ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಹೆಸರಲ್ಲಿ ಹರಿದಾಡುತ್ತಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ಫೇಕ್

By Kannadaprabha NewsFirst Published Aug 15, 2023, 7:24 AM IST
Highlights

ನಮ್ಮ ಹಕ್ಕುಗಳಿಗಾಗಿ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡಲು ಜನತೆ ಒಂದಾಗಿ ಬೀದಿಗೆ ಬಂದು ಹೋರಾಡಬೇಕು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ ಎಂಬ ಪೋಸ್ಟೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿದೆ.

ನವದೆಹಲಿ: ನಮ್ಮ ಹಕ್ಕುಗಳಿಗಾಗಿ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡಲು ಜನತೆ ಒಂದಾಗಿ ಬೀದಿಗೆ ಬಂದು ಹೋರಾಡಬೇಕು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ ಎಂಬ ಪೋಸ್ಟೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿದೆ. ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸುಪ್ರೀಂಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ, ಇದೊಂದು ಸುಳ್ಳು ಸುದ್ದಿ. ಇದನ್ನು ಹಾಕಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸಾಮಾಜಿಕ ಜಾಲತಾಣ (social Media) ಮತ್ತು ಮೆಸೆಂಜರ್‌ ಆ್ಯಪ್‌ಗಳಲ್ಲಿ (Messeger App) ಮುಖ್ಯ ನ್ಯಾಯಮೂರ್ತಿಗಳ ಹೆಸರಲ್ಲಿ ರವಾನೆಯಾಗಿರುವ ಸಂದೇಶಗಳು ಸಂಪೂರ್ಣ ಸುಳ್ಳು. ಇದು ದುರುದ್ದೇಶದ, ಚೇಷ್ಟೆಯ ವರ್ತನೆ. ಇದನ್ನು ಮುಖ್ಯ ನ್ಯಾಯಮೂರ್ತಿಗಳಾಗಲೀ ಅಥವಾ ಅವರಿಂದ ಅನುಮೋದನೆ ಪಡೆದ ಯಾವುದೇ ವ್ಯಕ್ತಿಗಳಾಗಲೀ ಪ್ರಕಟಿಸಿಲ್ಲ. ಇಂಥ ಪೋಸ್ಟ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಈಗಾಗಲೇ ಸೂಕ್ತ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಸುಪ್ರೀಂಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಸುಳ್ಳುಸುದ್ದಿ ತಡೆಗೆ ತಲೆಯೆತ್ತಲಿದೆ ಸಿಐಡಿ ಘಟಕ: ಫೇಕ್‌ ನ್ಯೂಸ್‌ ಹಾವಳಿಗೆ ಕಡಿವಾಣ ಹಾಕಲು ಸಿಎಂ ಸೂಚನೆ

ಚುನಾವಣಾ ಆಯುಕ್ತರ ನೇಮಕ ಸಮಿತಿಗೆ ಪರಮಾಧಿಕಾರ

ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಂಬಂಧ ರಚಿಸಲು ಉದ್ದೇಶಿಸಲಾಗಿರುವ ಪ್ರಧಾನಿ ನೇತೃತ್ವದ ಸಮಿತಿಗೆ, ಆಯ್ಕೆ ವಿಷಯದಲ್ಲಿ ಪರಮಾಧಿಕಾರ ನೀಡಿರುವ ವಿಷಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ಚುನಾವಣಾ ಆಯುಕ್ತರ (Election commissioner) ನೇಮಕಕ್ಕೆ ಸಮಿತಿ ರಚಿಸುವ ಸಂಬಂಧ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದೆ. ಅದರನ್ವಯ ಸಮಿತಿಯ ಅಧ್ಯಕ್ಷತೆಯನ್ನು ಪ್ರಧಾನಿ ಹೊಂದಿರಲಿದ್ದು, ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ಮತ್ತು ಕೇಂದ್ರ ಸಂಪುಟದ ಓರ್ವ ಸಚಿವರು ಸದಸ್ಯರಾಗಿರುತ್ತಾರೆ. ಆದರೆ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿಗಳನ್ನೂ ಸದಸ್ಯರನ್ನಾಗಿ ಮಾಡಬೇಕು ಎಂಬ ಸುಪ್ರೀಂಕೋರ್ಟ್‌ನ ಇತ್ತೀಚಿನ ಸಲಹೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿತ್ತು. ಅದರ ಬದಲಾಗಿ ಕೇಂದ್ರ ಸಚಿವರಿಗೆ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಇರುವೆ ಕೊಲ್ಲಲು ಸುತ್ತಿಗೆ ಏಕೆ ತರುತ್ತೀರಿ?: ಕೇಂದ್ರಕ್ಕೆ ಬಾಂಬೆ ಹೈ ಕೋರ್ಟ್‌ ಚಾಟಿ

ಇನ್ನು ಮಸೂದೆಯಲ್ಲಿನ ಸೆಕ್ಷನ್‌ 6ರ ಅನ್ವಯ ಸಂಪುಟ ಕಾರ್ಯದರ್ಶಿ ನೇತೃತ್ವದ ಮೂವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿ 5 ಹೆಸರುಗಳನ್ನು ಆಯ್ಕೆ ಸಮಿತಿಗೆ ಶಿಫಾರಸು ಮಾಡಬೇಕು ಎಂದು ಹೇಳಲಾಗಿದೆ. ಆದರೆ ಮಸೂದೆಯಲ್ಲಿನ ಸೆಕ್ಷನ್‌ 8(2)ರ ಅನ್ವಯ, ಶೋಧನಾ ಸಮಿತಿ ಶಿಫಾರಸು ಮಾಡಿದ 5 ಜನರ ಹೆಸರನ್ನು ತಿರಸ್ಕರಿಸಿ ಬೇರೊಬ್ಬ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಆಯ್ಕೆ ಸಮಿತಿಗೆ ನೀಡಲಾಗಿದೆ. ಈ ವಿಷಯ ಮತ್ತೊಂದು ಸುತ್ತಿನಲ್ಲಿ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ.

click me!