ಪಿಎಫ್‌ಐ ವಿರುದ್ಧ ಎನ್‌ಐಎ ದಾಳಿ, ರಾಹುಲ್‌ ಗಾಂಧಿ ಬೆಂಬಲ!

Published : Sep 22, 2022, 02:55 PM ISTUpdated : Sep 22, 2022, 04:50 PM IST
ಪಿಎಫ್‌ಐ ವಿರುದ್ಧ ಎನ್‌ಐಎ ದಾಳಿ, ರಾಹುಲ್‌ ಗಾಂಧಿ ಬೆಂಬಲ!

ಸಾರಾಂಶ

ದೇಶಾದ್ಯಂತ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಕಚೇರಿಗಳು ಹಾಗೂ ಅದರ ಅಧಿಕಾರಿಗಳ ಮೇಲೆ ಎನ್‌ಐಎ ಹಾಗೂ ಇಡಿ ನಡೆಸಿರುವ ಜಂಟಿ ದಾಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದ ರಾಜಕೀಯವನ್ನು ನಿಯಂತ್ರಿಸಲು ಈ ದಾಳಿಗಳು ಅಗತ್ಯವಿದೆ ಎಂದಿದ್ದಾರೆ.  

ಎರ್ನಾಕುಲಂ (ಸೆ. 22): ಕೇರಳ ಸೇರಿದಂತೆ ದೇಶದ 13 ರಾಜ್ಯಗಳಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ಎನ್‌ಐಎ, ಪಿಎಫ್‌ಐ ಕಚೇರಿ ಹಾಗೂ ಈ ಸಂಘಟನೆಗೆ ಸಂಬಂಧಿಸಿದ ಸದಸ್ಯರ ಮನೆಯ ಮೇಲೆ ದಾಳಿ ನಡೆಸಿದೆ. ಈ ಕುರಿತಾಗಿ ಗುರುವಾರ್ ಎರ್ನಾಕುಲಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಲ್ಲ ರೀತಿಯ ಕೋಮುವಾದವು ಎಲ್ಲಿಂದ ಬಂದರೂ ಅದನ್ನು ಎದುರಿಸಬೇಕು. ಅದರ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಕೋಮುವಾದ ಮತ್ತು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ನಿಯಂತ್ರಿಸಲು ಪಿಎಫ್‌ಐ ಮೇಲೆ ದೇಶವ್ಯಾಪಿ ನಡೆದಿರುವ ದಾಳಿಗಳು ಅಗತ್ಯ ಎಂದು ಹೇಳುವ ಮೂಲಕ ದಾಳಿಗೆ ಬೆಂಬಲ ನೀಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ದಾಳಿ ಈವರೆಗ ಮುಂದುವರಿದಿದ್ದು, ಪಿಎಫ್‌ಐಗೆ ಸಂಬಂಧಿಸಿದ್ದ ಸಾಕಷ್ಟು ಸ್ಥಳಗಳ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸಿದ ಆರೋಪದ ಮೇಳೆ ಈ ಕ್ರಮ ಕೈಗೊಳ್ಳಲಾಗಿದ್ದು, ಪಿಎಫ್‌ಐನ 106 ಸದಸ್ಯರನ್ನು ಬಂಧಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಂಧಿತರಲ್ಲಿ ಸಂಘಟನೆಯ ಮುಖ್ಯಸ್ಥ ಓಮಾ ಸಲಾಮ್ ಕೂಡ ಸೇರಿದ್ದಾರೆ.

ಪಿಎಫ್‌ಐ ಮೇಲಿನ ದಾಳಿ ಬಹುತೇಕವಾಗಿ ದಕ್ಷಿಣ ಭಾರತದ ಕಚೇರಿಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ.  ಇದು ಪಿಎಫ್‌ಐ ವಿರುದ್ಧ ಎನ್‌ಐಎಯ ಈವರೆಗಿನ ಅತೀ ದೊಡ್ಡ ದಾಳಿ ಎಂದು ಹೇಳಲಾಗಿದೆ. ಪಿಎಫ್‌ಐ ಮಾತ್ರವಲ್ಲದೆ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಅನ್ನೂ ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ಪಿಎಫ್ಐ ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸಿದ್ದು ಮಾತ್ರವಲ್ಲದೆ, ಭಯೋತ್ಪಾದಕ ಕೃತ್ಯಗಳಿಗೆ ತರಬೇತಿ ನೀಡಿದ ಆರೋಪವನ್ನೂ ಹೊತ್ತಿದೆ. ಆಂಧ್ರಪ್ರದೇಶದಿಂದ 5, ಅಸ್ಸಾಂನಿಂದ 9, ದೆಹಲಿಯಿಂದ 3, ಕರ್ನಾಟಕದಿಂದ 20, ಕೇರಳದಿಂದ 22, ಸಂಸದರಿಂದ 4 ಮತ್ತು ಮಹಾರಾಷ್ಟ್ರದಿಂದ 20 ಮಂದಿಯನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ಹಾಗೂ ಉಜ್ಜಯನಿಯಲ್ಲಿ 4 ಮಂದಿ ರಾಜ್ಯ ನಾಯಕರನ್ನು ಬಂಧನ ಮಾಡಲಾಗಿದೆ. ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಓಎಂಎಸ್‌ ಸಲಾಮ್ (OMS Salaam ) ಮತ್ತು ದೆಹಲಿ ಅಧ್ಯಕ್ಷ ಪರ್ವೇಜ್ ಅಹ್ಮದ್ (President Parvez Ahmed ) ಅವರನ್ನೂ ಕೂಡ ಬಂಧಿಸಲಾಗಿದೆ. ಕೆಲವರನ್ನು ದೆಹಲಿಯ ಎನ್‌ಐಎ ಕೇಂದ್ರ ಕಚೇರಿಗೆ ವಿಚಾರಣೆಗಾಗಿ ಕರೆತರಲಾಗಿದೆ.

ಪಿಎಫ್‌ಐ ಮೇಲಿನ ಆರೋಪಗಳು

ರಾಜ್ಯಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಧನಸಹಾಯ: NIA ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಹೈದರಾಬಾದ್‌ನಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ಹೆಚ್ಚಿಸಲು ಹೆಚ್ಚಿನ ಸಂಖ್ಯೆಯ ಭಯೋತ್ಪಾದಕ (terrorist activity) ಕೃತ್ಯಗಳಿಗೆ ಹಣ ಸಹಾಯವನ್ನು ಈ ಸಂಘಟನೆ ಮಾಡಿದೆ. ಇದರ ಅಧಿಕೃತ ಮಾಹಿತಿ ಸಿಕ್ಕ ಬಳಿಕ ತನಿಖಾ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ NIA, ED Raid: ನೂರಾರು ಪಿಎಫ್ಐ ಕಾರ್ಯಕರ್ತರ ಬಂಧನ

ತರಬೇತಿ ಶಿಬಿರಗಳನ್ನು ಸ್ಥಾಪಿಸಿದ ಆರೋಪ: ಮೂಲಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ಪಿಎಫ್‌ಐ  (PFI) ಹಲವು ರಾಜ್ಯಗಳಲ್ಲಿ ತರಬೇತಿ ಶಿಬಿರಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತಿದೆ ಎಂಬ ಮಾಹಿತಿ ಎನ್‌ಐಎಗೆ ಸಿಕ್ಕಿದೆ. ಇದರಲ್ಲಿ ಆಯುಧಗಳನ್ನು ನಿರ್ವಹಿಸುವ ತರಬೇತಿ ನೀಡುವುದರೊಂದಿಗೆ ಜನರ ಬ್ರೈನ್ ವಾಶ್ ಕೂಡ ಆಗುತ್ತಿತ್ತು.

Hijab Controversy ಪಿಎಫ್‌ಐನ ಬಹುದೊಡ್ಡ ಪಿತೂರಿ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ

ಫುಲ್ವಾರಿ ಷರೀಫ್‌ನ ಲಿಂಕ್: ಜುಲೈನಲ್ಲಿ, ಪಾಟ್ನಾ ಬಳಿಯ ಫುಲ್ವಾರಿ ಷರೀಫ್‌ನಲ್ಲಿ ಪತ್ತೆಯಾದ ಭಯೋತ್ಪಾದಕ ಘಟಕದ ಬಗ್ಗೆಯೂ ದಾಳಿ ನಡೆಸಲಾಗಿದೆ. ಫುಲ್ವಾರಿ ಷರೀಫ್‌ನಲ್ಲಿರುವ ಪಿಎಫ್‌ಐ ಸದಸ್ಯರಿಂದ ಇಂಡಿಯಾ 2047 ಹೆಸರಿನ 7 ಪುಟಗಳ ದಾಖಲೆಯೂ ಪತ್ತೆಯಾಗಿದೆ. ಇದರಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಯೋಜನೆ ಇತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?