ಸಂಸದರು, ಶಾಸಕರ ವಿರುದ್ಧ ದಾಖಲಾಗಿದ್ದ 2 ಸಾವಿರ ಕ್ರಿಮಿನಲ್‌ ದಾವೆಗಳು 2023ರಲ್ಲಿ ಇತ್ಯರ್ಥ

By Kannadaprabha NewsFirst Published Apr 23, 2024, 10:16 AM IST
Highlights

ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿದ್ದ 2 ಸಾವಿರಕ್ಕೂ ಅಧಿಕ ಕ್ರಿಮಿನಲ್‌ ದಾವೆಗಳು 2023ರಲ್ಲಿ ಇತ್ಯರ್ಥವಾಗಿದೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ಇಂಥ ಪ್ರಕರಣಗಳ ಕುರಿತು ಸುಪ್ರೀಂಕೋರ್ಟ್‌ಗೆ ನೆರವು ನೀಡಲು ನೇಮಕಗೊಂಡಿರುವ ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದ್ದಾರೆ.

ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿದ್ದ 2 ಸಾವಿರಕ್ಕೂ ಅಧಿಕ ಕ್ರಿಮಿನಲ್‌ ದಾವೆಗಳು 2023ರಲ್ಲಿ ಇತ್ಯರ್ಥವಾಗಿದೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ಇಂಥ ಪ್ರಕರಣಗಳ ಕುರಿತು ಸುಪ್ರೀಂಕೋರ್ಟ್‌ಗೆ ನೆರವು ನೀಡಲು ನೇಮಕಗೊಂಡಿರುವ ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದ್ದಾರೆ.

ವಿವಿಧ ರಾಜ್ಯಗಳ ಹೈಕೋರ್ಟಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ 4697 ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ಈ ಪೈಕಿ ಕಳೆದ ವರ್ಷ 2018 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇನ್ನು 2023ರಲ್ಲಿ ಹೊಸದಾಗಿ ಜನಪ್ರತಿನಿಧಿಗಳ ವಿರುದ್ಧ 1746 ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ 2024ರ ಜ.1ರವರೆಗೆ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಮತ್ತೆ 4474ಕ್ಕೆ ತಲುಪಿದೆ ಎಂದು ಮಾಹಿತಿ ನೀಡಲಾಗಿದೆ.

ಕಳೆದ ವರ್ಷದ ಕರ್ನಾಟಕದಲ್ಲಿ ದಾಖಲಾಗಿದ್ದ 226 ಕೇಸುಗಳಲ್ಲಿ 150 ಕೇಸುಗಳನ್ನು ಇತ್ಯರ್ಥ ಮಾಡಿದೆ. ಉಳಿದಂತೆ ಮಹಾರಾಷ್ಟ್ರ ಹೈಕೋರ್ಟ್‌ 476 ಕೇಸುಗಳಲ್ಲಿ 232 ಕೇಸುಗಳನ್ನು, ಕೇರಳ ಹೈಕೋರ್ಟ್‌ 370 ಕೇಸುಗಳಲ್ಲಿ 132 ಕೇಸುಗಳನ್ನು ಹಾಗೂ ಬಿಹಾರ ಹೈಕೋರ್ಟ್‌ 525 ಕೇಸುಗಳಲ್ಲಿ 171 ಕೇಸುಗಳನ್ನು ಇತ್ಯರ್ಥ ಪಡಿಸಲಾಗಿದೆ.

ಇವಿಎಂ ಬಗ್ಗೆ ಅನುಮಾನ ಬೇಡ: ಸುಪ್ರೀಂಕೋರ್ಟ್

ನ್ಯಾಯಾಂಗಕ್ಕೆ ಮಸಿ ಬಳಿಯಲೆತ್ನ; 21 ನಿವೃತ್ತ ನ್ಯಾಯಾಧೀಶರಿಂದ ಸಿಜೆಐಗೆ ಪತ್ರ!
 

click me!