ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಪುತ್ರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕಿರುಕುಳ, ಜೀವಬೆದರಿಕೆ!

By Santosh Naik  |  First Published Mar 31, 2023, 12:16 PM IST

ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್‌ ಸಿಂಗ್‌ಗೆ ಪಂಜಾಬ್‌ ಪೊಲೀಸರ ಭೇಟೆ ಆರಂಭವಾಗಿದೆ. ಇದರ ನಡುವೆ ಅಮೆರಿಕದಲ್ಲಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಅವರ ಪುತ್ರಿ ಸೀರತ್‌ ಕೌರ್‌ ಮಾನ್‌ಗೆ ಖಲಿಸ್ತಾನಿಗಳು ಕಿರುಕುಳ ನೀಡಲು ಆರಂಭಿಸಿದ್ದಾರೆ.


ನವದೆಹಲಿ (ಮಾ.31): ಅಮೃತ್‌ಪಾಲ್‌ ಸಿಂಗ್‌ರನ್ನು ಹಡೆಮುರಿಕಟ್ಟಲು ಪಂಜಾಬ್‌ ಪೊಲೀಸ್‌ ಹಾಗೂ ಭಾರತ ಸರ್ಕಾರ ಪಣತೊಟ್ಟಿರುವಾಗ, ದೂರದ ಅಮೆರಿಕದಲ್ಲಿ ಖಲಿಸ್ಥಾನಿ ಬೆಂಬಲಿಗರು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಅವರ ಪುತ್ರಿ ಸೀರತ್‌ ಕೌರ್‌ಗೆ ಕಿರುಕುಳ ನೀಡಲು ಆರಂಭಿಸಿದ್ದಲ್ಲೆ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲವರು ಆಕೆಗೆ ಜೀವಬೆದರಿಕೆಯನ್ನೂ ಹಾಕಿದ್ದಾರೆ ಎಂದು ಹೇಳಲಾಗಿದೆ. ಸೀರತ್‌ ಕೌರ್‌ ಮಾನ್‌ಗೆ ಫೋನ್‌ನ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಈ ವಿಷಯವನ್ನು ಭಗವಂತ್ ಮಾನ್ ಅವರ ಮಾಜಿ ಪತ್ನಿ ಇಂದರ್‌ಪ್ರೀತ್ ಕೌರ್ ಫೇಸ್‌ಬುಕ್ ಮೂಲಕ ಬಹಿರಂಗಪಡಿಸಿದ್ದಾರೆ. ಖಲಿಸ್ತಾನ್ ಬೆಂಬಲಿಗರಿಂದ ಬೆದರಿಕೆ ಮತ್ತು ನಿಂದನೆಗೆ ಸಂಬಂಧಿಸಿದಂತೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಗುರುದ್ವಾರದಲ್ಲಿ ಈ ಸಂಬಂಧ ನಿರ್ಣಯವನ್ನೂ ಅಂಗೀಕರಿಸಲಾಗಿದೆ ಎಂದು ಭಗವಂತ್ ಮಾನ್ ಅವರ ಮಾಜಿ ಪತ್ನಿ ಬಹಿರಂಗಪಡಿಸಿದ್ದಾರೆ. ಭಗವಂತ್‌ ಮಾನ್‌ ಅವರ ಇಬ್ಬರೂ ಮಕ್ಕಳ ಮೇಲೆ ಘೇರಾವ್‌ ಹಾಕುವಂತೆ ಸ್ಥಳೀಯ ಗುರುದ್ವಾರದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎನ್ನುವ ವಿಚಾರವನ್ನೂ ತಿಳಿಸಿದ್ದಾರೆ.

ಮೊದಲ ಪತ್ನಿ ಇಂದರ್‌ಪ್ರೀತ್‌ ಕೌರ್‌ ಜೊತೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸೀರತ್‌ ಕೌರ್ ಮಾನ್‌ ಹಾಗೂ ದಿಲ್ಶಾನ್‌ ಮಾನ್‌. ಭಗವಂತ್‌ ಮಾನ್‌ರಿಂದ ವಿಚ್ಚೇದನ ಪಡೆದುಕೊಂಡ ಬಳಿಕ ಇಂದರ್‌ಪ್ರೀತ್‌ ತನ್ನಿಬ್ಬರು ಮಕ್ಕಳೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದಾರೆ. ಆದರೆ, ತಂದೆಯೊಂದಿಗೆ ಇಬ್ಬರೂ ಮಕ್ಕಳು ಒಳ್ಳೆಯ ಸಂಬಂಧ ಹೊಂದಿದ್ದು, ಕಳೆದ ವರ್ಷದ ಮಾರ್ಚ್‌ 16 ರಂದು ಭಗವಂತ್‌ ಮಾನ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೀರತ್‌ ಹಾಗೂ ದಿಲ್ಶಾನ್‌ ಭಾರತಕ್ಕೆ ಆಗಮಿಸಿದ್ದರು.

2015ರಿಂದ ಸೀರತ್‌ ಕೌರ್‌ ಮಾನ್‌ ತನ್ನ ತಾಯಿ ಹಾಗೂ ತಮ್ಮನೊಂದಿಗೆ ಅಮೆರಿಕದ ಸಿಯಾಟ್ಟಲ್‌ನಲ್ಲಿ ವಾಸವಾಗಿದ್ದಾರೆ. 2015ರಲ್ಲೇ ಇಂದರ್‌ಪ್ರೀತ್‌ ಕೌರ್‌ ಭಗವಂತ್‌ ಮಾನ್‌ರಿಂದ ವಿಚ್ಛೇದನ ಪಡೆದಿದ್ದರು. ಅದರ ಬೆನ್ನಲ್ಲಿಯೇ ಅಮೆರಿಕಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಿದ್ದರು. ಇದರ ನಡುವೆ ಭಗವಂತ್‌ ಮಾನ್‌ ಕಳೆದ ವರ್ಷ ಡಾ. ಗುರುಪ್ರೀತ್‌ ಕೌರ್‌ ಮಾನ್‌ರನ್ನು ವಿವಾಹವಾಗಿದ್ದಾರೆ.

ಪ್ರಚೋದಿಸುವ ಬದಲು ಯುವಕರಿಗೆ ಗ್ರಂಥ ಸಾಹಿಬ್‌ನ ವಿಚಾರ ತಿಳಿಸಿ: ಪಂಜಾಬ್ ಸಿಎಂ

ವರದಿಗಳ ಪ್ರಕಾರ, ಸೀರತ್ ಕೌರ್ ಮಾನ್ ಆಬರ್ನ್ ಮೌಂಟೇನ್‌ವ್ಯೂ ಹೈಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.  ಅವರು ಅಮೆರಿಕದ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆರೋಗ್ಯದಲ್ಲಿ ಬಿಎ ಪದವಿ ಪೂರೈಸಿದ್ದಾರೆ. ತಮ್ಮ ಬಾಲ್ಯವನ್ನು ಪಂಜಾಬ್ ಮತ್ತು ಚಂಡೀಗಢದಲ್ಲಿ ಕಳೆದಿದ್ದ ಇವರು, ತಂದೆ-ತಾಯಿ ವಿಚ್ಛೇದನ ಪಡೆದುಕೊಂಡ ಬಳಿಕ 2015ರಿಂದ ಅಮೆರಿಕದಲ್ಲಿ ನೆಲೆಸಲು ಆರಂಭಿಸಿದ್ದರು.

Tap to resize

Latest Videos

ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್ ನೇಪಾಳಕ್ಕೆ ಎಸ್ಕೇಪ್‌: ಹೈ ಅಲರ್ಟ್‌ ಘೋಷಣೆ

ಕಳೆದ ವರ್ಷ, ಅವರು ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ತಮ್ಮ ತಂದೆಯ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಮೆರಿಕದಿಂದ ಬಂದಿದ್ದರು. ಅಂಡಾಶಯದ ಕ್ಯಾನ್ಸರ್ ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಲಾಭೋದ್ದೇಶವಿಲ್ಲದ ರಿವ್ಕಿನ್ ಕೇಂದ್ರದೊಂದಿಗೆ ಜೊತೆಯಲ್ಲೂ ಸಂಬಂಧ ಹೊಂದಿದ್ದಾರೆ.
 

click me!