
ಜೈಪುರ(ನ. 19) ರಾಜಸ್ಥಾನದ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಹೆಜ್ಜೆ ಇಟ್ಟಿದೆ. ಭರತ್‌ಪುರ ಪ್ರದೇಶದ ಬನ್ಸಿ ಪಹಾರ್‌ಪುರ ಗಣಿಯಿಂದ ಗುಲಾಬಿ ಕಲ್ಲು ತೆಗೆಯಲು ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಶೀಘ್ರದಲ್ಲೇ ತೆಗೆದುಹಾಕುವ ನಿರೀಕ್ಷೆಯಿದೆ.
ವಿಶೇಷವೆಂದರೆ, ಈ ಪ್ರದೇಶದ ಗುಲಾಬಿ ಕಲ್ಲನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ವರ್ಷಗಳಿಂದ ನಡೆಯುತ್ತಿರುವ ಗುಲಾಬಿ ಕಲ್ಲಿನ ಹೊರತೆಗೆಯುವಿಕೆ ಕಾನೂನುಬಾಹಿರವಾಗಿದೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಕಡಿವಾಣ ಹಾಕಿತ್ತು. ಭರತ್ ಪುರ ಆಡಳಿತ ಮತ್ತು ಅರಣ್ಯ ಅಧಿಕಾರಿಗಳು ಗುಲಾಬಿ ಕಲ್ಲು ತುಂಬಿದ 25 ಲಾರಿಗಳನ್ನು ಸೆಪ್ಟೆಂಬರ್ 7 ರಂದು ವಶಪಡಿಸಿಕೊಂಡಿದ್ದರು.
ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ಬೃಹತ್ ಆಂಜನೇಯ
ಆದರೆ ಇದೀಗ ಗುಲಾಬಿ ಕಲ್ಲಿನ ಗಣಿಗಾರಿಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಪ್ರದೇಶವನ್ನು 2016 ರಲ್ಲಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿಸಲಾಗಿದೆ ಎಂದು ಭರತ್‌ಪುರ ಜಿಲ್ಲಾಧಿಕಾರಿ ನಾಥ್ಮಲ್ ಡಿಡೆಲ್ ಹೇಳಿದ್ದಾರೆ. ಆದಾಗ್ಯೂ, ಕಂದಾಯ, ಗಣಿಗಳು ಮತ್ತು ಅರಣ್ಯ ಇಲಾಖೆಗಳು ನಡೆಸಿದ ಸಮೀಕ್ಷೆಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಅರಣ್ಯ ಅಥವಾ ಪ್ರಾಣಿಗಳಿಲ್ಲ ಎಂಬ ಅಂಶದ ಆಧಾರಲ್ಲಿ ಇದೀಗ ಅನುಮತಿ ನೀಡಲು ಮುಂದಾಗಿದೆ.
ಕಾನೂನುಬದ್ಧ ಗಣಿಗಾರಿಕೆಗೆ ಅನುಮತಿ ನೀಡಿದರೆ ಗುಲಾಬಿ ಕಲ್ಲು ತೆಗೆಯಲು ಗುತ್ತಿಗೆ ನೀಡಲಾಗುವುದು. ಈ ಕಲ್ಲಿಗೆ ದೇಶಾದ್ಯಂತ ಅತಿ ಹೆಚ್ಚಿನ ಬೇಡಿಕೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ