸಲಾಗಿದೆ. ಈ ಕಾರ್ಯಾಚರಣೆಯನ್ನು ಅಮಾಯಕರಿಗೆ ಯಾವುದೇ ಹಾನಿಯಾಗದಂತೆ ನಡೆಸಲಾಯಿತು ಎಂದು ರಾಜನಾಥ್ ಸಿಂಗ್ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಗುಣಮಟ್ಟದ ಸಮಾವೇಶವನ್ನು(National Quality Conclave) ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. 

ಈ ಯಶಸ್ಸಿಗೆ ಭಾರತದ ಸಶಸ್ತ್ರ ಪಡೆಗಳ ವೃತ್ತಿಪರತೆ ಮತ್ತು ಸೇನೆ ಹೊಂದಿರುವ ಸಲಕರಣೆಗಳು ಕಾರಣ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಮ್ಮ ಅಸಾಧಾರಣ ಮತ್ತು ವೃತ್ತಿಪರವಾಗಿ ತರಬೇತಿ ಪಡೆದ ಪಡೆಗಳು ಉತ್ತಮ ಗುಣಮಟ್ಟದ ಉಪಕರಣಗಳನ್ನು ಹೊಂದಿರುವುದರಿಂದ ಇದು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ರಕ್ಷಣಾ ವಲಯದಲ್ಲಿ ದೇಶದ ಸ್ವಾವಲಂಬನೆಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದರು. 2014 ರಿಂದ ಪ್ರಧಾನಿ ಮೋದಿ ರಕ್ಷಣಾ ಉತ್ಪಾದನಾ ಕ್ಷೇತ್ರದ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಅವರ ಮಾರ್ಗದರ್ಶಿ ತತ್ವವೆಂದರೆ ರಕ್ಷಣಾ ಸಾರ್ವಭೌಮತ್ವ ಎಂದು ಸಿಂಗ್ ಹೇಳಿದ್ದಾರೆ. 

ನಮ್ಮ ಸರ್ಕಾರ ರಕ್ಷಣಾ ಉತ್ಪಾದನೆಯಲ್ಲಿ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಸಮಾನವಾಗಿ ಗಮನಹರಿಸಿದೆ. ತ್ವರಿತ ಸುಧಾರಣೆ ತರಲು ನಾವು ಶಸ್ತ್ರಾಸ್ತ್ರ ಕಾರ್ಖಾನೆಗಳ ಕಾರ್ಪೊರೇಟೀಕರಣ ಸೇರಿದಂತೆ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.

ಒಂದು ರಕ್ಷಣಾ ಪೂರೈಕೆದಾರನಾಗಿ ಭಾರತದ ವಿಶ್ವಾಸಾರ್ಹತೆಯ ಬಗ್ಗೆ ಮಾತನಾಡಿದ ಸಿಂಗ್, ಬ್ರಾಂಡ್ ಇಂಡಿಯಾ ಎಂದರೆ ಭಾರತೀಯ ಕಂಪನಿಯು ಏನನ್ನಾದರೂ ಭರವಸೆ ನೀಡಿದರೆ ಅದನ್ನು ಪೂರೈಸುತ್ತದೆ ಎಂದರ್ಥ. ಒಂದು ಉತ್ಪನ್ನವು ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿ ಅಥವಾ ತಾಪಮಾನದಲ್ಲಿ ಕಾರ್ಯನಿರ್ವಹಿಸಬೇಕಾದರೆ ಅದು ಭರವಸೆ ನೀಡಿದಂತೆ ತಲುಪಿಸಬೇಕು. ಇದು ನಮ್ಮ ಗುಣಮಟ್ಟದ ಭರವಸೆಯಾಗಿರಬೇಕು ಎಂದು ಹೇಳಿದರು. ಇಂತಹ ಗುಣಮಟ್ಟ ಮಾನದಂಡಗಳನ್ನು ತಲುಪಿದಾಗ ಮಾತ್ರ ಭಾರತವನ್ನು ಅಂತಾರಾಷ್ಟ್ರೀಯ ಖರೀದಿದಾರರು ನಂಬುತ್ತಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಇದೇ ವೇಳೆ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವ ಬದ್ಧತೆಯ ಬಗ್ಗೆ ದೇಶದ ಜನರಿಗೆ ಭರವಸೆ ನೀಡಿದ ರಾಜನಾಥ್ ಸಿಂಗ್, ನಮ್ಮ ರಾಷ್ಟ್ರವನ್ನು ರಕ್ಷಿಸುವುದಕ್ಕಾಗಿ ಯಾವುದೇ ಮಿತಿ ನಮ್ಮನ್ನು ತಡೆಯುವುದಿಲ್ಲ. ಯಾವುದೇ ಜವಾಬ್ದಾರಿಯುತ ಪ್ರತಿಕ್ರಿಯೆಗೆ ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ನಮ್ಮ ವಿಸ್ತರಿಸುತ್ತಿರುವ ರಕ್ಷಣಾ ಕೈಗಾರಿಕಾ ವಿಶ್ವವು ನಮಗೆ ಅಭೂತಪೂರ್ವ ಶಕ್ತಿಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..