ಆಕ್ಸ್‌ಫರ್ಡ್‌ ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಮುಂದಿನ ವಾರ ಅನುಮತಿ?

Published : Dec 24, 2020, 07:31 AM IST
ಆಕ್ಸ್‌ಫರ್ಡ್‌ ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಮುಂದಿನ ವಾರ ಅನುಮತಿ?

ಸಾರಾಂಶ

ಆಕ್ಸ್‌ಫರ್ಡ್‌ ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಮುಂದಿನ ವಾರ ಅನುಮತಿ?| ಹಾಗೆ ಆದಲ್ಲಿ ಕೋವಿಶೀಲ್ಡ್‌ಗೆ ಒಪ್ಪಿಗೆ ನೀಡಿದ ಮೊದಲ ದೇಶ ಭಾರತ| ತಜ್ಞರ ಸಮಿತಿ ಕೇಳಿದ್ದ ಹೆಚ್ಚುವರಿ ಮಾಹಿತಿ ಒದಗಿಸಿದ ಸೀರಂ ಸಂಸ್ಥೆ

ನವದೆಹಲಿ(ಡಿ.24): ಬ್ರಿಟನ್ನಿನಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದ ಪತ್ತೆಯಾಗಿ ಭಾರತದಲ್ಲೂ ತೀವ್ರ ಆತಂಕ ಮೂಡಿರುವ ಬೆನ್ನಲ್ಲೇ ಮುಂದಿನ ವಾರವೇ ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಗೆ ಭಾರತ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಈ ಲಸಿಕೆಯ ಟ್ರಯಲ್‌ಗೆ ಸಂಬಂಧಿಸಿದಂತೆ ಲಸಿಕೆ ಪರಿಶೀಲನೆಯ ತಜ್ಞರ ಸಮಿತಿಯು ಕೇಳಿದ್ದ ಹೆಚ್ಚುವರಿ ದತ್ತಾಂಶಗಳನ್ನು ಪುಣೆಯ ಸೀರಂ ಸಂಸ್ಥೆ ಸೋಮವಾರವೇ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಸಲ್ಲಿಸಿದೆ. ಬ್ರಿಟನ್ನಿನಲ್ಲಿ ತಯಾರಾದ ಈ ಲಸಿಕೆಯ ಸ್ಥಳೀಯ ಪ್ರಯೋಗವನ್ನು ಸೀರಂ ಸಂಸ್ಥೆ ನಡೆಸಿದೆ. ಅಲ್ಲದೆ ಕೋವಿಶೀಲ್ಡ್‌ ಲಸಿಕೆಯನ್ನು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿದೆ. ಈ ಸಂಸ್ಥೆ ಸಲ್ಲಿಸಿದ ಹೆಚ್ಚುವರಿ ದತ್ತಾಂಶಗಳನ್ನು ತಜ್ಞರ ಸಮಿತಿಯು ಪರಾಮರ್ಶಿಸುತ್ತಿದ್ದು, ಅವು ತೃಪ್ತಿ ತಂದರೆ ಮುಂದಿನ ವಾರ ಲಸಿಕೆಯನ್ನು ಭಾರತದಲ್ಲಿ ತುರ್ತು ವಿತರಣೆ ಮಾಡಲು ಡಿಸಿಜಿಐ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಕ್ಸ್‌ಫರ್ಡ್‌ ಲಸಿಕೆಗೆ ಭಾರತ ಒಪ್ಪಿಗೆ ನೀಡಿದರೆ ಈ ಲಸಿಕೆಗೆ ಒಪ್ಪಿಗೆ ನೀಡಿದ ಜಗತ್ತಿನ ಮೊದಲ ದೇಶ ಭಾರತವಾಗಲಿದೆ. ಜೊತೆಗೆ ಭಾರತದಲ್ಲಿ ಲೈಸನ್ಸ್‌ ಪಡೆದ ಮೊದಲ ಲಸಿಕೆ ಇದಾಗಲಿದೆ. ಬ್ರಿಟನ್ನಿನಲ್ಲೂ ಈ ಲಸಿಕೆಯ ತುರ್ತು ವಿತರಣೆಗೆ ಅನುಮತಿ ಕೋರಿ ಆಸ್ಟ್ರಾಜೆನೆಕಾ ಸಂಸ್ಥೆ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದನ್ನು ಅಲ್ಲಿನ ಔಷಧ ನಿಯಂತ್ರಣ ಸಂಸ್ಥೆ ಪರಿಶೀಲಿಸುತ್ತಿದೆ. ಭಾರತ ಮತ್ತು ಬ್ರಿಟನ್ನಿನಲ್ಲಿ ಔಷಧ ನಿಯಂತ್ರಣ ಸಂಂಸ್ಥೆಗಳು ಪರಿಶೀಲನೆ ನಡೆಸುತ್ತಿರುವ ಆಕ್ಸ್‌ಫರ್ಡ್‌ ಲಸಿಕೆಯ ಟ್ರಯಲ್‌ ಡೇಟಾಗಳು ಒಂದೇ ಆಗಿವೆ. ಭಾರತದಲ್ಲಿ ಸೀರಂ ಸಂಸ್ಥೆ ನಡೆಸಿದ ಸ್ಥಳೀಯ ಪ್ರಯೋಗದ ಡೇಟಾವನ್ನು ಕೂಡ ಹೆಚ್ಚುವರಿಯಾಗಿ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಧುರಂಧರ್ ಸಿನಿಮಾ ನೋಡಿ ಪಾಕಿಸ್ತಾನಕ್ಕೆ ಸಾಲ ನಿರಾಕರಿಸಿತ್ತಾ ವಿಶ್ವಬ್ಯಾಂಕ್: ಏನಿದು ಅಸಲಿ ಕತೆ?
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಪತ್ರ