ಪ್ರಿಯಕರನ ಹಿಂದೆ ಸುತ್ತುತ್ತಿದ್ದ ಹೆಂಡತಿಯನ್ನ ರೆಡ್‌ಹ್ಯಾಂಡಾಗಿ ಹಿಡಿದ ಬಹುದ್ದೂರ್ ಗಂಡ

Published : Sep 22, 2022, 02:15 PM ISTUpdated : Sep 22, 2022, 02:19 PM IST
ಪ್ರಿಯಕರನ ಹಿಂದೆ ಸುತ್ತುತ್ತಿದ್ದ ಹೆಂಡತಿಯನ್ನ ರೆಡ್‌ಹ್ಯಾಂಡಾಗಿ ಹಿಡಿದ ಬಹುದ್ದೂರ್ ಗಂಡ

ಸಾರಾಂಶ

ಗಂಡ ಮಕ್ಕಳನ್ನು ಬಿಟ್ಟು ಲವರ್‌ ಜೊತೆ ಸುತ್ತುತ್ತಿದ್ದ ಪತ್ನಿಯೊರ್ವಳನ್ನು ಗಂಡನೋರ್ವ ರೆಡ್‌ಹ್ಯಾಂಡ್ (Redhand)ಆಗಿ ಸೆರೆ ಹಿಡಿದಿದ್ದು, ಗಂಡ ಹೆಂಡತಿಯನ್ನು ಹಿಂಬಾಲಿಸಿ ಹಿಡಿದ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ(Twitter) ವೈರಲ್ (Viral) ಆಗುತ್ತಿದೆ.

ನವದೆಹಲಿ: ಗಂಡ ಮಕ್ಕಳನ್ನು ಬಿಟ್ಟು ಲವರ್‌ ಜೊತೆ ಸುತ್ತುತ್ತಿದ್ದ ಪತ್ನಿಯೊರ್ವಳನ್ನು ಗಂಡನೋರ್ವ ರೆಡ್‌ಹ್ಯಾಂಡ್ (Redhand)ಆಗಿ ಸೆರೆ ಹಿಡಿದಿದ್ದು, ಗಂಡ ಹೆಂಡತಿಯನ್ನು ಹಿಂಬಾಲಿಸಿ ಹಿಡಿದ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ(Twitter) ವೈರಲ್ (Viral) ಆಗುತ್ತಿದೆ. ಉತ್ತರಪ್ರದೇಶದ (Uttara Pradesh) ಆಗ್ರಾದಲ್ಲಿ (Agra) ಈ ಘಟನೆ ನಡೆದಿದೆ. ಈ ಗಂಡ ಹೆಂಡತಿ ಮದುವೆಯಾಗಿ 10 ವರ್ಷಗಳೇ ಕಳೆದಿವೆ. ಇವರ ದಾಂಪತ್ಯದಲ್ಲಿ ಒಂದು ಮಗು ಕೂಡ ಜನಿಸಿದೆ. ಆದರೆ ಇತ್ತೀಚೆಗೆ ಹೆಂಡತಿಯ ವರ್ತನೆಯಲ್ಲಿ ಬಹಳ ಬದಲಾವಣೆ ಆಗಿದ್ದು, ಇದು ಪತಿಯ ಗಮನಕ್ಕೂ ಬಂದಿದೆ. ಅಲ್ಲದೇ ಇದೇ ಕಾರಣಕ್ಕೆ ಗಂಡ ಹೆಂಡತಿಯ ಮಧ್ಯೆ ವಾಗ್ವಾದಗಳಾಗುತ್ತಿದ್ದವು.

ಈ ಹಿನ್ನೆಲೆ ಪತ್ನಿಯ ವರ್ತನೆ ಹಿಂದಿನ ಕಾರಣ ಪತ್ತೆ ಮಾಡಲು ಹೆಂಡತಿ ಬೆನ್ನು ಬಿದ್ದ ಗಂಡನಿಗೆ ಶಾಕ್ ಕಾದಿತ್ತು. ಈ ಮಧ್ಯೆ ಪತ್ನಿ ಮನೆಯವರಿಗೂ ಕೂಡ ಯಾವುದೇ ಮಾಹಿತಿ ನೀಡದೇ ಸೆಪ್ಟೆಂಬರ್ 11ರಂದು ಮನೆ ಬಿಟ್ಟು ಹೋಗಿದ್ದಳು. ಇದರಿಂದ ಚಿಂತೆಗೀಡಾದ ಅಪ್ಪ ಹಾಗೂ ಮಗಳು ಅಮ್ಮನನ್ನು ಹುಡುಕಲು ಆರಂಭಿಸಿದ್ದಾರೆ. ಇದೇ ವೇಳೆ ಪತಿ ಹಾಗೂ ಮಗಳಿಗೆ ಪತ್ನಿ ವ್ಯಕ್ತಿಯೋರ್ವನ ಸ್ಕೂಟರ್ ಹಿಂದೆ ಕುಳಿತು ಸಾಗುತ್ತಿರುವುದು ಕಂಡು ಬಂದಿದೆ. ಪತ್ನಿ (Wife) ತನ್ನನ್ನು, ಮಗಳನ್ನು ಬಿಟ್ಟು ಬ್ಯುಸಿನೆಸ್ ಮ್ಯಾನ್ ಓರ್ವನ ಹಿಂದೆ ಸುತ್ತಾಡಲು ಆರಂಭಿಸಿರುವುದು ಆತನಿಗೆ ತಿಳಿದಿದೆ. 

ಕೂಡಲೇ ಆತ ಹಾಗೂ ಮಗಳು ಪತ್ನಿ ಸಾಗುತ್ತಿದ್ದ ಸ್ಕೂಟರ್‌ ಬೆನ್ನಟ್ಟಿ (Chassing) ಅಡ್ಡ ಹಾಕಿದ್ದಾನೆ. ಇದರಿಂದ ರಸ್ತೆ ಮಧ್ಯೆಯೇ ದೊಡ್ಡ ಡ್ರಾಮಾ ನಡೆದಿತ್ತು. ಈ ವೇಳೆ ಮಹಿಳೆ ಮುಖಕ್ಕೆ ದುಪ್ಪಟ್ಟವನ್ನು ಸುತ್ತಿಕೊಂಡು ಕಣ್ಣಿಗೆ ಕೂಲಿಂಗ್ ಗ್ಲಾಸ್‌ಗಳನ್ನು (Sunglass) ಹಾಕಿ ಯಾರಿಗೂ ಗುರುತು ಸಿಗದಂತೆ ಪ್ರಯಾಣಿಸುತ್ತಿದ್ದಳು. ಈ ಮಧ್ಯೆ ಆಕೆಗೆ ತನ್ನನ್ನು ತನ್ನ ಪತಿ ಹಾಗೂ ಮಗಳು ಬೆನ್ನಟ್ಟುತ್ತಿರುವುದು ಗೊತ್ತಾಗಿದೆ. ಕೂಡಲೇ ಆಕೆ ಗಾಡಿಯನ್ನು ಮತ್ತಷ್ಟು ವೇಗವಾಗಿ ಚಲಾಯಿಸಲು ಹೇಳಿ ತಪ್ಪಿಸಿಕೊಳ್ಳಲು ನೋಡಿದ್ದಾಳೆ. ಆದರೆ ಗಂಡ(Husband) ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಕ್ಯಾಚ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. 

ಕಟ್ಟಿಕೊಂಡವರ ಜೊತೆಯೇ ಕಾಂಪೀಟ್ ಮಾಡುತ್ತೀರಾ? ಒಂಟಿತನ ಫೀಲ್ ಆಗೋ ಹಾಗೆ ಮಾಡುತ್ತೆ ಹುಷಾರು!

ಈ ಇಡೀ ಡ್ರಾಮ ರಸ್ತೆಯಲ್ಲಿ ನಡೆದಿದ್ದು, ರಸ್ತೆಯಲ್ಲಿ ಹೋಗುವ ಬರುವವರೆಲ್ಲಾ ಇವರನ್ನೇ ನೋಡುತ್ತಾ ನಿಂತಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಕ್ಕೆ ಇಬ್ಬರಿಗೂ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಅಕ್ರಮ ಸಂಬಂಧಗಳು ಇತ್ತೀಚೆಗೆ ಸಾಮಾನ್ಯ ಎನಿಸುವಷ್ಟು ಹೆಚ್ಚಾಗಿ ಬಿಟ್ಟಿವೆ. 

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ