
ನವದೆಹಲಿ (ಮಾ.31): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದರಿಂದ ಅವರನ್ನು ಲೋಕಸಭೆ ಕಾರ್ಯಾಲಯ ಸಂಸದ ಸ್ಥಾನದಿಂದ ಅನರ್ಹ ಮಾಡಿತ್ತು. ಆದರೆ, ಈ ನಡುವೆ ಕೇರಳದ ಇನ್ನೊಬ್ಬ ರಾಹುಲ್ ಗಾಂಧಿಯನ್ನು ಕೇಂದ್ರ ಚುನಾವಣಾ ಆಯೋಗ ಅನರ್ಹ ಮಾಡಿದ್ದು ಸುದ್ದಿಯಾಗಲೇ ಇಲ್ಲ. ಹೌದು, ಕೇಂದ್ರ ಚುನಾವಣಾ ಆಯೋಗ, 'ರಾಹುಲ್ ಗಾಂಧಿ ಕೆ ಇ ಸನ್ ಆಫ್ ವಲ್ಸಮ್ಮ' ಹೆಸರಿನ ಅಭ್ಯರ್ಥಿಯನ್ನು ಭವಿಷ್ಯದ ಚುನಾವಣೆಗಳಿಂದ ನಿಷೇಧ ವಿಧಿಸಿದೆ. ಚುನಾವಣೆಗೆ ಮಾಡಿರುವ ಖರ್ಚು ವೆಚ್ಚಗಳನ್ನು ನೀಡಲು ವಿಫಲವಾದ ಹಿನ್ನಲೆಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡ ವ್ಯಕ್ತಿಗಳ ಚುನಾವಣಾ ಆಯೋಗದ ಪಟ್ಟಿಯಲ್ಲಿ ರಾಹುಲ್ ಗಾಂಧಿ ಸನ್ ಆಫ್ ವಲ್ಸಮ್ಮ ಅವರ ಹೆಸರೂ ಕೂಡ ಕಾಣಿಸಿಕೊಂಡಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸನ್ ಆಫ್ ವಲ್ಸಮ್ಮ, ಕೇರಳದ ವಯನಾಡ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇವರು 2196 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 7 ಲಕ್ಷ ಮತಗಳ ಅಂತರದ ದಾಖಲೆಯ ಗೆಲುವು ಕಂಡಿದ್ದರು.
ಬಲಿಷ್ಠ ಹಾಗೂ ಪ್ರಖ್ಯಾತ ನಾಯಕರ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುವುದು ಸಾಮಾನ್ಯವಾಗಿದೆ ಆದರೆ ಅವರೆಲ್ಲರೂ ಚುನಾವಣಾ ಆಯೋಗದ ನಿಯಮಗಳು ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ಅಡಿಯಲ್ಲಿ ಇತರ ಕಡ್ಡಾಯ ಅವಶ್ಯಕತೆಗಳ ಜೊತೆಗೆ ಚುನಾವಣಾ ಮಾಡಿರುವ ವೆಚ್ಚಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
Rahul Gandhi Disqualified: ಜರ್ಮನಿಗೆ ಥ್ಯಾಂಕ್ಸ್ ಹೇಳಿದ ದಿಗ್ವಿಜಯ್, ಕಪಿಲ್ ಸಿಬಲ್ ಕೆಂಡ!
ವರ್ಷ ಶಿಕ್ಷೆ ಕೂಡ ವಿಧಿಸಲಾಗಿತ್ತು. ಮಾರ್ಚ್ 29 ರಂದು, ಚುನಾವಣಾ ಸಮಿತಿಯು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 10 ಎ ಅಡಿಯಲ್ಲಿ ಅನರ್ಹಗೊಂಡ ವ್ಯಕ್ತಿಗಳ ನವೀಕರಿಸಿದ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ KE S/o ವಲ್ಸಮ್ಮ ಅವರನ್ನು 2021ರ ಸೆಪ್ಟೆಂಬರ್ 13 ರಿಂದ 2024ರ ಸೆಪ್ಟೆಂಬರ್ 13 ರವರೆಗೆ ಅನರ್ಹಗೊಳಿಸಲಾಗಿದೆ.
ರಾಹುಲ್ ವಿಚಾರ ಗಮನಿಸುತ್ತಿದ್ದೇವೆ ಎಂದ ಜರ್ಮನಿ: ಆಂತರಿಕ ವಿಷಯದಲ್ಲಿ ತಲೆ ಹಾಕಬೇಡಿ ಎಂದ ಕೇಂದ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ