NH 150C Project: ಬಿಸಿಲುನಾಡು ರಾಯಚೂರು ಆಗಲಿದೆ ಹೈವೇಗಳ ಹಬ್: ದೆಹಲಿಯಲ್ಲಿ ಮಹತ್ವದ ಸಭೆ

Published : Jun 16, 2026, 09:13 PM IST
Raichur highway project

ಸಾರಾಂಶ

NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ ‌ಮಾಡಿದ್ರು.‌

ನವದೆಹಲಿ (ಜೂ.16): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಭೇಟಿ ‌ಮಾಡಿದ್ರು.‌ ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಕ ಹಾದು ಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಕುರಿತು ಸವಿಸ್ತಾರ ಚರ್ಚೆ ನಡೆಸಿದರು.

ಸಭೆಯಲ್ಲಿ ವಿಶೇಷವಾಗಿ ರಾಯಚೂರು–ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಾದ NH-150Cರ ಎರಡು ಪ್ಯಾಕೇಜುಗಳು, NH-748 ರ ಮೂರು ಪ್ಯಾಕೇಜುಗಳು ಹೊಸದಾಗಿ ಪ್ರಸ್ತಾಪಿಸಲಾದ NH-167 ಮಾರ್ಗಸೂಚಿ ಹಾಗೂ NH-150A ರಸ್ತೆ ಅಗಲೀಕರಣ ಯೋಜನೆಗಳ ಪ್ರಗತಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ‌ನಡೆಸಲಾಯ್ತು.

ಇನ್ನೂ ಇದೇ ವೇಳೆ ಹೈವೇ ಜೊತೆಗೆ ರಸ್ತೆ ಅಗಲೀಕರಣ, ಅಗತ್ಯವಿರುವ ಸ್ಥಳಗಳಲ್ಲಿ ಬೈಪಾಸ್‌ಗಳ ನಿರ್ಮಾಣ, ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಅಪಘಾತ ತಡೆಗೆ ಸುರಕ್ಷತಾ ಕ್ರಮಗಳ ಅಳವಡಿಕೆ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ವಹಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು. ಅಲ್ಲದೆ ಭೂಸ್ವಾಧೀನ, ತಾಂತ್ರಿಕ ಅನುಮೋದನೆಗಳು ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಉಂಟಾಗುವ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸುವ ಅಗತ್ಯತೆಯನ್ನೂ ಒತ್ತಿ ಹೇಳಲಾಯಿತು.

ಹೈವೇಗಳು ಬಂದ್ರೆ ರಾಯಚೂರು ಆಗಲಿದೆ ರೋಡ್ ಗಳ ಹಬ್!

ಕಲ್ಯಾಣ ಕರ್ನಾಟಕ ಭಾಗದ ಜನರ ಬಹುಕಾಲದ ಬೇಡಿಕೆಯಾದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಈ ಯೋಜನೆಗಳ ಮೂಲಕ ಸಾಕಾರಗೊಳ್ಳಲಿದ್ದು, ಕೃಷಿ, ಕೈಗಾರಿಕೆ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು. ಉತ್ತಮ ಗುಣಮಟ್ಟದ ರಸ್ತೆ ಜಾಲದಿಂದ ಹೂಡಿಕೆ ಅವಕಾಶಗಳು ಹೆಚ್ಚುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಅವರು ಮನವರಿಕೆ ಮಾಡಿದರು.

ಸಭೆಯಲ್ಲಿ NHAI ಅಧ್ಯಕ್ಷರಾದ ಸಂತೋಷ್ ಯಾದವ್ ಅವರು ಪ್ರಾಧಿಕಾರದ ಸಂಪೂರ್ಣ ಸಹಕಾರ ಜೊತೆಗೆ ಭರವಸೆ ನೀಡಿದ್ದು, ಸಾರ್ವಜನಿಕರಿಗೆ ಶೀಘ್ರದಲ್ಲಿ ಉತ್ತಮ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಬದ್ಧತೆ ವ್ಯಕ್ತಪಡಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟ ಮತ್ತು ಸಮಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪೂರ್ಣಗೊಂಡ ಬಳಿಕ ರಾಯಚೂರು–ಯಾದಗಿರಿ ಸೇರಿದಂತೆ ಸಮಗ್ರ ಕಲ್ಯಾಣ ಕರ್ನಾಟಕ ಪ್ರದೇಶದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಸ್ತೆ ಸುರಕ್ಷತೆ ಹೆಚ್ಚುವುದರೊಂದಿಗೆ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಸಂಸದ ಜಿ. ಕುಮಾರ್ ‌ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ
Viral Video: ರೈಲಿನಲ್ಲಿ ಯುವತಿಯರ ವಿಡಿಯೋ ಮಾಡಿ ಅಶ್ಲೀಲ ಹಾಡು ಸೇರಿಸಿ ವೈರಲ್ ಮಾಡಿದ ಕಿಡಿಗೇಡಿ; ಮುಂದೇನಾಯ್ತು ನೋಡಿ