ವೋಟು ನೀಡುವಂತೆ ರಸ್ತೆಯಲ್ಲೇ ಕಾಲಿಗೆ ಬಿದ್ದು ವಿದ್ಯಾರ್ಥಿಗಳ ಹೈಡ್ರಾಮಾ: ವಿಡಿಯೋ ವೈರಲ್

By Anusha KbFirst Published Aug 29, 2022, 1:16 PM IST
Highlights

ಕಾಲೇಜು ಚುನಾವಣೆಯಲ್ಲಿ ಕಣಕ್ಕಿಳಿದಿರುವ ವಿದ್ಯಾರ್ಥಿಗಳು, ಯಾವುದೇ ರಾಜಕಾರಣಿಗೂ ಕಡಿಮೆ ಇಲ್ಲದಂತೆ ರಸ್ತೆಯಲ್ಲಿ ವಿದ್ಯಾರ್ಥಿಗಳ ಕಾಲಿಗೆ ಬಿದ್ದು, ಮತ ಕೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಪ್ರತಿವರ್ಷ ಚುನಾವಣೆ ನಡೆದು ಯಾರಾದರೊಬ್ಬ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗುತ್ತಾರೆ. ಕಾಲೇಜು ದಾಟಿ ಬಂದ ಬಹುತೇಕರಿಗೂ ಕಾಲೇಜು ಮೆಟ್ಟಿಲು ಹತ್ತದವರಿಗೂ ಇದು ಳಿದಿರುವ ವಿಚಾರ. ಆದರೆ ಶಾಲಾ ಕಾಲೇಜುಗಳಿಗೆ ಮೀಸಲಾದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಕನಿಷ್ಟ ಓಟು ಕೊಡಿ ಎಂದು ಕೇಳುತ್ತಾರೆಯೇ ಹೊರತು ಯಾವುದೇ ಆಮಿಷ ಒಡ್ಡುವುದು ತೀರಾ ಕಡಿಮೆ. ಆದರೆ ಈಗ ಕಾಲ ಬದಲಾಗಿದ್ದು, ಕೆಲ ವಿದ್ಯಾರ್ಥಿಗಳು ಯಾವುದೇ ರಾಜಕಾರಣಿಗಳಿಗೂ ಕಡಿಮೆ ಇಲ್ಲದಂತೆ ನಾಟಕ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಈಗ ವೈರಲ್ ಆಗಿರುವ ಈ ವಿಡಿಯೋವೇ ಸಾಕ್ಷಿ.

ರಾಜಸ್ತಾನದ (Rajasthan) ವಿಶ್ವವಿದ್ಯಾನಿಲಯ ಮಟ್ಟದ ಕಾಲೇಜು ಆವರಣದಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿದ್ಯಾರ್ಥಿಗಳು,  ರಸ್ತೆ ಬೀದಿ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಮತ ನೀಡುವಂತೆ ಹೆಣ್ಣು ಮಕ್ಕಳ, ಹುಡುಗರ ಕಾಲಿಗೆ ಬಿದ್ದು, ವೋಟು ನೀಡುವಂತೆ ಮನವಿ ಮಾಡುತ್ತಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ವೇಳೆ ಅಚಾನಕ್ ಆಗಿ ಬಂದು ಕಾಲಿಗೆ ಬೀಳುವ ಹುಡುಗರನ್ನು ನೋಡಿ ಯುವತಿಯರು ಬೆಚ್ಚಿ ಬೀಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ.

राजस्थान विश्वविद्यालय छात्र संघ चुनाव के दौरान प्रत्याशियों ने सड़क पर लेटकर पैर पकड़कर माँगे वोट. pic.twitter.com/rmvlgCFXgJ

— UnSeen India (@USIndia_)

Latest Videos

ವಿದ್ಯಾರ್ಥಿನಿಯರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ರಸ್ತೆಯಲ್ಲಿಯೇ ಸಾಷ್ಟಾಂಗ ನಮಸ್ಕಾರ ಹಾಕುತ್ತಿರುವ ಯುವಕರ ಹಾವಳಿಗೆ ಯುವತಿಯರೇ ಶಾಕ್ ಆಗಿದ್ದಾರೆ. ವಿದ್ಯಾರ್ಥಿನಿಯರು ಕಾಲು ಬಿಡುವಂತೆ ಕೇಳಿಕೊಂಡರು ಬಿಡದೇ ಹಲವು ಸೆಕೆಂಡುಗಳ ಕಾಲ ಯುವತಿಯರ ಕಾಲಿಗೆ ಬಿದ್ದಿದ್ದರಿಂದ ಯುವತಿಯರು ಮುಜುಗರಕ್ಕೊಳಗಾಗಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಯೆಸ್ ಆದರೆ ಮೊದಲು ಕಾಲು ಬಿಡು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 

ಬಿಬಿಎಂಪಿಯ ಚುನಾವಣೆಗಾಗಿ ಕಾಂಗ್ರೆಸ್‌ನ ವಿಷನ್‌ ಡಾಕ್ಯೂಮೆಂಟ್‌ ರಚನೆಗೆ ನಿರ್ಧಾರ

ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಅನೇಕರು ವಿದ್ಯಾರ್ಥಿಗಳ ಈ ವಿಚಿತ್ರ ವರ್ತನೆಗೆ ಶಾಕ್ ಆಗಿದ್ದಾರೆ. ರಾಜಸ್ತಾನದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ(Student federation) ವಿದ್ಯಾರ್ಥಿಗಳು ರಸ್ತೆಯಲ್ಲಿಯೇ ವಿದ್ಯಾರ್ಥಿಗಳ ಕಾಲಿಗೆ ಬಿದ್ದು, ಮತ ಯಾಚಿಸಿದರು ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. 

ಈ ವಿಡಿಯೋ ನೋಡಿದ ಕೆಲವರು ಸಖತ್ ಆಗಿ ಕಾಮೆಂಟ್ ಮಾಡಿದ್ದಾರೆ. ಇವರು ಡೌನ್ ಟು ಅರ್ಥ್‌ ವ್ಯಕ್ತಿತ್ವದ ಅಭ್ಯರ್ಥಿಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರು ಭವಿಷ್ಯದ ರಾಜಕಾರಣಿಗಳು ಎಂದು ಕಾಮೆಂಟ್ ಮಾಡಿದ್ದಾರೆ. ಹಲವು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕರ ಆಯ್ಕೆಗೆ ರಾಜಸ್ತಾನದಲ್ಲಿ ಆಗಸ್ಟ್ (26) ರಂದು ಚುನಾವಣೆ ನಡೆದಿತ್ತು. ರಾಜಸ್ತಾನ ವಿಶ್ವವಿದ್ಯಾನಿಲಯದಲ್ಲಿ ಸಾಮಾನ್ಯವಾಗಿ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾ (NSUI) ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಧ್ಯೆ(ABVP) ಮಧ್ಯೆ ದೊಡ್ಡಮಟ್ಟದ ಸ್ಪರ್ಧೆ ಇರುತ್ತದೆ. NSUI ಕಾಂಗ್ರೆಸ್ ಬೆಂಬಲಿತವಾಗಿದ್ದರೆ, ABVP ಬಿಜೆಪಿ ಬೆಂಬಲಿತವಾಗಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ 79 ಲಕ್ಷ ಜನರಿಗೆ ಮತದಾನ ಹಕ್ಕು

ಇಂದು ಕಾಲೇಜು ಚುನಾವಣೆಗಳು (Election) ಯಾವುದೇ ಜನಪ್ರತಿನಿಧಿಗಳ ಚುನಾವಣೆಗಿಂತ ಕಡಿಮೆ ಏನು ಇರುವುದಿಲ್ಲ. ಇಂದಿನ ವಿದ್ಯಾರ್ಥಿಗಳೇ ನಾಳೆಯ ರಾಜಕಾರಣಿಗಳು ಎಂದು ಹೇಳುವಂತೆ ಕಾಲೇಜು ಚುನಾವಣೆಗಳೂ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡುತ್ತವೆ. ಕೆಲ ವಿದ್ಯಾರ್ಥಿಗಳು ತಾವು ಯಾವುದೇ ರಾಜಕಾರಣಿಗಳಿಗೂ ಕಡಿಮೆ ಇಲ್ಲದಂತೆ ಕಾಲೇಜು ಚುನಾವಣೆಗಳ ಸಂದರ್ಭದಲ್ಲಿ ಪುಢಾರಿ ರಾಜಕಾರಣಿಗಳಂತೆ ಸಹ ವಿದ್ಯಾರ್ಥಿಗಳಿಗೆ ಹಲವು ಆಮಿಷಗಳನ್ನು ಒಡ್ಡುತ್ತಾರೆ. ಇತ್ತೀಚೆಗೆ ಕಾಲೇಜು ಚುನಾವಣೆಗಳಲ್ಲಿ ಕೆಲ ರಾಜಕೀಯ ಪಕ್ಷಗಳು ವಿದ್ಯಾರ್ಥಿ ವಿಂಗ್ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಇಂದು ಕಾಲೇಜು ಚುನಾವಣೆಗಳು ಕಾಲೇಜು ಚುನಾವಣೆಯಾಗಿ ಉಳಿದಿಲ್ಲ. ಇದು ರಾಜಕೀಯದತ್ತ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ದೊಡ್ಡ ವೇದಿಕೆಯಾಗುತ್ತಿದೆ. 
 

click me!