
ನವದೆಹಲಿ(ಡಿ.24): ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ ವೇಳೆ ಜನರಿಗೆ ಸಹಾಯಹಸ್ತ ಚಾಚಿದ ಟಾಪ್-10 ಸಂಸದರಲ್ಲಿ ವಯನಾಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸ್ಥಾನ ಪಡೆದಿದ್ದಾರೆ. ದಿಲ್ಲಿ ಮೂಲದ ‘ಗವರ್ನ್ ಐ ಸಿಸ್ಟಂ’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ವ್ಯಕ್ತವಾಗಿದೆ.
ಅಕ್ಟೋಬರ್ 1ರಿಂದ 25ರವರೆಗೆ ಸಮೀಕ್ಷೆ ನಡೆಸಲಾಗಿತ್ತು. ಆಯಾ ಸಂಸದೀಯ ಕ್ಷೇತ್ರಗಳಿಗೇ ತೆರಳಿ ಜನರಿಂದ ಸಂಗ್ರಹಿಸಲಾದ ಅಭಿಪ್ರಾಯದಲ್ಲಿ 10 ಸಂಸದರು ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ.
ಅವರೆಂದರೆ: ಅನಿಲ ಫಿರೋಜಿಯಾ (ಬಿಜೆಪಿ), ಎ. ಪ್ರಭಾಕರ ರೆಡ್ಡಿ (ವೈಎಸ್ಸಾರ್ ಕಾಂಗ್ರೆಸ್), ರಾಹುಲ್ ಗಾಂಧಿ (ಕಾಂಗ್ರೆಸ್), ಮಹುವಾ ಮೊಯಿತ್ರಾ (ತೃಣಮೂಲ ಕಾಂಗ್ರೆಸ್), ತೇಜಸ್ವಿ ಸೂರ್ಯ (ಬಿಜೆಪಿ), ಹೇಮಂತ ಗೋಡ್ಸೆ (ಶಿವಸೇನೆ), ಸುಖಬೀರ್ ಸಿಂಗ್ ಬಾದಲ್ (ಶಿರೋಮಣಿ ಅಕಾಲಿದಳ), ಶಂಕರ ಲಾಲ್ವಾನಿ (ಬಿಜೆಪಿ), ಡಾ
ಟಿ. ಸುಮತಿ, ತಮಿಳಾಚಿ ತಂಗಪ್ಪನ್ (ಡಿಎಂಕೆ) ಹಾಗೂ ನಿತಿನ್ ಗಡ್ಕರಿ (ಬಿಜೆಪಿ). ಸಮೀಕ್ಷೆಯಲ್ಲಿ 512 ಕ್ಷೇತ್ರಗಳ 33.82 ಲಕ್ಷ ಮತದಾರರ ಅಭಿಪ್ರಾಯ ಸಂಗ್ರಹಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ