
ಜೈಪುರ: ಕೆಲ ತಿಂಗಳ ಹಿಂದೆಯಷ್ಟೇ ಮುಸ್ಕಾನ್ ಪ್ರಕರಣ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಇದೀಗ ಅಂತಹುವುದೇ ಒಂದು ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಗಂಡನನ್ನು ಕೊಂದು ಶವವನ್ನು ಡ್ರಮ್‌ನಲ್ಲಿ ತುಂಬಿಸಿ ಅದನ್ನ ಸಿಮೆಂಟ್ ನಿಂದ ಮುಸ್ಕಾನ್ ಪ್ಯಾಕ್ ಮಾಡಿದ್ದಳು. ಖೈರ್ತಲಾ ತಿಜಾರಾ ಜಿಲ್ಲೆಯ ಕಿಶನಗಢಬಾಸ್ ಎಂಬಲ್ಲಿ ಮುಸ್ಕಾನ್ ತಂಗಿ ಲಕ್ಷ್ಮೀ ಪತ್ತೆಯಾಗಿದ್ದಾಳೆ. ಗಂಡನನ್ನು ಕೊಂದು ಆತನ ಶವವನ್ನು ನೀಲಿ ಡ್ರಮ್‌ನಲ್ಲಿ ಲಕ್ಷ್ಮೀ ಬಚ್ಚಿಟ್ಟಿದ್ದಳು.
ಆದರ್ಶ ನಗರ ಕಾಲೋನಿಯಲ್ಲಿ ವಾಸವಾಗಿದ್ದ ಹಂಸರಮ್ ಕೊ*ಲೆಯಾದ ವ್ಯಕ್ತಿ. ಇಟ್ಟಿಗೆ ತಯಾರಿಸುವ ಕೇಂದ್ರದಲ್ಲಿ ದಿನಗೂಲಿ ಮಾಡಿಕೊಂಡಿದ್ದ ಹಂಸರಾಮ್ ಬಾಡಿಗೆ ಮನೆಯಲ್ಲಿ ಪತ್ನಿ ಲಕ್ಷ್ಮೀಯೊಂದಿಗೆ ವಾಸವಾಗಿದ್ದನು. ಆದ್ರೆ ಮನೆ ಮಾಲೀಕ ಜಿತೇಂದ್ರ ಜೊತೆಯಲ್ಲಿ ಲಕ್ಷ್ಮೀ ಅನೈತಿಕ ಸಂಬಂಧ ಹೊಂದಿದ್ದಳು. ಜೀತೇಂದ್ರ ಜೊತೆ ಸೇರಿಕೊಂಡು ಗಂಡ ಹಂಸರಾಮ್‌ನನ್ನು ಲಕ್ಷ್ಮೀ ಕೊ*ಲೆ ಮಾಡಿದ್ದಾಳೆ.
ಹಂಸರಾಮ್‌ನನ್ನು ಕೊ*ಲೆಯ ಬಳಿಕ ಮೂರು ಮಕ್ಕಳ ಮತ್ತು ಪ್ರಿಯಕರ ಜಿತೇಂದ್ರ ಜೊತೆ ಪರಾರಿಯಾಗಿದ್ದಳು. ಎರಡು ದಿನವಾದ್ರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವರು ಕೆಳಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಜಿತೇಂದ್ರ ತಾಯಿ ಮೇಲೆ ಹೋಗಿದ್ದಾರೆ. ಮೇಲೆ ಹೋಗುತ್ತಿದ್ದಂತೆ ಬ್ಯಾರೆಲ್‌ನಿಂದ ಕೆಟ್ಟ ವಾಸನೆ ಬಂದಿದೆ. ಹೋಗಿ ನೋಡಿದಾಗ ಅದರೊಳಗೆ ಶವ ಪತ್ತೆಯಾಗಿದೆ. ಕೂಡಲೇ ಮಹಿಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿದ್ದ ಲಕ್ಷ್ಮೀ ಮತ್ತು ಜಿತೇಂದ್ರ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ತನಿಖೆ ಆರಂಭಿಸಿದ ಕಡಿಮೆ ಸಮಯದಲ್ಲಿಯೇ ಇಬ್ಬರು ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ.
ಹಂಸರಾಮ್ ಕೊ*ಲೆ ಬಳಿಕ ಲಕ್ಷ್ಮೀ ಮತ್ತು ಜಿತೇಂದ್ರ ರಾಮಗಢನಲ್ಲಿರುವ ಕಮಲ್ ಭಟ್ ಎಂಬವರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇವರ ಜೊತೆಯಲ್ಲಿ ಮೂರು ಮಕ್ಕಳಿದ್ದರು. ಹಂಸರಾಮ್ ಮತ್ತು ಜತೇಂದ್ರ ಜೊತೆಯಾಗಿ ಇಟ್ಟಿಗೆ ಭಟ್ಟಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ಸದಾ ಇಬ್ಬರು ಜೊತೆಯಾಗಿರುತ್ತಿದ್ದರು. ಈ ಹಿನ್ನೆಲೆ ತನ್ನದೇ ಮನೆಯ ಮೇಲ್ಭಾಗದಲ್ಲಿರುವ ಕೋಣೆಯಲ್ಲಿ ಉಳಿದುಕೊಳ್ಳಲು ಜಿತೇಂದ್ರ ಸ್ಥಳ ನೀಡಿದ್ದನು. ಈ ವೇಳೆ ಲಕ್ಷ್ಮೀ ಮತ್ತು ಜಿತೇಂದ್ರ ನಡುವೆ ಸಂಬಂಧ ಶುರುವಾಗಿತ್ತು ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಜಿತೇಂದ್ರ ಜೊತೆ ತಾಯಿ ಮಿಥಲೇಶ್ ದೇವಿ ಮತ್ತು ಆತನ ಮಗ ಆದಿತ್ಯ ಸಹ ವಾಸವಾಗಿದ್ದರು. ಜಿತೇಂದ್ರ ಪತ್ನಿ 13 ವರ್ಷಗಳ ಹಿಂದೆಯೇ ವಿದ್ಯುತ್ ಅವಘಡದಲ್ಲಿ ಮೃತರಾಗಿದ್ದರು. ಹಂಸರಾಮ್ ಕೆಲಸ ಕಳೆದುಕೊಂಡ ಬಳಿಕ ಗೆಳೆಯನ ಇಡೀ ಕುಟುಂಬವನ್ನು ಮನೆಗೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದನು.
ಹಂಸರಾಮ್‌ಗೆ ಕೆಲಸ ಕೊಡಿಸುವ ನೆಪದಲ್ಲಿ ಪದೇ ಪದೇ ಲಕ್ಷ್ಮೀಯನ್ನು ಭೇಟಿಯಾಗಲು ಜಿತೇಂದ್ರ ತೆರಳುತ್ತಿದ್ದನು. ಜಿತೇಂದ್ರ ಮತ್ತು ಹಂಸರಾಮ್ ಆಗಾಗ್ಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ್ಮೀ ಮತ್ತು ಜಿತೇಂದ್ರ ಆಕ್ಟಿವ್ ಆಗಿರುತ್ತಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಿಥಲೇಶ್ ದೇವಿ, ಎರಡು ದಿನಗಳ ಹಿಂದೆಯಷ್ಟೇ ನೀರು ತುಂಬಿಸಲು ಲಕ್ಷ್ಮೀ ಡ್ರಮ್ ಪಡೆದುಕೊಂಡಿದ್ದಳು. ಆದ್ರೆ ಡ್ರಮ್‌ನಲ್ಲಿ ಹಂಸರಾಮ್ ಶವ ತುಂಬಿಸುತ್ತಾಳೆ ಎಂಬ ವಿಷಯ ನನಗೆ ಗೊತ್ತಿರಲಿಲಲ್ಲ. ನೀರು ತುಂಬಿಸುವ ಡ್ರಮ್ ಇಂತಹ ಕೆಲಸಗಳಿಗೆ ಬಳಕೆ ಮಾಡ್ತಾರೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ ಎಂದು ಹೇಳುತ್ತಾರೆ. ಜಿತೇಂದ್ರ ಇಬ್ಬರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ