ಲಖೀಂಪುರ: ಮೃತ ರೈತನ ಕುಟುಂಬ​ದ​ವರ ಬಿಗಿ​ದಪ್ಪಿ ಸಂತೈಸಿದ ರಾಹುಲ್, ಪ್ರಿಯಾಂಕಾ!

Published : Oct 07, 2021, 09:20 AM IST
ಲಖೀಂಪುರ: ಮೃತ ರೈತನ ಕುಟುಂಬ​ದ​ವರ ಬಿಗಿ​ದಪ್ಪಿ ಸಂತೈಸಿದ ರಾಹುಲ್, ಪ್ರಿಯಾಂಕಾ!

ಸಾರಾಂಶ

* ರೈತ ಸಂತ್ರ​ಸ್ತ​ರಿಗೆ ಪ್ರಿಯಾಂಕಾ, ರಾಹುಲ್‌ ಸಂತೈ​ಕೆ * ಲಖೀಂಪು​ರದ ಪಾಲಿಯಾ ಗ್ರಾಮದ ಮೃತ ರೈತನ ಮನೆಗೆ ಭೇಟಿ * ರೈತನ ಕುಟುಂಬ​ದ​ವರ ಬಿಗಿ​ದಪ್ಪಿ ಸಂತೈ​ಕೆ

ಲಖೀಂಪುರ ಖೇರಿ(ಅ.07): ಉತ್ತರ ಪ್ರದೇ​ಶದ ಲಖೀಂಪುರ ಖೇರಿ​ಯಲ್ಲಿ(Lakhimpur Kheri) ಇತ್ತೀ​ಚೆಗೆ ರೈತರ ಮೇಲೆ ನಡೆದ ಹಿಂಸಾ​ಚಾರ(Violence) ಪ್ರಕ​ರ​ಣದ ಸಂತ್ರಸ್ತ ಕುಟುಂಬ​ಗ​ಳನ್ನು ಬುಧ​ವಾರ ರಾತ್ರಿ ಕಾಂಗ್ರೆಸ್‌ ನಾಯ​ಕ​ರಾದ ರಾಹುಲ್‌ ಗಾಂಧಿ(Rahul gandhi) ಹಾಗೂ ಪ್ರಿಯಾಂಕಾ ಗಾಂಧಿ((Priyanka Gandhi) ಭೇಟಿ​ಯಾಗಿ ಸಂತೈ​ಸಿ​ದರು.

ಪಾಲಿಯಾ ಗ್ರಾಮದ ಲವ್‌​ಪ್ರೀತ್‌ ಸಿಂಗ್‌ ಎಂಬ ಮೃತ ರೈತನ ಮನೆಗೆ ಆಗ​ಮಿ​ಸಿದ ಉಭಯ ನಾಯ​ಕರು ಸಂತಾಪ ಸೂಚಿ​ಸಿ​ದರು ಹಾಗೂ ಉಭಯ ನಾಯ​ಕರು ಕುಟುಂಬ​ಸ್ಥ​ರನ್ನು ಬಿಗಿ​ದಪ್ಪಿ ಸಾಂತ್ವನ ಹೇಳಿ​ದ​ರು ಹಾಗೂ ಕುಟುಂಬಕ್ಕೆ ನ್ಯಾಯ ದೊರ​ಕಿ​ಸಿ​ಕೊ​ಡುವ ಭರ​ವಸೆ ನೀಡಿ​ದ​ರು.

ಈ ವೇಳೆ ಛತ್ತೀ​ಸ್‌​ಗಢ ಮುಖ್ಯ​ಮಂತ್ರಿ ಭೂಪೇಶ್‌ ಬಾಘೇಲ್‌, ಪಂಜಾಬ್‌ ಮುಖ್ಯ​ಮಂತ್ರಿ ಚರ​ಣ್‌​ಜಿತ್‌ ಸಿಂಗ್‌ ಚನ್ನಿ, ಕಾಂಗ್ರೆಸ್‌ ನೇತಾರ ದೀಪೇಂದರ್‌ ಹೂಡಾ ಹಾಜ​ರಿ​ದ್ದ​ರು.

ಭೇಟಿಗೂ ಮುನ್ನ ಹೈಡ್ರಾಮಾ:

ಬುಧವಾರ ಬೆಳ​ಗ್ಗೆಯೇ ರಾಹುಲ್‌ ಗಾಂಧಿ ಅವ​ರು ಪಂಜಾಬ್‌ ಮುಖ್ಯ​ಮಂತ್ರಿ ಚರ​ಣ್‌​ಜಿತ್‌ ಸಿಂಗ್‌ ಚನ್ನಿ ಹಾಗೂ ಉತ್ತ​ರಾ​ಖಂಡ ಮುಖ್ಯ​ಮಂತ್ರಿ ಭೂಪೇಶ್‌ ಬಾಘೇಲ್‌ ಅವರ ಜತೆ ಲಖ​ನೌಗೆ ಆಗ​ಮಿ​ಸಿ​ದರು. ಮೊದಲು ಇವರ ಭೇಟಿ​ಗೆ ಉತ್ತರ ಪ್ರದೇಶ ಸರ್ಕಾರ ಅನು​ಮತಿ ನಿರಾ​ಕ​ರಿ​ಸಿ​ತ್ತಾ​ದರೂ ನಂತರ ಒತ್ತ​ಡಕ್ಕೆ ಮಣಿದು ಅನು​ಮತಿ ನೀಡಿತು. ಆದರೆ ಲಖನೌ ಏರ್‌​ಪೋ​ರ್ಟ್‌​ನಲ್ಲಿ ಸರ್ಕಾರ ವಿಧಿ​ಸಿದ ಷರತ್ತು ವಿವಾ​ದಕ್ಕೆ ಕಾರ​ಣ​ವಾ​ಯಿ​ತು.

ವಿಮಾ​ನ ನಿಲ್ದಾ​ಣ​ದ​ಲ್ಲಿದ್ದ ಪೊಲೀ​ಸರು ರಾಹುಲ್‌ ಅವ​ರಿಗೆ ‘ಪೊ​ಲೀಸ್‌ ವಾಹ​ನ​ದಲ್ಲಿ ಲಖೀಂಪು​ರಕ್ಕೆ ಭೇಟಿ ಕೊಡ​ಬೇಕು. ಖಾಸಗಿ ವಾಹನ ಬಳ​ಸ​ಬೇ​ಡಿ’ ಎಂದ​ರು. ಇದರಿಂದ ಕೋಪಗೊಂಡ ರಾಹು​ಲ್‌, ‘ನನ್ನ ಪ್ರಯಾಣವನ್ನು ನಿರ್ಧರಿಸಲು ನೀವು ಯಾರು? ನಾನು ನನ್ನ ಕಾರಿನಲ್ಲಿಯೇ ಹೋಗಲು ಬಯಸುತ್ತೇನೆ’ ಎಂದು ಹೇಳಿ ಧರಣಿ ಕುಳಿ​ತ​ರು. ‘ಸ್ವಂತ ಕಾರಿನಲ್ಲಿ ಹೋಗಲು 20 ದಿನ​ವಾ​ದರೂ ಸರಿ, ಎಷ್ಟುದಿನವಾದರೂ ಸರಿ.. ವಿಮಾನ ನಿಲ್ದಾಣದಲ್ಲಿಯೇ ಕಾಯುವೆ’ ಎಂದು ಸವಾಲು ಹಾಕಿ​ದರು. ಕೊನೆಗೆ ಸ್ವಂತ ವಾಹ​ನ​ದಲ್ಲಿ ಲಖೀಂಪು​ರಕ್ಕೆ ಭೇಟಿ ನೀಡಲು ರಾಹು​ಲ್‌ಗೆ ಪೊಲೀ​ಸರು ಅನು​ಮ​ತಿ​ಸಿ​ದ​ರು.

ಬಂಧ​ಮುಕ್ತ ಪ್ರಿಯಾಂಕಾ ಜತೆಗೆ ಲಖೀಂಪು​ರ​ಕ್ಕೆ:

ಈ ನಡುವೆ, ಸೀತಾ​ಪು​ರ​ದಲ್ಲಿ ಬಂಧ​ನ​ದ​ಲ್ಲಿದ್ದ ರಾಹುಲ್‌ ಗಾಂಧಿ ಸೋದರಿ ಪ್ರಿಯಾಂಕಾ ಅವ​ರನ್ನು ಪೊಲೀ​ಸರು ಬಂಧ​ಮು​ಕ್ತ​ಗೊ​ಳಿ​ಸಿ​ದರು. ಮಾರ್ಗ​ಮಧ್ಯೆ ರಾಹುಲ್‌ ಅವರು ಪ್ರಿಯಾಂಕಾ ಅವ​ರನ್ನೂ ತಮ್ಮ ಜತೆಗೆ ಲಖೀಂಪು​ರಕ್ಕೆ ಕರೆ​ದೊ​ಯ್ದ​ರು. ​ಬ​ಳಿಕ ಪ್ರಿಯಾಂಕಾ ಹಾಗೂ ರಾಹುಲ್‌ ಅವರು ರಾತ್ರಿ ವೇಳೆ ಕೆಲವು ಸಂತ್ರಸ್ತ ಕುಟುಂಬ​ಗ​ಳನ್ನು ಭೇಟಿ ಮಾಡಿ​ದ​ರು. ಈ ವೇಳೆ ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಹಾಗೂ ದೀಪೇಂದರ್‌ ಹೂಡಾ ಕೂಡ ಇದ್ದರು. ಇತ್ತೀ​ಚೆಗೆ ನಡೆದ ಲಖೀಂಪುರ ಹಿಂಸೆ​ಯಲ್ಲಿ ಒಬ್ಬ ಪತ್ರ​ಕರ್ತ, 4 ರೈತರು ಸೇರಿ 8 ಮಂದಿ ಸಾವ​ನ್ನ​ಪ್ಪಿ​ದ್ದ​ರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!