
ನವದೆಹಲಿ(ನ.19): ಪಾಕಿಸ್ತಾನ ಆಕ್ರಮಿತ ಪ್ರದೇಶ(PoK)ಯಲ್ಲಿನ ಉಗ್ರರ ತಾಣದ ಮೇಲೆ ಭಾರತೀಯ ವಾಯುಸೇನೆ ಪಿನ್ ಪಾಯಿಂಟ್ ಸ್ಟ್ರೈಕ್ ನಡೆಸಿದ ಅನ್ನೋ ವರದಿ ಭಾರಿ ಸಂಚಲನ ಸೃಷ್ಟಿಸಿತ್ತು. ಉಭಯ ದೇಶಗಳ ನಡುವೆ ಸೃಷ್ಟಿಯಾಗಿರುವ ಬಿಗುವಿನ ವಾತವಾರಣವನ್ನು ಮತ್ತಷ್ಟು ಉದ್ವಿಘ್ನಗೊಳಿಸಿತ್ತು. ಆದರೆ ವರದಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಭಾರತೀಯ ಸೇನೆ ಈ ಕುರಿತು ಸ್ಪಷ್ಟನೆ ನೀಡಿದೆ.
ಜಮ್ಮು ಹೆದ್ದಾರಿಯಲ್ಲಿ ಉಗ್ರರ ಮೇಲೆ ಗುಂಡಿನ ಸುರಿಮಳೆ; ಮೈ ಜುಮ್ಮೆನಿಸುವ ವಿಡಿಯೋ!.
ಭಾರತೀಯ ವಾಯು ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ಬಳಿ ಪಿನ್ ಪಾಯಿಂಟ್ ಸ್ಟ್ರೈಕ್ ನಡೆಸಿಲ್ಲ. ಈ ಕುರಿತು ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಶನ್ಸ್ ಪರಮಜೀತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಭಾರತೀಯ ವಾಯುಸೇನೆ ಪಿನ್ ಪಾಯಿಂಟ್ ಸ್ಟ್ರೈಕ್ ನಡೆಸಿದ್ದು, ಉಗ್ರರ ಅಡಗುತಾಣ ಸೇರಿದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿತ್ತು. ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಗಡಿಯುದ್ದಕ್ಕೂ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಪ್ರತಿಯಾಗಿ ಭಾರತ ಈ ಪಿನ್‌ಪಾಯಿಂಟ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿತ್ತು.
ಭಾರತೀಯ ನೌಕಾಪಡೆಗೆ ಅಮೆರಿಕದಿಂದ ಬಂತು ಮೊದಲ ಪೊಸೈಡಾನ್ 8I ಏರ್‌ಕ್ರಾಫ್ಟ್!.
ಇನ್ನು ಶ್ರೀನಗರ ಹೆದ್ದಾರಿಯ ನಾಗ್ರೋಟ ಟೋಲ್ ಪ್ಲಾಜಾ ಬಳಿಕ ನಾಲ್ವರು ಜೈಶ್ ಇ ಮೊಹಮ್ಮದ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿತ್ತು. ಜಮ್ಮು ಮತ್ತು ಕಾಶ್ಮೀರದ ಶಾಂತಿ ಕದಡುತ್ತಿರುವ ಪಾಕಿಸ್ತಾನಕ್ಕೆ ತಕ್ಕೆ ತಿರುಗೇಟು ನೀಡಲು ಪಿನ್ ಪಾಯಿಂಟ್ ಸ್ಟ್ರೈಕ್ ನಡೆಸಲಾಗಿದೆ ಎಂದು ವರದಿಯಾಗಿತ್ತು. ಆದರೆ ಈ ಎಲ್ಲಾ ವರದಿಗಳನ್ನು ಭಾರತೀಯ ವಾಯುಸೇನೆ ತಳ್ಳಿ ಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ