
ನವದೆಹಲಿ(ಅ.05): ಜನರ ಪರ ದ್ವನಿ ಎತ್ತೋ ಮೂಲಕ, ಜನರರಿಗಾಗಿ ಹೋರಾಟ ಮಾಡೋ ಮೂಲಕ ರಾಹುಲ್ ಗಾಂಧಿ ಜನರ ವಿಶ್ವಾಸಗಳಿಸಿದ್ದಾರೆ. ಇದು ಫೇಸ್‌ಬುಕ್‌ನಲ್ಲಿ ಜನರ ಎಂಗೇಜ್ಮೆಂಟ್ ಕುರಿತ ವರದಿಯಲ್ಲಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಫೇಸ್‌ಬುಕ್ ಇಂಡಿಯಾ ನೀಡಿದ ವರದಿ ಪ್ರಕಾರ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ವರೆಗಿನ ಅಂಕಿ ಅಂಶದಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತ, ರಾಹುಲ್ ಗಾಂಧಿ ಫೇಸ್‌ಬುಕ್ ಖಾತೆಯಲ್ಲಿ ಶೇಕಡಾ 40 ರಷ್ಟು ಜನರ ಎಂಗೇಜ್ಮೆಂಟ್ ಹೆಚ್ಚಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಗೆದ್ದರೆ ಕೃಷಿ ಕಾಯ್ದೆ ರದ್ದು, ಕಸದ ಬುಟ್ಟಿಗೆ ಎಸೆಯುವೆ'
ಕಳೆದ ಒಂದು ವಾರದಲ್ಲಿ ರಾಹುಲ್ ಗಾಂಧಿ ಹೋರಾಟವನ್ನು ಹೆಚ್ಚು ಜನರು ಬೆಂಬಲಿಸಿದ್ದಾರೆ. ಕಮೆಂಟ್, ಲೈಕ್ಸ್, ಶೇರ್‌ಗಳಲ್ಲಿ ದಾಖಲೆಯ ಶೇಕಡಾ 40 ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವೆರೆಗೆ ರಾಹುಲ್ ಗಾಂಧಿ ಫೇಸ್‌ಬುಕ್ ಖಾತೆಯಲ್ಲಿ 13.9 ಮಿಲಿಯನ್ ಚಟುವಟಿಕೆ ನಡೆದಿದೆ ಎಂದು ಕಾಂಗ್ರೆಸ್ ಹೇಳಿದೆ.
ಹತ್ರಾಸ್ ರೇಪ್ ಕೇಸ್: ಸಂತ್ರಸ್ತೆ ತಾಯಿ ಅಪ್ಪಿಕೊಂಡ ಪ್ರಿಯಾಂಕಾ, ಫೋಟೋ ವೈರಲ್!.
ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಐದು ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದಾರೆ. ಮೋದಿ 45.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 3.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ