ಹಬ್ಬದ ನಂತರ ಏರಿದ ಕೊರೋನಾ, ಇಂದಿನಿಂದಲೇ ನೈಟ್  ಕರ್ಫ್ಯೂ ಜಾರಿ

By Suvarna NewsFirst Published Nov 19, 2020, 9:14 PM IST
Highlights

ಹಬ್ಬದ ನಂತರ ಏಕಾಏಕಿ ಏರಿದ ಕೊರೋನಾ ಸೋಂಕು/  ನೈಟ್ ಕರ್ಫ್ಯೂ  ಜಾರಿ ಮಾಡಲು ಆಡಳಿತದ ನಿರ್ಧಾರ/ ಅಹಮದಾಬಾದ್ ನಲ್ಲಿ ನೈಟ್ ಕರ್ಫ್ಯೂ / ಮುಂದಿನ ಆದೇಶದವರೆಗೂ ಜಾರಿಯಲ್ಲಿ ಇರುತ್ತದೆ

ಅಹಮದಾಬಾದ್ (ನ. 19)  ಕೊರೋನಾ ವೈರಸ್ ಸೋಕುಗಳು ಮಿತಿಮೀರಿ ಏರಿಕೆ ಕಂಡಿದ್ದು ಆತಂಕಕ್ಕೆ ಕಾರಣವಾಗಿದ್ದು ಅಹಮದಾಬಾದ್ ನಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ.  ತಡರಾತ್ರಿ ಟ್ವೀಟ್ ಮಾಡಿರುವ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜೀವ್ ಕುಮಾರ್ ಗುಪ್ತಾ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 6 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆಗಳಿಗೆ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಹಬ್ಬದ  ಸಂದರ್ಭ ಕೊರೋನಾ ಹೊಸ ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿದೆ. ನಗರದ ಆಸ್ಪತ್ರೆಗಳಲ್ಲಿ COVID-19 ರೋಗಿಗಳಿಗೆ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಸಿದ್ಧಮಾಡಲಾಗಿದೆ. ಅಹಮದಾಬಾದ್ ನಗರವು ನವೆಂಬರ್ ಆರಂಭದಿಂದಲೂ ಕರೋನಾ ವೈರಸ್ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ನಗರದಲ್ಲಿ ಈಗ ಪ್ರತಿದಿನ 200 ಕ್ಕೂ ಹೆಚ್ಚು COVID-19 ಸೋಂಕು ಕಾಣಿಸಿಕೊಳ್ಳುತ್ತಿದೆ. ತಿಂಗಳ ಹಿಂದೆ ಈ ಸಂಖ್ಯೆ ಕೇವಲ 125 ರಿಂದ 130 ಇತ್ತು.

ಮೊದಲ ಹಂತದಲ್ಲಿ ದೇಶ ಕಾಯುವ ಯೋಧರಿಗೆ ಕೊರೋನಾ ಲಸಿಕೆ

ಆಸ್ಪತ್ರೆಗಳಲ್ಲಿ ಇನ್ನೂ ಶೇ. 40  ಹಾಸಿಗೆಗಳು ಲಭ್ಯವಿವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.   ರಾಜೀವ್ ಕುಮಾರ್ ಗುಪ್ತಾ ಅವರನ್ನು COVID-19 ಗಾಗಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಬುಧವಾರ 220 ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸಂಖ್ಯೆ 46,022 ಕ್ಕೆ ತಲುಪಿದೆ.  ಐದು ಸಾವು ಸಂಭವಿಸಿದ್ದು ಒಟ್ಟು 1,949 ಜನ ಕೊರೋನಾಖ್ಕೆ ಬಲಿಯಾಗಿದ್ದಾರೆ.  221 ಚೇತರಿಕೆ ಕಂಡಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾದ ರೋಗಿಗಳ ಸಂಖ್ಯೆ 40,753 ಕ್ಕೆ ಏರಿದೆ. 

Corona situation was reviewed late night and it has been decided that “complete curfew”shall be imposed from tomorrow night 9:00 pm till Monday morning 6:00 am in city of Ahmedabad. During this period, only shops selling milk and medicines shall be permitted to remain open

— Dr Rajiv Kumar Gupta (@drrajivguptaias)
click me!