ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಪ್ರಯಾಣಿಕರು ಓಡಾಟುವ ಸ್ಥಳದಲ್ಲಿ ವಾಂತಿ ಮಾಡಿಕೊಂಡಿದ್ದಾನಲ್ಲದೇ ಶೌಚಾಲಯದ ಸುತ್ತ ಮಲ ವಿಸರ್ಜನೆ ಮಾಡಿ ಉಳಿದ ಪ್ರಯಾಣಿಕರಿಗೆ ತೀವ್ರ ಅಸಹ್ಯ ಮತ್ತು ಮುಜುಗರ ಉಂಟು ಮಾಡಿದ್ದಾನೆ.
ನವದೆಹಲಿ: ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಪ್ರಯಾಣಿಕರು ಓಡಾಟುವ ಸ್ಥಳದಲ್ಲಿ ವಾಂತಿ ಮಾಡಿಕೊಂಡಿದ್ದಾನಲ್ಲದೇ ಶೌಚಾಲಯದ ಸುತ್ತ ಮಲ ವಿಸರ್ಜನೆ ಮಾಡಿ ಉಳಿದ ಪ್ರಯಾಣಿಕರಿಗೆ ತೀವ್ರ ಅಸಹ್ಯ ಮತ್ತು ಮುಜುಗರ ಉಂಟು ಮಾಡಿದ್ದಾನೆ. ಘಟನೆ ಕುರಿತು ಟ್ವೀಟರ್‌ನಲ್ಲಿ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದು ಇತ್ತೀಚೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರು ಪಾನಮತ್ತರಾಗಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಂತಹ ಅಸಹ್ಯಕರ ಘಟನೆಗಳನ್ನೇ ನೆನಪಿಸುವಂತಿದೆ.
ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಭಾಸ್ಕರ್ ದೇವ್ ಕೊನ್ವಾರ್ ಎಂಬುವವರು ಟ್ವೀಟರ್‌ನಲ್ಲಿ ಘಟನೆಯ ಫೋಟೊ ಹಂಚಿಕೊಂಡಿದ್ದು, ವಿಮಾನದ ಮಹಿಳಾ ಸಿಬ್ಬಂದಿಗಳು ಕೂಡಲೇ ಇದನ್ನು ಶುಚಿಗೊಳಿಸಿದರು. ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದರು. ಸೆಲ್ಯೂಟ್ ಗರ್ಲ್ಸ್ ಪವರ್ ಎಂದು ಬರೆದುಕೊಂಡಿದ್ದಾರೆ. ಸಿಬ್ಬಂದಿಗಳು ಕೈಕವಚ ಮತ್ತು ಮಾಸ್ಕ್ ಧರಿಸಿ ಪಾನಮತ್ತ ಮಾಡಿದ ವಾಂತಿಯನ್ನು ಶುಚಿಗೊಳಿಸಿ ಸ್ಪ್ರೇ ಮಾಡುತ್ತಿರುವ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದಾರೆ. ಮಾರ್ಚ್ 26 ರಂದು ಈ ಘಟನೆ ನಡೆದಿದೆ.
Indigo 6E 762 : Guwahati to Delhi.Intoxicated passenger vomited on the aisle and defecated all around the toilet.Leading lady Shewta cleaned up all the mess and all the girls managed the situation exceptionally well.Salute girl power🙏 pic.twitter.com/iNelQs48Tc
— Bhaskar Dev Konwar @BD (@bdkonwar)ದುಬೈನಿಂದ ಭಾರತಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದು ಗಲಾಟೆ, ತಾಯ್ನಾಡಿಗೆ ಕಾಲಿಟ್ಟ ತಕ್ಷಣ ಕೈಗೆ ಕೋಳ!
ದುಬೈ-ಮುಂಬೈ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕುಡಿದು ಗಲಾಟೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಪ್ರಯಾಣಿಕರನ್ನು ಮುಂಬೈನ ಸಹರ್ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಈ ಇಬ್ಬರು ಪ್ರಯಾಣಿಕರು ವಿಮಾನ ಹಾರಾಟದಲ್ಲಿದ್ದ ವೇಳೆ ಗಲಾಟೆ ಸೃಷ್ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರಿಗೂ ಕಿರಿಕಿರಿಯುಂಟು ಮಾಡಿದ್ದರು.
ಏರ್‌ಲೈನ್ ಸಿಬ್ಬಂದಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ ಸಹರ್ ಪೊಲೀಸರು, ಮುಂಬೈನ ಪಾಲ್ಘರ್ ಜಿಲ್ಲೆಯ ಜಾನ್ ಜಿ ಡಿಸೋಜಾ (49) ಮತ್ತು ಕೊಲ್ಲಾಪುರದ ಮಾನ್ಬೆಟ್‌ನ ದತ್ತಾತ್ರೇಯ ಬಾಪರ್ಡೇಕರ್ (47) ಎಂಬಿಬ್ಬರನ್ನು ಬಂಧಿಸಲಾಯ್ತು ನಂತರ ನ್ಯಾಯಾಲಯದಿಂದ ಜಾಮೀನು ನೀಡಲಾಯಿತು. ಇಬ್ಬರೂ ದುಬೈನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಅವರು ಭಾರತಕ್ಕೆ ಮರಳುತ್ತಿದ್ದರು ಎಂದು ತಿಳಿದುಬಂದಿದೆ. ಮಾತ್ರವಲ್ಲ ಇವರಿಬ್ಬರೂ ಕೂಡ ಹಾರಾಡುತ್ತಿದ್ದ ವಿಮಾನದಲ್ಲೇ ಸುಂಕ ರಹಿತ ಅಂಗಡಿಯಿಂದ ತಂದಿದ್ದ ಮದ್ಯ ಸೇವಿಸಿ ಸಂಭ್ರಮಿಸಲು ಆರಂಭಿಸಿದರು ಎಂದು ಸಹರ್ ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ವ್ಯಕ್ತಿಗಳ ಗದ್ದಲವನ್ನು ಸಹ ಪ್ರಯಾಣಿಕರು ವಿರೋಧಿಸಿದಾಗ ಪ್ರತಿರೋಧ ತೋರಿದರು. ಈ ವೇಳೆ ವಿಮಾನ ಸಿಬ್ಬಂದಿ ಮಧ್ಯಪ್ರವೇಶಿಸಿ ತಮ್ಮ ಬಾಟಲಿಗಳನ್ನು ತೆಗೆದುಕೊಂಡು ಹೋದಾಗ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ವಿಭಜಕಕ್ಕೆ ಗುದ್ದಿ ಇಬ್ಬರ ಸಾವು: ವಿಮಾನ ಏರಬೇಕಿದ್ದವರು ಚಿತೆ ಏರಿದರು
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ) ಮತ್ತು ವಿಮಾನ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ವರದಿಗಳ ಪ್ರಕಾರ ಈ ವರ್ಷ ಇದು ವಿಮಾನದಲ್ಲಿ ನಡೆದ ಏಳನೇ ಘಟನೆಯಾಗಿದ್ದು, ಪ್ರಯಾಣಿಕರ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾ- ನೇಪಾಳ ವಿಮಾನ ಮುಖಾಮುಖಿ, ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!