ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ತರಕಾರಿ ವ್ಯಾಪಾರಿ ಜತೆ ರಾಹುಲ್‌ ಗಾಂಧಿ ಡಿನ್ನರ್

Published : Aug 15, 2023, 08:49 AM ISTUpdated : Aug 15, 2023, 08:56 AM IST
ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ತರಕಾರಿ ವ್ಯಾಪಾರಿ ಜತೆ ರಾಹುಲ್‌ ಗಾಂಧಿ ಡಿನ್ನರ್

ಸಾರಾಂಶ

ಬೆಲೆ ಏರಿಕೆಯಿಂದ ಬದುಕು ಕಷ್ಟಕರವಾಗಿದೆ ಎಂದು ಅಳಲು ತೋಡಗೊಂಡಿದ್ದ ರಾಮೇಶ್ವರ ಎಂಬುವರಬನ್ನು ಭೇಟಿ ಮಾಡಿರುವ ರಾಹುಲ್‌ ಗಾಂಧಿ ಅವರೊಂದಿಗೆ ಊಟ ಮಾಡಿ ಸಮಯ ಕಳೆದಿದ್ದಾರೆ.

ನವದೆಹಲಿ (ಆ.15): ಬೆಲೆ ಏರಿಕೆಯಿಂದ ಬದುಕು ಕಷ್ಟಕರವಾಗಿದೆ ಎಂದು ಅಳಲು ತೋಡಗೊಂಡಿದ್ದ ರಾಮೇಶ್ವರ ಎಂಬುವರಬನ್ನು ಭೇಟಿ ಮಾಡಿರುವ ರಾಹುಲ್‌ ಗಾಂಧಿ ಅವರೊಂದಿಗೆ ಊಟ ಮಾಡಿ ಸಮಯ ಕಳೆದಿದ್ದಾರೆ. ಇತ್ತೀಚೆಗೆ ಟೊಮೆಟೋ ಬೆಲೆ ತೀರಾ ಏರಿಕೆಯಾಗಿದ್ದ ವೇಳೆ ‘ನನ್ನಿಂದ ಏನೂ ಖರೀದಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದೆ’ ಎಂದು ಮಾಧ್ಯಮವೊಂದರಲ್ಲಿ ಅತ್ತಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು. ಅಲ್ಲದೇ ಸರ್ಕಾರದ ವಿರುದ್ಧ ಹರಿಹಾಯಲು ರಾಹುಲ್‌ ಸೇರಿ ಹಲವು ನಾಯಕರು ಈ ವಿಡಿಯೋ ಹಂಚಿಕೊಂಡಿದ್ದರು. ಈ ವೇಳೆ ತಮಗೆ ರಾಹುಲ್‌ ಗಾಂಧಿಯನ್ನು ನೋಡುವ ಆಸೆಯಿದೆ ಎಂದು ರಾಮೇಶ್ವರ ಹೇಳಿಕೊಂಡಿದ್ದರು. ಅಂತೆಯೇ ಅವರನ್ನು ತಮ್ಮಲ್ಲಿ ಕರೆಸಿಕೊಂಡು ರಾಹುಲ್‌ ಅವರೊಂದಿಗೆ ಊಟ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ (ಟ್ವೀಟರ್‌) ಖಾತೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌ ‘ರಾಮೇಶ್ವರ ಅವರು ಉತ್ಸಾಹಭರಿತ ವ್ಯಕ್ತಿ. ಅವರಲ್ಲಿ ಕೋಟಿಗಟ್ಟಲೆ ಭಾರತೀಯರ ಸೌಹಾರ್ದಯುತ ಸ್ವಭಾವ ಕಾಣಬಹುದು’ ಎಂದಿದ್ದಾರೆ.

ಲೋಕಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಗಂಡನಿಂದಲೇ ಸುಳಿವು

ಈ ಬಗ್ಗೆ ತಮ್ಮ ಎಕ್ಸ್‌ (ಟ್ವೀಟರ್‌) ಖಾತೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌ ‘ರಾಮೇಶ್ವರ ಅವರು ಉತ್ಸಾಹಭರಿತ ವ್ಯಕ್ತಿ. ಅವರಲ್ಲಿ ಕೋಟಿಗಟ್ಟಲೆ ಭಾರತೀಯರ ಸೌಹಾರ್ದಯುತ ಸ್ವಭಾವ ಕಾಣಬಹುದು. ಪ್ರತಿಕೂಲ ಪರಿಸ್ಥಿತಿಯಲ್ಲೂ ನಗುಮುಖದಿಂದ ಮುನ್ನಡೆಯುವವರು ನಿಜವಾಗಿಯೂ ‘ಭಾರತ ಭಾಗ್ಯ ವಿಧಾತ’ ಎಂದು ಗಾಂಧಿ ಬರೆದಿದ್ದಾರೆ.  

ಕಾಂಗ್ರೆಸ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಧಿಕೃತ  ಹಿಂದೆ ಟ್ವಿಟರ್ ಹ್ಯಾಂಡಲ್ ಕೂಡ ರಾಹುಲ್ ಗಾಂಧಿ ತರಕಾರಿ ಮಾರಾಟಗಾರರನ್ನು ಭೇಟಿಯಾದ ಚಿತ್ರಗಳನ್ನು ಹಂಚಿಕೊಂಡಿದೆ. “ರಾಮೇಶ್ವರ್ ಜೀ ಅವರು ಜನನಾಯಕರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅವರು ಭೇಟಿಯಾದರು,” ಎಂದು ಕಾಂಗ್ರೆಸ್ ಹೇಳಿದೆ.

ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಿದರೆ, ಮೋದಿಗೆ ಸೋಲು ಖಚಿತ: ಸಂಜಯ್‌ ರಾವುತ್‌

ಜುಲೈನಲ್ಲಿ, ರಾಮೇಶ್ವರ್ ಅವರ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಹಣದುಬ್ಬರದಿಂದ ತಮ್ಮ ಕಷ್ಟಗಳ ಬಗ್ಗೆ ಮಾತನಾಡುವಾಗ ಅವರು ಕಣ್ಣೀರು ಹಾಕಿದ್ದರು.  ಟೊಮ್ಯಾಟೊ ಬೆಲೆಗಳು ನನ್ನ ಸಾಮರ್ಥ್ಯವನ್ನು ಮೀರಿವೆ. ಖರೀದಿ ಮಾಡಲು ನನಗೆ ಅಗತ್ಯವಾದ ಹಣದ ಕೊರತೆಯಿದೆ ಎಂದಿದ್ದರು.

ನಾವು ಅದನ್ನು ಯಾವ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ನಮಗೆ ಖಚಿತವಾಗಿಲ್ಲ.  ಮಳೆಯಲ್ಲಿ ತೇವಗೊಂಡರೆ ಅಥವಾ ಸ್ಟಾಕ್‌ಗೆ ಏನಾದರೂ ಆದರೆ, ನಮಗೆ ನಷ್ಟವಾಗುತ್ತದೆ ಎಂದು ರಾಮೇಶ್ವರ ಅಳಲು ತೋಡಿಕೊಂಡಿದ್ದರು. ಅವರು ತಮ್ಮ ಚಿಲ್ಲರೆ ಅಂಗಡಿಗೆ ಟೊಮೆಟೊಗಳನ್ನು ಖರೀದಿಸಲು ತಮ್ಮ ಮಗನೊಂದಿಗೆ ರಾಷ್ಟ್ರ ರಾಜಧಾನಿಯ ಆಜಾದ್‌ಪುರ ಮಂಡಿ ಮಾರುಕಟ್ಟೆಗೆ ಭೇಟಿ ನೀಡಿದ್ದರು, ಆದರೆ ಬೆಲೆ ಜಾಸ್ತಿಯಾಗಿ  ಖಾಲಿ ಕೈಗಾಡಿಯೊಂದಿಗೆ ಹಿಂತಿರುಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು
ದೇವಸ್ಥಾನದ ಕಾರ್ತಿಕ ದೀಪದ ಪರವಾಗಿ ತೀರ್ಪು ನೀಡಿದ ಜಡ್ಜ್‌, ಸೇಡು ತೀರಿಸಿಕೊಳ್ಳಲು ಮುಂದಾದ ತಮಿಳುನಾಡು ಸರ್ಕಾರ!