ದಿಢೀರ್ ಅಂತ ಕುಸಿದ ವೇದಿಕೆ; ರಾಹುಲ್ ಗಾಂಧಿ ಬಚಾವ್, ವಿಡಿಯೋ ನೋಡಿ

Published : May 27, 2024, 06:00 PM IST
ದಿಢೀರ್ ಅಂತ ಕುಸಿದ ವೇದಿಕೆ; ರಾಹುಲ್ ಗಾಂಧಿ ಬಚಾವ್, ವಿಡಿಯೋ ನೋಡಿ

ಸಾರಾಂಶ

Rahul Gandhi ಸಾರ್ವಜನಿಕ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಲು ವೇದಿಕೆಯತ್ತ ಆಗಮಿಸಿದ್ದರು. ಜನರತ್ತ ಕೈ ಬೀಸುತ್ತಿರುವ ಸಂದರ್ಭದಲ್ಲಿ ವೇದಿಕೆ ಕುಸಿದಿದೆ. 

ಪಾಟ್ನಾ: ಲೋಕಸಭಾ ಚುನಾವಣೆ (Lok sabha Elections 2024) ಕೊನೆಯ ಹಂತಕ್ಕೆ ತಲುಪಿದೆ. ಏಳನೇ ಹಂತದ ಮತದಾನ (7th Phase Election) ಜೂನ್ 1ರಂದು ನಡೆಯಲಿದೆ. ಇಂದು ಬಿಹಾರದಲ್ಲಿ ಚುನಾವಣೆ (Bihar Election Campaign) ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಸೇರಿದಂತೆ ಐಎನ್‌ಡಿಐಎ ಒಕ್ಕೂಟದ (INDIA Bloc) ಸದಸ್ಯರಿದ್ದ ವೇದಿಕೆ ದಿಢೀರ್ ಅಂತ ಕುಸಿದಿದೆ. ಇದೀಗ ಈ ಘಟನೆಯ ವಿಡಿಯೋ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ಸಾರ್ವಜನಿಕ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಲು ವೇದಿಕೆಯತ್ತ ಆಗಮಿಸಿದ್ದರು. ಜನರತ್ತ ಕೈ ಬೀಸುತ್ತಿರುವ ಸಂದರ್ಭದಲ್ಲಿ ವೇದಿಕೆ ಕುಸಿದಿದೆ. 

ವೇದಿಕೆ ಮೇಲಿದ್ದ ನಾಯಕರೆಲ್ಲರೂ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ನಂತರ ಪರಸ್ಪರ ಎಲ್ಲರೂ ಪಕ್ಕದಲ್ಲಿದ್ದವರ ಕೈ ಹಿಡಿದುಕೊಂಡು ನಿಂತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವೇದಿಕೆಯಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಪುತ್ರಿ ಮಿಸಾ ಭಾರತಿ ಇರೋದನ್ನು ಗಮನಿಸಬಹುದು. ವೇದಿಕೆ ಕುಸಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಧಾವಿಸಿದ್ದಾರೆ. ಆ ಬಳಿಕ ಎಲ್ಲರೂ ನಗುತ್ತಾ ಕೆಳಗೆ ಬಂದಿದ್ದಾರೆ.

ಲಾಲು ಪುತ್ರಿ ಪರ ರಾಹುಲ್ ಗಾಂಧಿ ಪಚ್ರಾರ

ಬಿಹಾರದ ಪಾಟ್ನಾ ಹೊರವಲಯದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಪಾಟ್ನಾ ಲೋಕಸಭಾ ಕ್ಷೇತ್ರದಿಂದ ಮಿಸಾ ಭಾರತಿ ಸ್ಪರ್ಧಿಸಿದ್ದು, ಅವರ ಪರ ಪ್ರಚಾರಕ್ಕಾಗಿ ರಾಹುಲ್ ಗಾಂಧಿಮ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. 

ಭಗವಾನ ರಾಮನನ್ನ ಅವಮಾನಿಸಿದ್ರಾ ಸತೀಶ್ ಆಚಾರ್ಯ? ಕಾರ್ಟೂನಿಸ್ಟ್‌ ಬಂಧನಕ್ಕೆ ಆಗ್ರಹ!

ಅಗ್ನಿವೀರ್ ಯೋಜನೆ ಕಸದ ಬುಟ್ಟಿಗೆ

ಇಂದು ಬೆಳಗ್ಗೆ ಭಕ್ತಿಯಾರ್ಪುರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಿಎಂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲ್ಲ. ದೇಶದ ತುಂಬೆಲ್ಲಾ ಐಎನ್‌ಡಿಐಎ ಬಣದ ಪರ ಅಲೆ ಇದೆ. ನಮ್ಮ ಒಕ್ಕೂಟ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಲಾಗುತ್ತದೆ. ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8,500 ರೂಪಾಯಿ ಜಮೆ ಮಾಡಲಾಗುವುದು ಎಂದು ಹೇಳಿದರು.

ಕೆಲಸ ಕೇಳಿ ಬಂದ ಯುವತಿ ಜೊತೆ ಆಪ್ ಸಚಿವನ ಅಶ್ಲೀಲ ವಿಡಿಯೋ ಲೀಕ್, ಅಮಾನತಿಗೆ ಬಿಜೆಪಿ ಆಗ್ರಹ!

ಪ್ರಧಾನಿ ಮೋದಿಯವರು ಭಾರತದ ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅಗ್ನಿಫಥ್ ಯೋಜನೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 2022ರಲ್ಲಿ ಪ್ರಧಾನಿ ಮೋದಿ ಸರ್ಕಾರ ಅಗ್ನಿವೀರ್ ಯೋಜನೆಯನ್ನು ಜಾರಿಗೆ ತಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್