S 400 missile system: ಭಾರತೀಯ ಸೇನೆಯ ಶೌರ್ಯವನ್ನು ತೋರಿಸುವ ವಿಡಿಯೋ ವೈರಲ್!

Published : May 08, 2025, 05:30 PM IST
S 400 missile system: ಭಾರತೀಯ ಸೇನೆಯ ಶೌರ್ಯವನ್ನು ತೋರಿಸುವ ವಿಡಿಯೋ ವೈರಲ್!

ಸಾರಾಂಶ

'ಭಾರತದ S-400 ಸುದರ್ಶನ ಚಕ್ರ: ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ, ಭಯಭೀತರಾದ ಪಾಕಿಸ್ತಾನವು ಭಾರತೀಯ ಸೇನೆಯ ಹಲವಾರು ಸೇನಾ ನೆಲೆಗಳನ್ನು ಗುರಿಯಾಗಿಸಲು ವಿಫಲ ಪ್ರಯತ್ನ ಮಾಡಿದೆ. ಭಾರತದ 15 ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಪ್ರಯತ್ನಿಸಿತ್ತು. ಪಾಕಿಸ್ತಾನ ಗುರಿಯಾಗಿಸಿದ 7 ನಗರಗಳು ಪಂಜಾಬ್‌ನಲ್ಲಿದ್ದವು. ಆದರೆ ಸರ್ವ ಸನ್ನದ್ಧವಾಗಿದ್ದ ಭಾರತದ ಎಸ್-400 ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶದಲ್ಲೇ ಹೊಡೆದುರುಳಿಸಿದೆ.

'S-400 missile system: ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ, ಭಯಭೀತರಾದ ಪಾಕಿಸ್ತಾನವು ಭಾರತೀಯ ಸೇನೆಯ ಹಲವಾರು ಸೇನಾ ನೆಲೆಗಳನ್ನು ಗುರಿಯಾಗಿಸಲು ವಿಫಲ ಪ್ರಯತ್ನ ಮಾಡಿದೆ. ಭಾರತದ 15 ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಪ್ರಯತ್ನಿಸಿತ್ತು. ಪಾಕಿಸ್ತಾನ ಗುರಿಯಾಗಿಸಿದ 7 ನಗರಗಳು ಪಂಜಾಬ್‌ನಲ್ಲಿದ್ದವು. ಆದರೆ ಸರ್ವ ಸನ್ನದ್ಧವಾಗಿದ್ದ ಭಾರತದ ಎಸ್-400 ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶದಲ್ಲೇ ಹೊಡೆದುರುಳಿಸಿದೆ.

ಪಾಕಿಸ್ತಾನಿ ಕ್ಷಿಪಣಿಗಳನ್ನ ಚಿಂದಿ ಮಾಡಿದ ಸುದರ್ಶನ ಚಕ್ರ!
ಪಾಕಿಸ್ತಾನ ಗುರಿಯಾಗಿಸಲು ಪ್ರಯತ್ನಿಸಿದ 15 ನಗರಗಳಲ್ಲಿ ಗಡಿ ನಗರವಾದ ಅಮೃತಸರವೂ ಸೇರಿತ್ತು. ಅಮೃತಸರದಲ್ಲಿಯೇ ಭಾರತದ ವಾಯು ರಕ್ಷಣಾ ವ್ಯವಸ್ಥೆ ಎಸ್ -400 ಸುದರ್ಶನ ಚಕ್ರ ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ನಾಶಪಡಿಸಿದೆ. ಭಾರತೀಯ ಸೇನೆಯ ಶೌರ್ಯವನ್ನು ತೋರಿಸುವ ವಿಡಿಯೋವೊಂದು ಬಹಿರಂಗವಾಗಿದೆ. ಇದರಲ್ಲಿ ರಾತ್ರಿಯಲ್ಲಿ ಆಕಾಶದಲ್ಲಿ ಇದ್ದಕ್ಕಿದ್ದಂತೆ ಒಂದು ಹೊಳಪು ಕಾಣಿಸಿಕೊಂಡು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಅದನ್ನು ಅಲ್ಲಿಯೇ ನಾಶಪಡಿಸುತ್ತದೆ ಎಂದು ಕಾಣಬಹುದು.

2025 ರ ಮೇ 07-08 ರ ರಾತ್ರಿ, ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಲು ವಿಫಲ ಪ್ರಯತ್ನ ಮಾಡಿತು.

ಪಾಕಿಸ್ತಾನಿ ನುಸುಳುಕೋರನನ್ನು ಕೊಂದ ಬಿಎಸ್‌ಎಫ್

ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಗ್ಗುವವರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೊಂದಿದೆ. ಮೇ 7-8ರ ಮಧ್ಯರಾತ್ರಿ ಫಿರೋಜ್‌ಪುರ ವಲಯದಲ್ಲಿ ಬಿಎಸ್‌ಎಫ್ ಒಬ್ಬ ಪಾಕಿಸ್ತಾನಿ ವ್ಯಕ್ತಿಯನ್ನು ಕೊಂದಿತು. ಕತ್ತಲೆಯಲ್ಲಿ ಅವರು ಉದ್ದೇಶಪೂರ್ವಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟುತ್ತಿರುವುದು ಕಂಡುಬಂದಿದೆ ಮೊದಲಿಗೆ ಎಚ್ಚರಿಕೆ ನೀಡಿದರೂ ಒಳನುಸುಳಲು ಯತ್ನಿಸಿದವನನ್ನು ಹೊಡೆದುರುಳಿಸತು.

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಅಧ್ಯಕ್ಷ ಫಿಲೆಮನ್ ಯಾಂಗ್ ಗುರುವಾರ (ಮೇ 8, 2025) ಎರಡೂ ದೇಶಗಳು ಸಂಯಮದಿಂದ ವರ್ತಿಸಬೇಕು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ