ಬಿಹಾರ ಚುನಾವಣೆ ವೇಳೆ ರಾಹುಲ್ ಗಾಂಧಿ ಪಿಕ್‌ನಿಕ್; ಸೋಲಿಗೆ ಕಾಂಗ್ರೆಸ್ ಕಾರಣ ಎಂದ RJD!

By Suvarna NewsFirst Published Nov 15, 2020, 10:53 PM IST
Highlights

ಬಿಹಾರದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ NDA ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ನವೆಂಬರ್ 16ರ ಸಂಜೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇತ್ತ ಆರ್‌ಜೆಡಿ ಹಾಗೂ ಕಾಂಗ್ರೆಸ್ ಕಿತ್ತಾಟ ಆರಂಭಗೊಂಡಿದೆ.

ಪಾಟ್ನಾ(ನ.15): ಬಿಹಾರದ ಮುಖ್ಯಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ಎನ್‌ಡಿಎ ಕೂಟದ ನಿತೀಶ್ ಕುಮಾರ್ ನ.16ಕ್ಕೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸುಶೀಲ್ ಮೋದಿ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಎನ್‌ಡಿಎ ಸರ್ಕಾರ ರಚನೆಗೆ ರೆಡಿಯಾಗುತ್ತಿದ್ದರೆ, ಇತ್ತ ಆರ್‌ಜೆಡಿ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸತತ 4ನೇ ಬಾರಿಗೆ ನಿತೀಶ್ ಕುಮಾರ್ ಬಿಹಾರದ CM,ನಾಳೆ ಪ್ರಮಾಣವಚನ!.

ಆರ್‌ಜೆಡಿ ನಾಯಕ ಶಿವಾನಂದ್ ತಿವಾರಿ ನೇರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಚುನಾವಣೆ ತಯಾರಿ ನಡೆಯುತ್ತಿರುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಗ ಗಾಂಧಿಯ ಶಿಮ್ಲಾದಲ್ಲಿರುವ ಮನೆಗೆ ಪಿಕ್‌ನಿಕ್ ತೆರಳಿದ್ದರು. ಈ ರೀತಿ ಮಾಡಿದರೆ ಪಕ್ಷ ಮುನ್ನಡೆಸಲು ಸಾಧ್ಯವೇ? ಬಿಹಾರದಲ್ಲಿ ಕಾಂಗ್ರೆಸ್ ಧೈರ್ಯದಿಂದ ಮುನ್ನಗ್ಗುವ ಬದಲು ಹಿಂಬಾಗಿಲ ಮೂಲಕ ಓಡಿ ಹೋಗಿದೆ. ಇದು ಬಿಜೆಪಿಗೆ ನೆರವಾಗಿದೆ ಎಂದು ಶಿವಾನಂದ್ ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

: RJD leader Shivanand Tiwari speaks on , says "...elections were in full swing & Rahul Gandhi was on picnic at Priyanka ji's place in Shimla. Is party run like that? Allegations can be levelled that manner in which Congress is being run, it's benefitting BJP." pic.twitter.com/ZZXmndMJFh

— ANI (@ANI)

40 ಸ್ಥಾನ ಗೆದ್ದ ನಿತೀಶ್ ಮುಖ್ಯಮಂತ್ರಿ ಹೇಗೆ ಸಾಧ್ಯ? ಹೊಸ ದಾಳ ಉರುಳಿಸಿದ RJD!

ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 43 ಸ್ಥಾನ ಗೆದ್ದಿದೆ. ಬಿಜೆಪಿ 74 ಸ್ಥಾನ ಗೆದ್ದಿದೆ. ಇನ್ನು NDA ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನ.15ರಂದು ನಡೆ NDA ಸಭೆಯಲ್ಲಿ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಎಂದು ಘೋಷಿಸಿದೆ. ಇತ್ತ ನಿತೀಶ್ ಕುಮಾರ್ ಸರ್ಕಾರ ರಚಿಸಲು ರಾಜ್ಯಪಾಲರ ಬಳಿ ಅನುಮತಿ ಪಡೆದುಕೊಂಡಿದ್ದಾರೆ.

click me!