
ಹರ್ದೋಯಿ: ಗೂಡ್ಸ್ ರೈಲೊಂದರ ಚಕ್ರಗಳ ನಡುವೆ ಕುಳಿತು ಬಾಲಕನೋರ್ವ ನೂರು ಕಿಲೋ ಮೀಟರ್ ಪ್ರಯಾಣಿಸಿ ಪವಾಡಸದೃಶವಾಗಿ ಪಾರಾದ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕ ರೈಲ್ವೆ ಟ್ರ್ಯಾಕ್ ಮೇಲೆ ಪಾರ್ಕ್ ಮಾಡಲಾಗಿದ್ದ ಗೂಡ್ಸ್ ರೈಲಿನ ಚಕ್ರಗಳಿರುವ ಜಾಗದಲ್ಲಿ ಆಟವಾಡುತ್ತಿದ್ದಾಗ ರೈಲು ಚಲಿಸಲು ಆರಂಭಿಸಿದ್ದರಿಂದ ಕೆಳಗೆ ಇಳಿಯಲು ಸಾಧ್ಯ ಆಗದೇ ಸುಮಾರು 100 ಕಿಲೋ ಮೀಟರ್ ದೂರ ಬಾಲಕ ಚಲಿಸಿದ್ದಾನೆ. ಆದರೆ ಹರ್ದೋಯಿ ತಲುಪುವ ವೇಳೆ ರೈಲ್ವೆ ಸಿಬ್ಬಂದಿಗೆ ವಿಚಾರ ತಿಳಿದಿದ್ದು, ಕೂಡಲೇ ಆತನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಪುಟ್ಟ ಹುಡುಗ ರೈಲಿನ ಚಕ್ರಗಳ ಮಧ್ಯೆ ಉಂಟಾಗುವ ಸುಡುವಂತಹ ಬಿಸಿಯ ಮಧ್ಯೆಯೂ ಯಾವುದೇ ತೊಂದರೆಗೊಳಗಾಗದೇ 100 ಕಿ ಲೋ ಮೀಟರ್ ದೂರ ಪ್ರಯಾಣಿಸಿದ್ದು, ರೈಲ್ವೆ ಸಿಬ್ಬಂದಿಯನ್ನೇ ಅಚ್ಚರಿಗೊಳ್ಳುವಂತೆ ಮಾಡಿದೆ.
ರೈಲಿನ ಟ್ರ್ಯಾಕ್ ಮೇಲೆ ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಬಾಲಕ ಹತ್ತಿದ್ದಾನೆ. ಹತ್ತಿದ ನಂತರ ಬಾಲಕ ಆಟದಲ್ಲಿ ಮಗ್ನನಾಗಿದ್ದಾನೆ. ಈ ವೇಳೆ ರೈಲು ಪ್ರಯಾಣ ಆರಂಭಿಸಿದ್ದು, ಬಾಲಕನಿಗೆ ರೈಲು ಚಲಿಸಲು ಆರಂಭಿಸಿದೆ ಎಂಬುದು ತಿಳಿಯುವ ವೇಳೆ ವಿಳಂಬವಾಗಿದ್ದು, ರೈಲಿನಿಂದ ಕೆಳಗೆ ಧುಮುಕುವುದಕ್ಕೂ ಸಾಧ್ಯವಾಗಿಲ್ಲ. ಈ ಮಧ್ಯೆ ಆರ್‌ಪಿಎಫ್ ಸಿಬ್ಬಂದಿಯೊಬ್ಬರಿಗೆ ರೈಲಿನ ಚಕ್ರಗಳ ಮಧ್ಯೆ ಬಾಲಕ ಇರುವುದು ಗೊತ್ತಾಗಿದೆ. ಬಳಿಕ ಆತನನ್ನು ರೈಲ್ವೆ ಪೊಲೀಸ್ ಸಿಬ್ಬಂದಿ ಅಲ್ಲಿಂದ ಕರೆತಂದಿದ್ದು, ವೀಡಿಯೋ ವೈರಲ್ ಆಗಿದೆ. ರಕ್ಷಣೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲಿನ ಚಕ್ರಗಳ ಅಡಿಯಿಂದ ರೈಲ್ವೆ ಸಿಬ್ಬಂದಿ ಹೊಗೆ ಹಿಡಿದು ಕಪ್ಪು ಕಪ್ಪಾಗಿದ್ದ ಬಾಲಕನನ್ನು ಕರೆತರುತ್ತಿರುವುದು ಕಾಣಿಸುತ್ತಿದೆ. ಬಳಿಕ ಬಾಲಕನನ್ನು ಹರ್ದೋಯಿಯ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಸೇರಿಸಲಾಗಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ನೆಟ್ಟಿಗರು ಬಾಲಕನನ್ನು ಕುಟುಂಬದೊಂದಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ.
ಇತರರು ಆಕ್ರಮಿಸಿಕೊಂಡಿದ್ದ ಬುಕ್ಕಿಂಗ್ ಸೀಟನ್ನು ದೂರು ನೀಡಿದ 20 ನಿಮಿಷದಲ್ಲಿ ಮರಳಿ ನೀಡಿದ ಭಾರತೀಯ ರೈಲ್ವೆ
ಹಿರಿಯ ನಾಗರಿಕರ ಟಿಕೆಟ್ ವಿನಾಯ್ತಿ ರದ್ದು ಬಳಿಕ ರೈಲ್ವೆಗೆ ₹5800 ಕೋಟಿ ಹೆಚ್ಚು ಆದಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ