ರೈಲು ಟಿಕೆಟ್ ಬುಕ್ ಮಾಡಿದ ಮಹಿಳೆಗೆ ಹಿಂದಿಯಲ್ಲಿ ಸಂದೇಶ: ಭುಗಿಲೆದ್ದ ಭಾಷಾ ಹೇರಿಕೆ ವಿವಾದ!

By Suvarna News  |  First Published Oct 5, 2020, 5:49 PM IST

ಹಿಂದಿ ಭಾಷಾ ಹೇರಿಕೆ ವಿಚಾರವಾಗಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಇತ್ತೀಚೆಗೆ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ರೈಲು ಟಿಕೆಟ್ ಬುಕ್ ಮಾಡಿದ ತಮಿಳುನಾಡಿನ ಮಹಿಳಿಗೆ ಹಿಂದಿಯಲ್ಲಿ ಸಂದೇಶ ಬಂದಿದೆ. ಇದು ವಿವಾದದ ಕಿಡಿ ಹೊತ್ತಿಸಿದೆ.
 


ತಮಿಳುನಾಡು(ಅ.05): ಹಿಂದಿ ಹೇರಿಕೆ ವಿರುದ್ಧ ಮೊದಲಿನಿಂದಲೂ ತಮಿಳುನಾಡು ಭಾರಿ ವಿರೋಧ ವ್ಯಕ್ತಪಡಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಕುರಿತು ನೀಡಿದ ಹೇಳಿಕೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ಈ ವಿವಾದ ಕೊಂಚ ತಣ್ಣಗಾಗುತ್ತಲೇ ಮತ್ತೆ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ಆರಂಭಗೊಂಡಿದೆ. ಇದಕ್ಕೆ ಕಾರಣ  ರೈಲು ಟಿಕೆಟ್ ಬುಕ್ ಮಾಡಿದ ತಮಿಳುನಾಡಿನ ಮಹಿಳೆಗೆ ಹಿಂದಿಯಲ್ಲಿ ಸಂದೇಶ ಬಂದಿತ್ತು. ಇದು ಹಿಂದಿ ಹೇರಿಕೆ ಎಂದು ಪ್ರತಿಭಟನೆ ಆರಂಭಗೊಂಡಿದೆ.

ಹಿಂದಿ ಗೊತ್ತಿಲ್ಲದ್ದಕ್ಕೆ ಸಾಲ ನಿರಾಕರಿಸಿದ್ದ ಬ್ಯಾಂಕ್‌ ಅಧಿಕಾರಿ ಎತ್ತಂಗಡಿ!..

Latest Videos

undefined

ಅಕ್ಟೋಬರ್ 2 ರಂದು ಮಧುರೈನಿಂದ ಚೆನ್ನೈ ತೆರಳಲು ಮುತ್ತುಲಕ್ಷ್ಮಿ ರೈಲು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ಟಿಕೆಟ್ ಖಚಿತೆತೆಯನ್ನು IRCTC ಹಿಂದಿ ಭಾಷೆಯಲ್ಲಿ ಕಳಹುಸಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಡಿಎಂಕೆ ಹಾಗೂ ಪಿಎಂಕೆ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮಹಿಳೆಗೆ ಹಿಂದೆ ಅಥವಾ ಇಂಗ್ಲೀಷ್ ತಿಳಿದಿಲ್ಲ. ಸ್ಥಳೀಯ ಭಾಷೆಯಲ್ಲಿ ಸಂದೇಶ ಕಳುಹಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಹಿಂದೆ ಹೇರಿಕೆ ಮಾಡುತ್ತಿದೆ ಎಂದು ನಾಯಕರು ಆರೋಪ ಮಾಡಿದ್ದಾರೆ.

ಹಿಂದಿ ಹೇರಿಕೆಗೆ ಸುಮಲತಾ ಕಿಡಿ: ಅಧಿವೇಶನದಲ್ಲಿ ಕನ್ನಡ ಪರ ಘರ್ಜಿಸಿದ ರಾಜ್ಯದ ಏಕೈಕ MP

ಡಿಎಂಕೆ ನಾಯಕ ಟಿ ತಂಗಪಾಂಡಿಯನ್ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಟ್ವಿಟರ್ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.  ಹಿಂದಿ ಹೇರಿಕೆ ಇಲ್ಲ ಎಂದಿದ್ದ ಕೇಂದ್ರ ಸದ್ದಿಲ್ಲದೆ ಸ್ಥಳೀಯ ಭಾಷೆಗಳನ್ನು ಕೊಲ್ಲುತ್ತಿದೆ ಎಂದಿದ್ದಾರೆ.

click me!